ಗಂಡನಿಗಾಗಿ ಹೊಸ ರೀತಿಯ ರೀಲ್ಸ್ ಮಾಡಿದ ನಿವೇದಿತಾ ಗೌಡ;
May 27, 2024, 16:33 IST
|
ಪ್ರತಿ ವೀಕೆಂಡ್‌ನಲ್ಲೂ ಗಿಚ್ಚಿ ಗಿಲಿ ಗಿಲಿ ಶೋ ಮೂಲಕ ವೀಕ್ಷಕರನ್ನು ನಗಿಸುವ ನಟಿ ನಿವೇದಿತಾ ಗೌಡ, ಆಗಾಗ ಬೇರೆ ಬೇರೆ ಕಾರಣಕ್ಕೂ ಸುದ್ದಿಯಲ್ಲಿರುತ್ತಾರೆ. ಅವರು ಮಾಡುವ ಸಣ್ಣ ಪುಟ್ಟ ಎಡವಟ್ಟುಗಳಿಂದಲೇ ಫೇಮಸ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹವಾ ಎಬ್ಬಿಸುವ ನಿವೇದಿತಾ ಗೌಡ ಇದೀಗ ಮತ್ತೆ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಹೊಸ ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಿದ್ದಾರೆ.
ಅಷ್ಟಕ್ಕೂ ನಿವೇದಿತಾ ಗೌಡ ರಿಯಾಲಿಟಿ ಶೋಗಳ ರಾಣಿ ಎಂದರೂ ತಪ್ಪಾಗಲಾರದೇನೊ. ಸುಮಾರು 5ಕ್ಕೂ ಅಧಿಕ ರಿಯಾಲಿಟಿ ಶೋಗಳಲ್ಲಿ ನಿವೇದಿತಾ ಗೌಡ ಅವರು ಭಾಗವಹಿಸಿದ್ದಾರೆ. ಒಂದಲ್ಲ ಒಂದು ವೀಡಿಯೋಗಳನ್ನು ಮಾಡಿ ಯೂಟ್ಯೂಬ್‌ನಲ್ಲಿ ಹರಿಬಿಡುವ ನಟಿ ನಿವೇದಿತಾ ಗೌಡ ಯಾವುದಾದರೂ ಒಂದು ವಿಚಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತಾರೆ.
https://www.instagram.com/reel/C7JW4uWp5T5/?igsh=MTc4MmM1YmI2Ng==
ಚಂದನ್ ಮತ್ತು ನಿವೇದಿತಾ ಮದುವೆ ಆಗಿ ಎರಡು ವರ್ಷ ಆಯ್ತು. 2020ರಲ್ಲಿ ಫೆಬ್ರವರಿ 26ರಂದು ಈ ಜೋಡಿ ಕುಟುಂಬಸ್ಥರು, ಗುರುಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದರು. ಇನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ದಿನಚರಿಯಿಂದ ಹಿಡಿದು ಪ್ರತಿಯೊಂದು ವಿಚಾರದ ಬಗ್ಗೆಯೂ ವೀಡಿಯೋ ಮಾಡುತ್ತಿರುತ್ತಾರೆ. ಇತ್ತೀಚೆಗೆ ಅವರ ಸಾಕು ನಾಯಿಗಳ ಬಗ್ಗೆ ಹಾಗೂ ತಾವು ಬಳಸುವ ಲಿಪ್ ಸ್ಟಿಕ್ ಬಗ್ಗೆಯೂ ವೀಡಿಯೋ ಮಾಡಿದ್ದರು. ವೀಡಿಯೋ ಮಾಡುವಾಗಿಯೇ ಅಡುಗೆ ಮನೆಗೂ ಎಂಟ್ರಿ ಕೊಟ್ಟ ನಿವೇದಿತಾ ಗೌಡ, ಬಿರಿಯಾನಿಯನ್ನೂ ಮಾಡಿದ್ದರು.
ಅದರಲ್ಲೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಾಡಿದ ಬಿರಿಯಾನಿಯ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನಿವೇದಿತಾ ರಾಜಾ ರಾಣಿ, ಬಿಗ್ ಬಾಸ್ ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಇತ್ತೀಚಿಗೆ ಬಾರ್ಬಿ ಡಾಲ್ ರೀತಿ ಆಗಾಗ ಡ್ರೆಸ್ ಮಾಡಿಸಿಕೊಂಡು ಫೋಟೋಶೂಟ್ ಗಳನ್ನು ಮಾಡಿಸಿದ್ದಾರೆ. ಇತ್ತೀಚೆಗೆ ಪರ್ಪಲ್ ಕಲರ್ ಡ್ರೆಸ್‌ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋವನ್ನು ನೋಡಿದ ಅಭಿಮಾನಿಗಳು, ಕ್ಯೂಟ್ ಗೊಂಬೆ, ಮುದ್ದು ಹುಡುಗಿ, ಚೆಂದ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಅವರ ಅಂದಕ್ಕೆ ಮನಸೋತು ಹೋಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.