ಹೃದಯ ಪ್ರೀತಿಯಲ್ಲಿ ಕರಗೋಗಿದೆ ಎಂದ ನಿವೇದಿತಾ, ಹೊಸ ಗೆಳೆಯನ ಎಂಟ್ರಿಗೆ ಗ್ರೀನ್ ಸಿಗ್ನಲ್
Updated: Sep 15, 2024, 16:43 IST
|
ಕನ್ನಡದ ಬಾರ್ಬಿ ಡಾಲ್ ಎಂದೇ ಫೇಮಸ್ ಆಗಿರೋ ನಿವೇದಿತಾ ಗೌಡ ಅವರು ಬಿಗ್‌ಬಾಸ್ ಬಳಿಕ ರೀಲ್ಸ್ ಮಾಡಿಕೊಂಡೇ ಕಾಲ ಕಳೆಯುತ್ತಿದ್ದವರು. ಚಂದನ್ ಶೆಟ್ಟಿ ಜೊತೆಗೆ ಡಿವೋರ್ಸ್ ಬಳಿಕ ನಟಿ ಟ್ರೋಲ್‌ಗೆ ಒಳಗಾಗುತ್ತಲೇ ಇನ್ನಷ್ಟು ಹೆಸರು ಮಾಡಿದ್ದಾರೆ. ಇದೀಗ ನಟಿಯ ಅದೃಷ್ಟ ಖುಲಾಯಿಸಿದಂತೆ ಕಾಣುತ್ತಿದೆ. ಹಲವು ಆಫರ್‌ಗಳು ಬರುತ್ತಿವೆ. ಕೆಲವು ಜಾಹೀರಾತು ಕಂಪೆನಿಗಳೂ ನಟಿಗೆ ಬೇಡಿಕೆ ಇಟ್ಟಿರುವ ನಡುವೆಯೇ ಕಲರ್ಸ್ ವಾಹಿನಿಯಿಂದಲೂ ಬೇಡಿಕೆ ಬಂದಿದೆ.
ಈ ವಾಹಿನಿಯ ಅನುಬಂಧ ಅವಾರ್ಡ್ಗೆ ಆ್ಯಂಕರ್ ಆಗಿದ್ದಾರೆ ನಿವೇದಿತಾ. ಇದಾಗಲೇ ಹಲವು ಟಿ.ವಿ ಸೀರಿಯಲ್ ತಂಡದ ಜೊತೆ ಮಾತನಾಡಿದ್ದು ಅದರ ಪ್ರೊಮೋಗಳು ಒಂದೊಂದಾಗಿ ಬಿಡುಗಡೆಯಾಗುತ್ತಿವೆ. ಇದು ಬಿಡುಡೆಯಾಗುತ್ತಲೇ ಅದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಟ್ರೋಲ್ ಆಗುತ್ತಿದೆ. ಒಟ್ಟಿನಲ್ಲಿ ನಿವೇದಿತಾ ಎಂದರೆ ಟ್ರೋಲ್‌ಗೆ ಇನ್ನೊಂದು ಹೆಸರು ಎನ್ನುವಂತಾಗಿದೆ. ಈ ಟ್ರೋಲ್ಗಳಿಂದಲೇ ತಾವು ಈ ಪರಿಯಲ್ಲಿ ಫೇಮಸ್ ಆಗ್ತಿರೋದು ಎನ್ನುವ ಸತ್ಯ ನಟಿಗೂ ಗೊತ್ತಾಗಿದೆ. ಅದಕ್ಕಾಗಿಯೇ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಮುನ್ನುಗ್ಗುತ್ತಿದ್ದಾರೆ.
https://www.instagram.com/reel/C_2jNUeSOn4/?igsh=MTVib2k5NmVqazBsdg==
ಇದೀಗ ನಿವೇದಿತಾ, ಜವಾನ್ ಚಿತ್ರದ ಇಶ್ಕ್ ಮೇ ದಿಲ್ ಬನಾ ಹೈ, ಇಶ್ಕ್ ಮೇ ದಿಲ್ ಫನಾ ಹೈ ಅಂದರೆ ಹೃದಯವು ಪ್ರೀತಿಯಿಂದ ಮಾಡಲ್ಪಟ್ಟಿದೆ. ನನ್ನ ಹೃದಯವು ಪ್ರೀತಿಯಿಂದ ತುಂಬಿಹೋಗಿದೆ ಎಂಬ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಎಂದಿನಂತೆ ನಟಿ ತಮ್ಮ ಒಂದೆರಡು ಪೋಸ್ಗಳನ್ನು ನೀಡಿದ್ದಾರೆ. ಆದರೆ ಈ ಬಾರಿ ಸೀರೆ ಉಟ್ಟಿರುವುದೇ ವಿಶೇಷ. ಪ್ರತಿ ಬಾರಿಯೂ ನಿವೇದಿತಾ ರೀಲ್ಸ್ ಮಾಡಿದಾಗ ಎದೆಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರುವಿರಾ ಎಂಬ ಪ್ರಶ್ನೆ ಎದುರಾಗುತ್ತದೆ. ಆದರೆ ಇದೀಗ ನಟಿ ಸೀರೆಯಲ್ಲಿ ಸುಂದರವಾಗಿ ಕಾಣಿಸುತ್ತಿದ್ದಾರೆ.
ಇದರ ಹೊರತಾಗಿಯೂ ನೆಟ್ಟಿಗರೇನೂ ಸುಮ್ಮನೇ ಕುಳಿತಿಲ್ಲ. ಚಂದನ್ ಶೆಟ್ಟಿ ಜೊತೆ ಡಿವೋರ್ಸ್ ಬಳಿಕ, ಪ್ರೀತಿ- ಪ್ರೇಮ ಎನ್ನುವಂಥ ರೀಲ್ಸ್ ಹಾಕುವುದು, ಅರೆಬರೆ ಡ್ರೆಸ್ ಹಾಕಿ ದೇಹ ಪ್ರದರ್ಶನ ಮಾಡುವುದು. ಹೀಗೆ ನಿವೇದಿತಾರ ರೀಲ್ಸ್ಗಳು ಇರುವ ಹಿನ್ನೆಲೆಯಲ್ಲಿ, ಚಂದನ್ ಶೆಟ್ಟಿ ಬಳಿಕ ಈಕೆಯ ಲೈಫ್ನಲ್ಲಿ ಯಾರದ್ದೋ ಎಂಟ್ರಿ ಆಗಿದೆ ಎಂದೇ ಹೇಳಲಾಗುತ್ತಿದೆ.ಇದೀಗ ಪ್ರೀತಿ, ಹೃದಯ ಎಂಬೆಲ್ಲಾ ಅರ್ಥ ಬರುವ ರೀಲ್ಸ್ ಮಾಡಿದ್ದರಿಂದ ನಿವೇದಿತಾ ಬಾಳಲ್ಲಿ ಮತ್ತೊಬ್ಬರ ಎಂಟ್ರಿ ಆಗಿದೆ ಎಂದೇ ಹೇಳಲಾಗುತ್ತಿದ್ದು, ಯಾರೀತ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.
ಇದಕ್ಕೂ ಮೊದಲು ನಿವೇದಿತಾ ಮಬ್ಬುಗತ್ತಲಿನಲ್ಲಿ ವಿಚಿತ್ರವಾಗಿ ಕಾಣಿಸ್ತಿರೋ ವಿಡಿಯೋ ಶೇರ್ ಮಾಡಿಕೊಂಡಿದ್ದರು. ಇದರಲ್ಲಿ ಈಕೆ ಕೂದಲನ್ನು ಹಿಡಿದುಕೊಂಡು ಜಗ್ಗುತ್ತಲೇ ಸ್ಟೆಪ್ ಹಾಕಿದ್ದರು. ನಿನ್ನೆಯವರೆಗೂ ಚೆನ್ನಾಗಿದ್ದ ನಟಿಗೆ ಇದೇನಾಯ್ತು ಎಂದು ಫ್ಯಾನ್ಸ್ ಗಾಬರಿ ಬಿದ್ದಿದ್ದರು. ಇದರ ಬಳಿಕ ನಿವೇದಿತಾ ಮತ್ತಷ್ಟು ರೀಲ್ಸ್ ಹಾಕಿರುವ ಕಾರಣದಿಂದ ಈಕೆ ಚೆನ್ನಾಗಿಯೇ ಇದ್ದಾರೆ ಎನ್ನುವುದು ಅಭಿಮಾನಿಗಳ ಸಮಾಧಾನ ಹೊಂದಿದ್ದಾರೆ ಅನ್ನೊದು ಬಿಟ್ಟರೆ ಉಳಿದೆಲ್ಲವೂ ಮೊದಲಿನಂತೆಯೇ ಇದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.