ಕುಡಿದ ಮತ್ತಿನಲ್ಲಿ ಕಂಬ ಏರಿದ ನಿವೇದಿತಾ ಗೌಡ, 2024ಕ್ಕೆ ನಿವೇದಿತಾ ಕಡೆಯಿಂದ ಕೊನೆಯ ಪಾರ್ಟಿ ಅಂತೆ
Jan 7, 2025, 07:51 IST
|
ಹೊಸವರ್ಷ ಆರಂಭವಾಗಿ 5 ದಿನ ಕಳೆದೆ ಹೋಗಿದೆ. ಹೌದು 2025 ಹೊಸ ವರ್ಷ ಆರಂಭವಾಗಿದೆ. ಇದಾಗಲೇ ಹಲವಾರು ಮಂದಿ ತಾವು ಆಚರಿಸಿಕೊಂಡಿರುವ ಹೊಸ ವರ್ಷದ ವಿಡಿಯೋ, ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ, ತಮ್ಮ ಆಚರಣೆಯ ಬಗ್ಗೆ ತಿಳಿಸಿದ್ದಾರೆ. ಇನ್ನು ಸೆಲೆಬ್ರಿಟಿಗಳಂತೂ ವಿವಿಧ ರೀತಿಯಲ್ಲಿ ಆಚರಣೆ ಮಾಡಿದ್ದು, ಅವುಗಳನ್ನು ತಮ್ಮ ಅಭಿಮಾನಿಗಳಿಗಾಗಿ ಶೇರ್ ಮಾಡಿಕೊಂಡಿದ್ದಾರೆ.
ಅದೇ ರೀತಿ, ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ ಕೂಡ ಹೊಸ ವರ್ಷಾಚರಣೆ ಮಾಡಿದ್ದಾರೆ. ಗಾಯಕ ಚಂದನ್ ಶೆಟ್ಟಿ ಅವರಿಂದ ಡಿವೋರ್ಸ್ ಪಡೆದ ಬಳಿಕ ಒಂಟಿಯಾಗಿ ಲೈಫ್ ಸಕತ್ ಎಂಜಾಯ್ ಮಾಡುತ್ತಿದ್ದಾರೆ ನಿವೇದಿತಾ. ಇದಾಗಲೇ ವಿದೇಶಗಳ ಟೂರ್ ಮಾಡುತ್ತಿದ್ದಾರೆ.ನ್ಯೂಯಾರ್ಕ್, ಲಂಡನ್ ಎಂದೆಲ್ಲಾ ಹಲವಾರು ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದೀಗ ಹೊಸ ವರ್ಷದಲ್ಲಿ ವಿಭಿನ್ನ ರೀತಿಯ ಡ್ರೆಸ್ ತೊಟ್ಟು, ಕೈಮೇಲೆ ಟ್ಯಾಟೂ ಹಾಕಿಸಿಕೊಳ್ಳುವ ವಿಡಿಯೋ ಶೇರ್ ಮಾಡಿದ್ದಾರೆ.
https://youtube.com/shorts/Nw2wUydL9Ws?si=ApF_Tjk456Av0PM5
ಇದು ಯಾವ ದೇಶದಲ್ಲಿ ಎನ್ನುವುದನ್ನು ನಿವೇದಿತಾ ಹೇಳದಿದ್ದರೂ ನಿನ್ನೆಯಷ್ಟೇ ಲಂಡನ್ನ ವಿಡಿಯೋ ಶೇರ್ ಮಾಡಿದ್ದರಿಂದ ಬಹುಶಃ ಅಲ್ಲಿಯದ್ದೇ ಇರಬಹುದು ಎನ್ನುತ್ತಿದ್ದಾರೆ ಇವರ ಫ್ಯಾನ್ಸ್. ಆದರೆ ಅವುಗಳಿಗಿಂತಲೂ ಭಿನ್ನವಾಗಿ ಎಲ್ಲರ ಗಮನ ಹೋಗಿದ್ದು, ಅವರು ಕಂಬ ಏರಿರೋ ವಿಷಯ. ನಟಿ, ಸಹಜವಾಗಿ ನೃತ್ಯ ಮಾಡುತ್ತಾ ಅಲ್ಲಿರುವ ಕಂಬ ಏರಿದ್ದಾರೆ. ಆದರೆ ತರ್ಲೆ ಕಮೆಂಟಿಗರು ಸುಮ್ಮನೆ ಇರಬೇಕಲ್ಲಾ? ಹೊಸ ವರ್ಷದ ನಶೆ ಏರಿರಬೇಕು, ಅದಕ್ಕೇ ತಿಳಿಯದೇ ನಟಿ ಕಂಬ ಏರಿ ಬಿಟ್ಟಿದ್ದಾರೆ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ.
ನಶೆ ಇಳಿದ ಮೇಲೆಯೇ ಕೆಳಗೆ ಇಳಿದಿರಬೇಕು ಎಂದೆಲ್ಲಾ ಅವರ ಕಾಲೆಳೆಯುತ್ತಿದ್ದಾರೆ. ಇನ್ನು ಇದೀಗ ಕ್ರಿಸ್ಮಸ್ ಆಚರಿಸಲು ವಿದೇಶಕ್ಕೆ ಹೋಗಿರುವ ಕಾರಣದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ್ರಾ ಎಂದು ಪ್ರಶ್ನಿಸುತ್ತಿದ್ದಾರೆ. ಬಳಿಕ ಲಂಡನ್ನಲ್ಲಿರೋ ವಿಡಿಯೋ ಶೇರ್ ಮಾಡಿದ ಮೇಲಂತೂ ನಿವೇದಿತಾ ಪರವಾಗಿ ಮಹಿಳೆಯರು ಬ್ಯಾಟಿಂಗ್ ಮಾಡಲು ಶುರು ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.