ರಾತ್ರಿ ಮಲಗುವುದಕ್ಕೆ ಭಯ ಆಗುತ್ತೆ ಎಂದ ನಿವೇದಿತಾ ಗೌಡ; ಗಂಡ ಚಂದನ್ ಶೆಟ್ಟಿ ಶಾ.ಕ್

 | 
Uu

ಕನ್ನಡ ಕಿರುತೆರೆಯ ಬಾರ್ಬಿ ಡಾಲ್ ನಿವೇದಿತಾ ಗೌಡ ಯೂಟ್ಯೂಬ್‌ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಧೂಳ್ ಎಬ್ಬಿಸುತ್ತಿದ್ದಾರೆ. ಡಯಟ್‌, ಬ್ಯೂಟಿ ಟಿಪ್ಸ್‌, ಸ್ಕಿನ್‌ ಕೇರ್, ಹೇರ್‌ ಕೇರ್ ಮತ್ತು ಟ್ರ್ಯಾವಲ್‌ ವಿಡಿಯೋ ಅಪ್ಲೋಡ್ ಮಾಡುತ್ತಿರುವ ಸುಂದರಿ ಇದೀಗ A Night in my Life ಹೇಗಿರುತ್ತದೆ ಎಂದು ತೋರಿಸಿದ್ದಾರೆ. ಒಬ್ಬರೇ ಮನೆಯಲ್ಲಿದ್ದರೆ ಏನೆಲ್ಲಾ ಸಿಂಪಲ್ ಅಡುಗೆ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. 

ನೈಟ್‌ ನನಗೆ ನಿದ್ರೆ ಬರೋಲ್ಲ ಅಂತ ನಿಮಗೆ ಗೊತ್ತಿದೆ. ರಾತ್ರಿ ನಾನು ಸರಿಯಾಗಿ ನಿದ್ರೆ ಮಾಡುವುದಿಲ್ಲ ಎಲ್ಲಾ ಸೀರಿಸ್‌ನ ನೋಡಿ ನೋಡಿ ಮುಗಿಸಿರುವೆ. ನನಗೆ ಇಷ್ಟವಾದ ಸೀರಿಸ್‌ನ ಈಗಾಗಲೆ 12-13 ಸಲ ನೋಡಿರುವೆ ಮತ್ತೆ ಅದೇ ನೋಡಿದ್ದರೆ ಚಂದನ್‌ ನನ್ನನ್ನು ಮನೆಯಿಂದ ಹೊರ ಹಾಕುತ್ತಾರೆ. ಮೊಬೈಲ್‌ನಲ್ಲಿ ಏನಾದರೂ ಹುಡುಕಿ ನೋಡಬೇಕು ಏನೂ ಇಲ್ಲ ಅಂದ್ರೆ ಇನ್‌ಸ್ಟಾಗ್ರಾಂ ನೋಡಬಹುದು ಎಂದೇಳುವ ಮೂಲಕ ನಿವಿ ವಿಡಿಯೋ ಆರಂಭಿಸಿದ್ದಾರೆ.

ಇವತ್ತು ಮನೆಯಲ್ಲಿ ಯಾರೂ ಇಲ್ಲ ಒಬ್ಬಳೆ ಇದ್ರೆ ನಾನು ಫುಲ್ ನಿದ್ರೆ ಮಾಡುವುದಿಲ್ಲ ಬೇರೆ ಅವರದ್ದು ದಿನ ಹೇಗಿರುತ್ತೆ ಹಾಗೆ ನನ್ನ ರಾತ್ರಿ ಇರುತ್ತೆ. ಮನೆಯಲ್ಲಿ ಚಂದನ್ ಇದ್ರೆ ನಾನು ಫುಲ್ ಸೇಫ್‌ ಆಗಿರುತ್ತೀನಿ ನನ್ನವರು ಮನೆಯಲ್ಲಿದ್ದಾರೆ ಅಂತ. ಮನೆಯಲ್ಲಿ ಯಾರೂ ಇಲ್ಲ ಅಂದ್ರೆ ಭಯ ಭಯ ಆಗುತ್ತೆ. ಇಡೀ ಮನೆ ಲೈಟ್‌ ಹಾಕಿ ಓಡಾಡುತ್ತಿರುತ್ತೀನಿ, ಇಲ್ಲಿ ಸೇಫ್‌ ಇದೆ ಅಲ್ಲಿ ಸೇಫ್‌ ಇದೆ ಅಂತ ಇಡೀ ಮನೆನ ಚೆಕ್ ಮಾಡುತ್ತೀನಿ.  ಇವತ್ತು ನಾನು ತುಂಬಾ ಬ್ಯುಸಿಯಾಗಿದ್ದೆ ಗಿಚ್ಚಿ ಗಿಲಿಗಿಲಿ ಶೋ ಇತ್ತು. ರಾತ್ರಿ ರೆಸ್ಟ್‌ ಮಾಡಬೇಕು ಅಂದ್ರು ನಿದ್ರೆ ಬರ್ತಿಲ್ಲ ಎಂದು ನಿವೇದಿತಾ ಮಾತನಾಡಿದ್ದಾರೆ.

ನನ್ನ ತಾಯಿ ಅಂದ್ರೆ ನನಗೆ ಸಿಕ್ಕಾಪಟ್ಟೆ ಇಷ್ಟ. ಮದುವೆಗೂ ಮುನ್ನ ಒಂದು ದಿನವೂ ಮನೆಯಿಂದ ಹೊರಗೆ ತಾಯಿ ಕಳುಹಿಸಿಲ್ಲ. ಕಳ್ಳರ ಭಯದಿಂದ ನನ್ನನ್ನು ಸದಾ ಮನೆಯಲ್ಲಿ ಕೂಡಿ ಹಾಕುತ್ತಿದ್ದರು. ಮಗಳು ಹೊರಗಡೆ ಹೋದಾಗ ಯಾರಾದರೂ ಬಂದು ಎತ್ತಿಕೊಂಡು ಹೋಗಬಹುದು ಅನ್ನೋ ಭಯ ಇತ್ತು. ನೀನು ಎಲ್ಲೇ ಹೋಗಬೇಕಿದ್ದರೂ ಮದ್ವೆ ಆದ ಮೇಲೆ ಹೋಗು ಎನ್ನುತ್ತಿದ್ದರು. ಹೀಗಾಗಿ ಫ್ರೀಡಂ ಬೇಕು ಎಂದು ಮದುವೆ ಮಾಡಿಕೊಂಡೆ ಎಂದು ನಿವೇದಿತಾ ಮಾತನಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.