ಇಬ್ಬರ ‌ನಡುವಿನ ಆ ಸಂಬಂಧವನ್ನು ಬಿಚ್ಚಿಟ್ಟ ನಿವೇದಿತಾ ಗೌಡ, ಚಂದನ್ ಶೆಟ್ಟಿಗೆ ಡಿವೋರ್ಸ್ ಕೊಟ್ಟಿದ್ದು ಇದೇ ಕಾರಣಕ್ಕೆ

 | 
Nki
ಸ್ನೇಹಿತೆ ವಾಣಿಯ ಜೊತೆಗೆ ಪದೇ ಪದೇ ರೀಲ್ಸ್​ ಮಾಡುತ್ತಿರುವ ನಿವೇದಿತಾ ಗೌಡ ಈಗ ಆಕೆಯ ಜೊತೆಗಿನ ಸಂಬಂಧದ ಬಗ್ಗೆ ಬರೆದು ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ. ಇಷ್ಟು ದಿನ ಒಂಟಿಯಾಗಿಯೋ ಅಥವಾ ಆಗ ಪತಿಯಾಗಿದ್ದ ಚಂದನ್​ ಶೆಟ್ಟಿ ಜೊತೆಗೋ ರೀಲ್ಸ್​ ಮಾಡುತ್ತಿದ್ದ ನಿವೇದಿತಾ ಗೌಡ ಇದೀಗ ಸ್ನೇಹಿತೆಯೊಬ್ಬರ ಜೊತೆ ರೀಲ್ಸ್​ ಮಾಡುತ್ತಿದ್ದಾರೆ. 
ಹಲವು ರೀಲ್ಸ್​ಗಳಲ್ಲಿ ಇಬ್ಬರೂ ಸುಖಾಸುಮ್ಮನೆ ಜೋರಾಗಿ ನಕ್ಕಿದ್ದು ಬಿಟ್ಟರೆ ಇನ್ನೇನೂ ಇರುವುದಿಲ್ಲ. ಆದರೆ ಪ್ರತಿಬಾರಿ ಇವರ ಈ ಹೊಸ ಗೆಳತಿಯ ಬಗ್ಗೆ ಫ್ಯಾನ್ಸ್​ ತಲೆಕೆಡಿಸಿಕೊಳ್ಳುತ್ತಲೇ ಇರುತ್ತಾರೆ. ವಾಣಿ ಅವರು ಕೂಡ ಸೋಷಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಅವರು ಇನ್​ಸ್ಟಾಗ್ರಾಮ್​ನಲ್ಲಿ ಇದಾಗಲೇ ಹಲವಾರು ರೀಲ್ಸ್​ ಮಾಡಿ ಶೇರ್​ ಮಾಡಿದ್ದಾರೆ. 
ಇದೀಗ ಅವರು ನಿವೇದಿತಾ ಜೊತೆ ರೀಲ್ಸ್​ ಮಾಡುವುದು ಹೆಚ್ಚಾಗುತ್ತಿದೆ. ಇದೀಗ ವಾಣಿ ಅವರ ಹುಟ್ಟುಹಬ್ಬಕ್ಕೆ ಅವರಿಗೆ ವಿಶ್​ ಮಾಡಿದ್ದಾರೆ ನಿವೇದಿತಾ. ಇದರಲ್ಲಿ ವಾಣಿ ನಿವೇದಿತಾಗೆ ಹೂವು ಕೊಟ್ಟು ಪ್ರಪೋಸ್​ ಮಾಡಿದ್ದರೆ, ನಿವೇದಿತಾ ಶೀರ್ಷಿಕೆಯಲ್ಲಿ ಇಡೀ ಜಗತ್ತಿನಲ್ಲಿ ನನ್ನ ಆತ್ಮೀಯ ಗೆಳೆತಿಗೆ ಹುಟ್ಟುಹಬ್ಬದ ಶುಭಾಶಯಗಳು.... ನೀನು ತುಂಬಾ ಸುಂದರವಾಗಿದ್ದೀಯ, ಆದರೆ ಅದೇ ಸಮಯದಲ್ಲಿ ತುಂಬಾ ಮೂರ್ಖನಾಗಿದ್ದೀಯ... ನಿನ್ನೊಂದಿಗೆ ನಾನು ಯಾವಾಗಲೂ ನಗುತ್ತಿದ್ದೇನೆ... ನೀನು ನನ್ನ ಹೆಂಡತಿಯಂತೆ ಎಂದಿದ್ದಾರೆ.
ಅಷ್ಟಕ್ಕೂ, ವಿಚ್ಛೇದನದ ಬಳಿಕ, ನಿವೇದಿತಾ ಮೇಲೆ ಕೋಪ ಮಾಡಿಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಪತಿ ಚಂದನ್​ ಶೆಟ್ಟಿ ಅವರಿಂದ ನಿವೇದಿತಾ ವಿಚ್ಛೇದನ ಪಡೆದ ಮೇಲೆ ಬಹುತೇಕ ಎಲ್ಲರೂ ನಿವೇದಿತಾ ಅವರನ್ನೇ ದೂರುತ್ತಿದ್ದಾರೆ. ಚಂದನ್​ ಶೆಟ್ಟಿ ತುಂಬಾ ಒಳ್ಳೆಯವರು, ಅವರ ಜೀವನ ಹಾಳು ಮಾಡಿಬಿಟ್ಟೆ ಎಂದೆಲ್ಲಾ ಸೋಷಿಯಲ್​ ಮೀಡಿಯಾದಲ್ಲಿ ಬೈಗುಳಗಳ ಸುರಿಮಳೆಯಾಗುತ್ತಲೇ ಇದೆ. 
ಇವರಿಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ನಿಜವಾದರೂ ಅದರಲ್ಲಿ ನಿವೇದಿತಾ ಅವರದ್ದೇ ತಪ್ಪಿದೆ ಎನ್ನುವುದು ಚಂದನ್​ ಶೆಟ್ಟಿ ಅಭಿಮಾನಿಗಳ ಮಾತು. ಇದೇ ಕಾರಣಕ್ಕೆ, ನಿವೇದಿತಾ ಅವರ ವಿಡಿಯೋ ಕಂಡಾಗಲೆಲ್ಲಾ ಅವರ ವಿರುದ್ಧ ಕಮೆಂಟ್​ಗಳೇ ಹರಿದಾಡುತ್ತಿವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.