ತಿರುಪತಿಯಲ್ಲಿ ಸಿಸಿಟಿವಿ ದೃಶ್ಯ ನೋಡಿ ಅಧಿಕಾರಿಗಳೇ ಒಂದು ಕ್ಷಣ ಶಾ ಕ್, ರಾತ್ರೋರಾತ್ರಿ ಕ್ರಮ ಕೈಗೊಂಡ ಆಂದ್ರ ಸಿಎಮ್

 | 
Hx
ತಿರುಪತಿಯಲ್ಲಿ ಬುಧವಾರ ರಾತ್ರಿ ಭೀಕರ ಕಾಲ್ತುಳಿತ ಸಂಭವಿಸಿದ್ದು ಸುಮಾರು ಆರು ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 40ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ತಿರುಪತಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈಕುಂಠ ಏಕಾದಶಿ ಪ್ರಯುಕ್ತ ದರ್ಶನಕ್ಕೆ ಟೋಕನ್ ಪಡೆಯುವುದಕ್ಕಾಗಿ ಕೌಟಂರ್‌ ಬಳಿ ಭಕ್ತರು ಸರದಿ ನಿಂತಿದ್ದರು. ಸರದಿಯಲ್ಲಿದ್ದ ಮಹಿಳೆ ಅಸ್ವಸ್ಥರಾದ ಕಾರಣ ಅವರಿಗೆ ನೆರವಾಗುವುದಕ್ಕೆ ಪೊಲೀಸರು ಗೇಟ್ ತೆರೆದ ಕೂಡಲೇ ನೂಕು ನುಗ್ಗಲು ಉಂಟಾಗಿ ಈ ದುರಂತ ಸಂಭವಿಸಿತು ಎಂದು ಹೇಳಲಾಗುತ್ತಿದೆ.
ಹೌದು.. ಬುಧವಾರ ತಿರುಪತಿಯಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಆರು ಜನರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳು ತಿರುಪತಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಮಗಾದ ಕರಾಳ ಅನುಭವವನ್ನು ಸಂತ್ರಸ್ಥರು ತೆರೆದಿಟ್ಟಿದ್ದಾರೆ.ಈ ಕುರಿತು ಮಾತನಾಡಿರುವ ಡಿ ವೆಂಕಟ ಲಕ್ಷ್ಮಿ ಎಂಬ ಸಂತ್ರಸ್ಥರು, 'ನಾನು ಕಳೆದ 25 ವರ್ಷಗಳಿಂದ ಪವಿತ್ರ ತಿರುಪತಿ ದೇವಸ್ಥಾನಕ್ಕೆ ಬರುತ್ತಿದ್ದೇನೆ. 
ಎಂದಿಗೂ ಈ ರೀತಿ ಸಂಭವಿಸಿರಲಿಲ್ಲ. ಆದರೆ ನಿನ್ನೆ ನನ್ನ ಜೀವನದ ಅಂತ್ಯ ಎಂದು ಭಾವಿಸಿದ್ದೆ. ಐದು ನಿಮಿಷಗಳಲ್ಲಿ ಎಲ್ಲ ಆಗಿ ಹೋಯಿತು. ಐದು ನಿಮಿಷಗಳಲ್ಲಿ ನಾವು ಸತ್ತೇ ಹೋಗುತ್ತೇವೆ ಎಂದು ಭಾವಿಸಿದ್ದೆ ಎಂದು ಹೇಳಿದ್ದಾರೆ.ವೈಕುಂಠ ದರ್ಶನ ಟೋಕನ್ ಗಾಗಿ ನಾವು ಸರತಿ ಸಾಲಿನಲ್ಲೇ ನಿಂತಿದ್ದೆವು. ಆದರೆ ದಿಢೀರನೆ ನೂಕು ನುಗ್ಗಲು ಉಂಟಾಯಿತು. ಈ ವೇಳೆ ನಾನು ನಿಯಂತ್ರಣ ತಪ್ಪಿ ಕೆಳಗೆ ಬಿದ್ದೆ. ನನ್ನ ಅಕ್ಕಪಕ್ಕದಲ್ಲಿದ್ದವರೂ ಕೂಡ ಕೆಳಗೆ ಬಿದ್ದರು. ಆ ಕ್ಷಣ ನನ್ನ ಜೀವನದ ಅಂತಿಮ ಕ್ಷಣ ಎಂದು ಭಾವಿಸಿದ್ದೆ. ಆದರೆ ನಾನು ಕೆಳಗೆ ಬೀಳುತ್ತಲೇ ನನ್ನ ಪಕ್ಕದಲ್ಲಿದ್ದ ಪುರುಷರು ನನ್ನನ್ನು ಪಕ್ಕಕ್ಕೆ ಎಳೆದು ತಂದರು.
ಬಳಿಕ ನನಗೆ ಕುಡಿಯಲು ನೀರು ಕೊಟ್ಟರು. ನನ್ನ ಪಕ್ಕದಲ್ಲೇ ಕನಿಷ್ಠ 10 ಮಂದಿ ಪ್ರಜ್ಞೆ ಇಲ್ಲದೆ ಬಿದ್ದಿದ್ದರು. ನಾವೆಲ್ಲರೂ ಬೀಳುತ್ತಿದ್ದೇವೆ ಎಂದು ಕೂಗಿದರೂ ಯಾರಿಗೂ ಕೇಳಿಸದ ಪರಿಸ್ಥಿತಿ ಅದು. ಹಿಂದಿನಿಂದ ಜನರು ನೂಕುತ್ತಿದ್ದರು. ಕೆಳಗೆ ಬಿದ್ದವರ ಮೇಲೆ ಜನ ನಡೆಯುತ್ತಿದ್ದರು. ನನಗೆ ಬಹಳ ಹೊತ್ತು ಉಸಿರಾಡಲು ಸಹ ಸಾಧ್ಯವಾಗಲಿಲ್ಲ, ಪೊಲೀಸರು ಸರಿಯಾದ ಸರತಿ ಸಾಲು ನಿಲ್ಲಿಸಿದ್ದರೆ ಅನಾಹುತ ತಪ್ಪಿಸಬಹುದಿತ್ತು ಎಂದು ಹೇಳಿದ ಅವರು. 'ಜನರಿಗೆ ಏನಾಗುತ್ತಿದೆ ಎಂದು ಅರ್ಥವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.