ಒಂದು ಕಾಲದಲ್ಲಿ ಪ್ರೀತಿ ಎಂಬ ಹೆಸರಲ್ಲಿ ನನ್ನ ನುಂಗಿ ನೀರು ಕುಡಿದಿದ್ದ ಆತ; ನಮೃತಾ ಗೌಡ
Feb 20, 2025, 19:27 IST
|

ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ನಮ್ರತಾ, ನನ್ನ ಜೀವನದಲ್ಲೂ ಒಂದು ಬಾರಿ ಪ್ರೀತಿ ಆಗಿತ್ತು. ಇಲ್ಲಿಯವರೆಗೂ ಅದೇ ಮೊದಲು ಮತ್ತು ಕೊನೆಯ ಪ್ರೀತಿಯಾಗಿ ಉಳಿದುಕೊಂಡಿದೆ. ಆಗಷ್ಟೆ ಎಸ್‌ಎಸ್‌ಎಲ್‌ಸಿ ಮುಗಿಸಿ ಪಿಯುಸಿಗೆ ಕಾಲಿಟ್ಟಿದ್ದೆ. ಒಂದು ಹುಡುಗ ನನ್ನ ಹಿಂದೆ ಬಿದ್ದು ತುಂಬಾ ಕಾಡಿಸಿ ನನ್ನನ್ನು ಪ್ರೀತಿಸಿದ್ದ. ಮೊದಮೊದಲು ನಂಗೆ ಅವನನ್ನ ಕಂಡರೆ ಇಷ್ಟ ಆಗುತ್ತಿರಲಿಲ್ಲ. ಆಮೇಲೆ ಒಪ್ಪಿಕೊಂಡೆ.
ನಮ್ಮ ಕಾಲೇಜ್‌ನಲ್ಲಿ ನಮ್ಮ ಲವ್ ಸ್ಟೋರಿ ತುಂಬಾ ಫೇಮಸ್ ಆಗಿತ್ತು. ಆಗ ನಾವಿಬ್ಬರು ತುಂಬಾ ಚಿಕ್ಕವರು. ಪಿಯುಸಿ ಆದ ತಕ್ಷಣ ನಾನು ಈ ಇಂಡಸ್ಟ್ರೀಗೆ ಬಂದೆ. ಅವರಿಗೆ ಟೈಮ್ ಕೊಡೋಕೆ ಆಗುತ್ತಿರಲಿಲ್ಲ. ಆದರೆ ಅದೇ ಕಾರಣಕ್ಕೆ ಅವರು ನನ್ನಿಂದ ದೂರ ಸರಿದರು ಎಂದು ಹೇಳಿಕೊಂಡಿದ್ದಾರೆ.
ನಾನು ಬೇಕು ಅಂತ ಅವರೇ ನನ್ನ ಹಿಂದೆ ಬಿದ್ದಿದ್ದರು. ಪ್ರೀತಿ ಮಾಡಿದೆ ಅನ್ನೋ ಒಂದೇ ಕಾರಣಕ್ಕೆ, ನನ್ನ ಜೀವನದಲ್ಲಿ ನೀನು ಇರಬೇಕು' ಅಂತ ತುಂಬಾ ಒತ್ತಾಯ ಮಾಡುತ್ತಿದ್ದೆ. ಮದುವೆಯಾಗಬೇಕು ಅಂತೆಲ್ಲಾ ಅಂದುಕೊಂಡಿದ್ದೆ. ಸಮಯ ಕಳೆಯುತ್ತಿದ್ದಂತೆಯೇ ನಾನು ಪ್ರೀತಿ ಮಾಡುತ್ತಿದ್ದ ಹುಡುಗ ಬದಲಾಗುತ್ತಾ ಹೋದರು.
ತುಂಬಾ ಕುಗ್ಗಿದ್ದೆ, 6 ತಿಂಗಳ ಕಾಲ ಡಿಪ್ರೆಸ್ಡ್ ಆಗಿದ್ದೆ. ಅಂತೂ ಕಷ್ಟ ಪಟ್ಟು ಆ ಸಂಬಂಧದಿಂದ ಹೊರ ಬಂದೆ ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Fri,16 May 2025
ಕುಡಿದು ಗಲಾಟೆ ಮಾಡಿದ ತಂದೆ, ಚೈತ್ರ ಕುಂದಾಪುರ ಮನೆ ಮುಂದೆ ರಂಪಾಟ
Thu,15 May 2025