ಮದುವೆಯಾದ ಬಳಿಕ ಮಗು ಇಲ್ಲ, ಜೀವನಕ್ಕೆ ಅರ್ಥ ಇಲ್ಲ, ಗಂಡನ ಜೊತೆ ಡಿ ವೋರ್ಸ್ ಗೆ ಕಾರಣ ಕೊಟ್ಟ ಪ್ರೇಮಾ

 | 
Js
ಬಹುಭಾಷಾ ನಟಿ ಪ್ರೇಮಾ ಕನ್ನಡದಲ್ಲಿ ಮತ್ತೆ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದಾರೆ. ಆಗೊಂದು ಈಗೊಂದು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ 'ರಾಜೇಶ್ ಗೌಡ' ಯೂಟ್ಯೂಬ್ ಚಾನಲ್ ಪಾಡ್‌ಕಾಸ್ಟ್‌ನಲ್ಲಿ ಪ್ರೇಮಾ ಭಾಗಿ ಆಗಿದ್ದರು. ತಮ್ಮ ವೈಯಕ್ತಿಕ ಜೀವನ ಹಾಗೂ ಸಿನಿಮಾ ಜರ್ನಿ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಸಿನಿಕರಿಯರ್‌ನ ಉತ್ತುಂಗದಲ್ಲಿ ಇದ್ದಾಗಲೇ ಜೀವನ್ ಅಪ್ಪಚ್ಚು ಎಂಬುವವರ ಜೊತೆ ಪ್ರೇಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಕೆಲ ಭಿನ್ನಾಭಿಪ್ರಾಯಗಳಿಂದ 2016ರಲ್ಲಿ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ತಮ್ಮ ಮದುವೆ ಹೇಗೆ ಕುದುರಿತು, ಬಳಿಕ ವೈಯಕ್ತಿಕ ಜೀವನದಲ್ಲಿ ಏನಾಯ್ತು? ಇಬ್ಬರೂ ದೂರಾಗುವ ನಿರ್ಧಾರಕ್ಕೆ ಬಂದಿದ್ದು ಯಾಕೆ? ಎನ್ನುವ ಬಗ್ಗೆ ಸಂದರ್ಶನದಲ್ಲಿ ಪ್ರೇಮಾ ಮಾತನಾಡಿದ್ದಾರೆ.
ಆ ಸಮಯದಲ್ಲಿ ನನಗೆ ಸರಿಯಾಗಿ ಅವಕಾಶಗಳು ಸಿಗುತ್ತಿರಲಿಲ್ಲ. ಮನೆಯಲ್ಲಿ ಮದುವೆ ಆಗುವಂತೆ ಒತ್ತಾಯಿಸಿದರು. ನನ್ನ ತಂಗಿ 7 ವರ್ಷಗಳಿಂದ ಪ್ರೀತಿಸುತ್ತಿದ್ದಳು. ಹಾಗಾಗಿ ನಿನ್ನ ಮದುವೆ ಆಗದಿದ್ದರೆ ತಂಗಿ ಮದುವೆ ಆಗಲ್ಲ ಎಂದು ಅಪ್ಪ- ಅಮ್ಮ ಹೇಳುತ್ತಿದ್ದರು. ಹಾಗಾಗಿ ಬೇಡ ಎನ್ನಲು ಸಾಧ್ಯವಾಗದೇ ಮದುವೆಗೆ ಒಪ್ಪಿಕೊಂಡೆ. ನಮ್ಮದು ಅರೇಂಜ್ಡ್ ಮ್ಯಾರೇಜ್" ಎಂದು ಪ್ರೇಮಾ ಹೇಳಿದ್ದಾರೆ.
ಜೀವನ್ ಅಪ್ಪಚ್ಚು ಅವರೊಟ್ಟಿಗೆ ಮದುವೆ ಆಗಲು ಕಾರಣ ಏನು? ಎನ್ನುವ ಪ್ರಶ್ನೆಗೆ ಅವರು ಮನೆಗೆ ಬರುತ್ತಿದ್ದರು. ನಾನೇ ಮದುವೆ ಮಾಡಿಕೊಳ್ಳುತ್ತೀನಿ ಎಂದು ಕೇಳಿದರು. ಆಮೇಲೆ ಎಲ್ಲರೂ ಒಪ್ಪಿದರು. ನಮ್ಮ ಮನೆಗೆ ಅವರ ಮನೆ ಹತ್ತಿರ ಇತ್ತು. ಹಾಗಾಗಿ ನಾನು ಅಮ್ಮನ ಮನೆಗೆ ಹೋಗಿ ಬಂದು ಮಾಡಬಹುದು. ಅವರನ್ನು ನೋಡಿಕೊಳ್ಳಬಹುದು ಎಂದು ಅನ್ನಿಸಿ ಮದುವೆಗೆ ಒಪ್ಪಿಕೊಂಡೆ ಎಂದಿದ್ದಾರೆ.
ಮದುವೆ ಅನ್ನೋದು ಕಮೀಟ್‌ಮೆಂಟ್. ಜವಾಬ್ದಾರಿ. ಇಬ್ಬರದ್ದು ಸರಿ ತಪ್ಪು ಇದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕು. ಆದರೆ ನನಗೆ ಮದುವೆ ಬಳಿಕ ಸ್ವಾತಂತ್ರ ಇರಲಿಲ್ಲ ಅನಿಸಿತು. ಅವೆಲ್ಲವೂ ನನ್ನನ್ನು ಕಡಿದಂತಾಗುತ್ತಿತ್ತು. ನನ್ನ ಅನುಭವ ನೋಡಿದ ಮೇಲೆ, ಎಲ್ಲಾ ಹೆಣ್ಣು ಮಕ್ಕಳಿಗೆ ಹೇಳುವುದು ಒಂದೇ ಸಮಯ ತೆಗೆದುಕೊಂಡು ಯೋಚಿಸಿ. ತಕ್ಷಣ ನಿರ್ಧಾರಕ್ಕೆ ಬರಬೇಡಿ ಎಂದು ತನ್ನ ವೈಯಕ್ತಿಕ ಜೀವನದ ಅನುಭವಗಳನ್ನು ಮುಕ್ತವಾಗಿ ಹೇಳಿದ್ದಾರೆ.
News Hub