ಮದುವೆಯಾಗಿ ವರ್ಷ ಕಳೆದರು ನಿರಂಜನ್ ಮಗು ಮಾಡಿಲ್ಲ, ವಿಚಾರ ಕೇಳಿ ಅಪ್ಪಿ ಮುದ್ದಾದಿದ ರಚಿತಾ ರಾಮ್

 | 
Js
ಕನ್ನಡ ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡುತ್ತಾ ಎಲ್ಲರನ್ನೂ ನಕ್ಕು ನಗಿಸುತ್ತಿದ್ದ ನಿರಂಜನ್‌ ದೇಶಪಾಂಡೆ ಅವರು ಮೊದಲ ಬಾರಿಗೆ ವೇದಿಕೆ ಮೇಲೆ ಕಣ್ಣೀರಿಟ್ಟಿದ್ದಾರೆ. ಸದಾ ನಗಿಸುತ್ತಿದ್ದ ನಿರಂಜನ್‌ ಅವರ ಕಣ್ಣೀರು ಕಂಡು ಇಡೀ ಕಾರ್ಯಕ್ರಮದಲ್ಲಿದ್ದವರು ಶಾಕ್‌ ಆಗಿದ್ದಾರೆ. ನಿರಂಜನ್‌ ಅವರ ಬದುಕಿನಲ್ಲಿ ನಡೆದಿರುವಂತಹ ಕಹಿ ಘಟನೆಯೊಂದನ್ನು ಕೊನೆಗೆ ಅವರೇ ಎಲ್ಲರಿಗೂ ರಿವೀಲ್‌ ಮಾಡಿದ್ದಾರೆ. ಇಷ್ಟಕ್ಕೂ ನಿರಂಜನ್‌ ಅವರ ಜೀವನದಲ್ಲಿ ನಡೆದಿರುವ ಆ ನೋವಿನ ವಿಚಾರ ಗೊತ್ತಾದರೆ ಕಣ್ಣೀರು ಹಾಕ್ತೀರಿ.
ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮದಲ್ಲಿ ಫ್ಯಾಮಿಲಿ ರೌಂಡ್‌ ಇದ್ದಿದ್ದರಿಂದ ಎಲ್ಲ ಸ್ಪರ್ಧಿಗಳ ಪೋಷಕರು ಬಂದಿದ್ದರು. ಈ ವೇಳೆ ರವಿಚಂದ್ರನ್‌ ಅವರು ನಿನಗೆ ಫ್ಯಾಮಿಲಿ ಇಲ್ವೇನೋ? ಎಂದು ಕೇಳಿದರು. ಈ ಪ್ರಶ್ನೆಗೆ ನಿರಂಜನ್‌ ಕಣ್ಣೀರಲ್ಲೇ ಉತ್ತರ ನೀಡಿದ್ದಾರೆ. ನಿರಂಜನ್‌ ಅತ್ತಿದ್ದನ್ನು ಕಂಡು ಸ್ಪರ್ಧಿಗಳು ಕೂಡ ಶಾಕ್‌ ಆಗಿದ್ದಾರೆ. ನಾನು ಇವರನ್ನೆಲ್ಲ ನೋಡಿದಾಗ ಪೋಷಕರ ಪ್ರೀತಿ ನನಗೆ ಸಿಕ್ಕಿಲ್ಲವಲ್ಲ ಅಂತ ಬೇಸರವಾಗುತ್ತೆ, ನಾನು ಚಿಕ್ಕವನಿರುವಾಗಲೇ ನಮ್ಮ ತಂದೆ ತಾಯಿ ದೂರವಾದ್ರು, ತಂದೆ ತಾಯಿ ಪ್ರೀತಿ ಹೇಗಿರುತ್ತೆ ಎಂದು ನಾನು ನೋಡೇ ಇಲ್ಲ ಎಂದು ನಿರಂಜನ್ ದೇಶಪಾಂಡೆ ಸಂಕಟ ಹೊರಹಾಕಿದ್ದಾರೆ.
ನಾನು 2ನೇ ತರಗತಿಯಲ್ಲಿ ಇದ್ದಾಗ ಪೋಷಕರು ಬೇರೆಯಾದ್ರು, ನನ್ನನ್ನ ಸಾಕಿ ಬೆಳೆಸಿದ್ದು ನನ್ನ ತಾಯಿ, ಆದ್ರೆ 18ನೇ ವಯಸ್ಸಿಗೆ ತಾಯಿಯಿಂದಲೂ ದೂರ ಆದೆ. ಬಳಿಕ ಫೇಸ್‌ಬುಕ್‌ನಿಂದ ನನ್ನ ತಂದೆ ಬಗ್ಗೆ ತಿಳಿದುಕೊಂಡೆ. ಅವರು ಆಗ ಹುಬ್ಬಳ್ಳಿಯಲ್ಲಿದ್ರು, ಅಲ್ಲಿಗೆ ಹೋಗಿ ನಾನು ಅವರನ್ನು ಮೀಟ್‌ ಮಾಡಿದೆ. ನಮ್ಮ ಮನೆಯಲ್ಲಿ ಎಲ್ಲರೂ ದೂರ ದೂರವೇ ಇದ್ದೀವಿ, ಅಪ್ಪ ಅಮ್ಮ ಚಿಕ್ಕಂದಿನಲ್ಲೇ ಬೇರೆಯಾದ್ರು, ನಮ್ಮಕ್ಕ ಕೂಡ ಈಗ ಸೆಪರೇಟ್ ಆಗಿದ್ದಾರೆ. ನಮ್ಮ ಕುಟುಂಬದಲ್ಲಿ ಸದ್ಯಕ್ಕೆ ಒಟ್ಟಿಗೆ ಇರೋದು ಅಂದ್ರೆ ನಾನು ಮತ್ತು ನನ್ನ ಹೆಂಡತಿ ಮಾತ್ರ ಆರೋಗ್ಯದ ಸಮಸ್ಯೆಯಿಂದ ಮಕ್ಕಳಿಲ್ಲ ಎಂದು ನಿರಂಜನ್‌ ಕಣ್ಣೀರಿಟ್ಟಿದ್ದಾರೆ.
ಜೀವ, ಜೀವನ ಒಂದೇ ಸಲ ಸಿಗುತ್ತೆ, ನಮ್ಮಿಂದ ನಾಲ್ಕು ಜನ ನಗುತ್ತಿದ್ದರೆ, ಬೇರೆಯವರ ನಗುವಿನಲ್ಲಿ ನಾನು ನನ್ನ ನಗುವನ್ನು ಕಾಣುತ್ತೇನೆ. ನನಗೆ ಅದಕ್ಕೆ ದುಖಃ ಆಗಲ್ಲ, ನನ್ನ ಕೊನೆ ಉಸಿರಿರುವವರೆಗೂ ನನ್ನ ಸುತ್ತ ಇರುವವರು ನಗುತ್ತಿರಬೇಕು ಅಷ್ಟೇ ಎಂದು ನಿರಂಜನ್‌ ಹೇಳಿದ್ದಾರೆ. ನಿರಂಜನ್‌ ಮಾತಿಗೆ ಬೇಸರಗೊಂಡ ರವಿಚಂದ್ರನ್‌ ಅವರು ನಿನ್ನಲ್ಲಿ ಎಷ್ಟೊಂದು ನೋವಿದ್ದರೂ ಅದನ್ನೆಲ್ಲ ಒಳಗೆ ಇಟ್ಟುಕೊಂಡು ಎಲ್ಲರನ್ನೂ ನಗಿಸಿಕೊಂಡು ಇರ್ತೀಯ, ನಿನ್‌ ಥರ ಇರೋದು ತುಂಬಾ ಕಷ್ಟ ಕಣೋ ಎಂದಿದ್ದಾರೆ. ನಿನ್ನೊಳಗೆ ಇಷ್ಟೆಲ್ಲ ನೋವಿದೆ. ಈ ರೀತಿ ಬದುಕುವುದು ಸುಲಭವಲ್ಲ, ಖುಷಿ ಇಲ್ಲದೇ ಇದ್ರೂ ಖುಷಿ ಇದೆ ಅಂತ ಹೇಳಿಕೊಂಡು ಇರೋದೆ ಜೀವನ ಎಂದು ಕ್ರೇಜಿ ಸ್ಟಾರ್‌ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.