ಇನ್ನುಮುಂದೆ ಪತ್ನಿಯ ಅನುಮತಿ ಪಡೆಯದೆ ಆ ಕೆಲಸ ಮಾಡುವಂತಿಲ್ಲ, ಹೈಕೋರ್ಟ್ ಮಹತ್ವದ ಆದೇಶ

 | 
Hs

ಅತ್ಯಾಚಾರ ಅದು ಯಾರು ಮಾಡಿದ್ರೂ ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುವುದು. ಗಂಡ ತನ್ನ ಹೆಂಡತಿಯನ್ನು ಬಲವಂತವಾಗಿ ಲೈಂಗಿಕ ಕ್ರಿಯೆಗೆ ಎಳೆದರೆ ಅದನ್ನು ಕೂಡ ಅತ್ಯಾಚಾರ ಎಂದು ಹೇಳಲಾಗುವುದು ಎಂದು ಗುಜರಾತ್​​​​ ಹೈಕೋರ್ಟ್​​​ ಹೇಳಿದೆ. ಇತ್ತಿಚಿಗೆ ದೇಶದಲ್ಲಿ ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ಹೆಚ್ಚಾಗಿದೆ. 

ಇದನ್ನು ಬದಲಾವಣೆ ಮಾಡಬೇಕಿದೆ ಎಂದು ಗುಜರಾತ್​​​​ ಹೈಕೋರ್ಟ್​​​ನ ನ್ಯಾಯಮೂರ್ತಿ ದಿವ್ಯೇಶ್ ಜೋಶಿ ಹೇಳಿದ್ದಾರೆ. ಈ ಕಾರಣಕ್ಕೆ ವೈವಾಹಿಕ ಅತ್ಯಾಚಾರವನ್ನು ಕೂಡ ಅಪರಾಧ ಎಂದು ಪರಿಗಣಿಸಬೇಕಿದೆ ಎಂದು ಹೇಳಿದೆ. ಹೊರದೇಶಗಳಾದ ಅಮೇರಿಕ, ಆಸ್ಟ್ರೇಲಿಯ, ನ್ಯೂಜಿಲೆಂಡ್, ಕೆನಡಾ, ಇಸ್ರೇಲ್​ನಲ್ಲೂ ವೈವಾಹಿಕ ಅತ್ಯಾಚಾರವನ್ನು ಕಾನೂನುಬಾಹಿರ ಎಂದು ಹೇಳಿದೆ.

ಪತ್ನಿಯ ಮೇಲೆ ಪತಿ ಬಲವಂತದ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದರೆ ಅದು ಅಪರಾಧ ಎಂದು ಒಪ್ಪಿಕೊಳ್ಳುತ್ತಿರಲಿಲ್ಲ. ಆದರೆ ನಾನು ಇದನ್ನು ಅಪರಾಧ ಎಂದು ಒಪ್ಪಿಕೊಳ್ಳುವೆ ಎಂದು ಹೇಳಿದ್ದಾರೆ. ನ್ಯಾಯಮೂರ್ತಿ ದಿವ್ಯೇಶ್ ಜೋಶಿ ಅವರು ಹೇಳಿರುವಂತೆ ಭಾರತದಲ್ಲಿ ಮಹಿಳೆ ಮೇಲೆ ದೌರ್ಜನ್ಯ ಹೆಚ್ಚಾಗಿದೆ. 

ಇದು ಸಾಮಾಜಿಕ ನೆಲೆಯಲ್ಲಿ ಮಹಿಳೆಯನ್ನು ಬದಕಲು ಬಿಡುತ್ತಿಲ್ಲ ಎಂದು ಹೇಳಿದ್ದಾರೆ. ಮಹಿಳೆ ಮೇಲೆ ಮಾನಸಿಕವಾಗಿ ಅಥವಾ ದೈಹಿಕವಾಗಿ ಹಿಂಸೆ ನೀಡಿದರೆ ಅದು ದೊಡ್ಡ ಅಪರಾಧವಲ್ಲ ಎಂದು ಹೇಳುತ್ತೇವೆ. ಆದರೆ ಇದು ವಿಷಾದನೀಯ ಎಂದು ಹೇಳಿದ್ದಾರೆ.

ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೇಲೆ ಬಲವಂತದ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಇದರ ಜತೆಗೆ ಮಹಿಳೆಯ ಅತ್ತೆ ಕೂಡ ಇದಕ್ಕೆ ಸಾಥ್ ನೀಡಿದ್ದಾಳೆ ಎಂದು ದೂರು ದಾಖಲಿಸಲಾಗಿತ್ತು. ಇದನ್ನು ಗುಜರಾತ್​​​​ ಹೈಕೋರ್ಟ್​​​ ವಿಚಾರಣೆ ನಡೆಸುವ ವೇಳೆ ಈ ಅಂಶವನ್ನು ಹೇಳಿದೆ. 

ಮಹಿಳೆ ದೂರಿನಲ್ಲಿ ತನ್ನ ಪತಿ ನನಗೆ ಲೈಂಗಿಕ ಕಿರುಕುಳ ಹಾಗೂ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿ, ನನ್ನ ನಗ್ನ ಫೋಟೋಗಳನ್ನು ಅಶ್ಲೀಲ ಸೈಟ್​​​ಗಳಿಗೆ ಅಪ್ಲೋಡ್​​​​​​ ಮಾಡಲು ಮುಂದಾಗಿದ್ದಾರೆ ಎಂದು ತಿಳಿಸಿದ್ದಾಳೆ. ಇದನ್ನು ವಿಚಾರಣೆ ನಡೆಸಿದ ಹೈಕೋರ್ಟ್​​​​​, ಇದು ಅತ್ಯಾಚಾರ ಎಂದು ಪರಿಗಣಿಸಿ ಗಂಡ ಮತ್ತು ಅತ್ತೆಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಮಾತ್ರವಲ್ಲ ಅವರಿಗೆ  ದಂಡ ವಿಧಿಸಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.