ನಿರ್ದೇಶಕನ ತ.ಲೆ ತಂದವರಿಗೆ ಸಿಗುತ್ತಾ ಒಂದು ಕೋಟಿ, ಏನಿದು ಆಫರ್

 | 
Bs

ಸೋಷಿಯಲ್‌ ಮೀಡಿಯಾದಲ್ಲಿ ಸದಾ ಒಂದಿಲ್ಲೊಂದು ಟೀಕೆ, ಟಿಪ್ಪಣಿ, ವಿವಾದಗಳ ಮೂಲಕವೇ ಸುದ್ದಿಯಲ್ಲಿರುವ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ, ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಒಂದು ಕಾಲದಲ್ಲಿ ಸಿನಿಮಾ ನಿರ್ಮಾಣದ ಫ್ಯಾಕ್ಟರಿ ಎಂದೇ ಕರೆಸಿಕೊಳ್ಳುತ್ತಿದ್ದ ಈ ನಿರ್ದೇಶಕ ಇದೀಗ ಸಿನಿಮಾಗಳ ಜತೆಗೆ ಕಾಂಟ್ರವರ್ಸಿಯಲ್ಲಿಯೂ ಮುಂದುವರಿಯುತ್ತಿದ್ದಾರೆ. 

ಇದೀಗ ಇನ್ನೊಂದು ವಿವಾದ ಇವರ ಹೆಗಲೇರಿದೆ. ತೆಲಂಗಾಣ ಚುನಾವಣೆ ಮುಗಿದಿದೆ. ಇತ್ತ ಆಂಧ್ರಪ್ರದೇಶಲ್ಲೂ ಚುನಾವಣೆಗೆ ಹೆಚ್ಚು ಸಮಯ ಉಳಿದಿಲ್ಲ. ಈ ವೇಳೆ ತೆಲುಗು ನಾಡಲ್ಲಿ ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಅದಕ್ಕೆ ಕಾರಣ; ರಾಮ್‌ ಗೋಪಾಲ್‌ ವರ್ಮಾ ಅವರ ವ್ಯೂಹಂ ಸಿನಿಮಾ. ಈ ಸಿನಿಮಾದಲ್ಲಿನ ಸನ್ನಿವೇಶಗಳೇ ಇದೀಗ ವಿವಾದಕ್ಕೆ ಕಾರಣವಾಗಿವೆ. 

ಅದೇನೆಂದರೆ, ರಾಮ್‌ ಗೋಪಾಲ್‌ ವರ್ಮಾ ಅವರ ತಲೆ ಕಡಿದು ತಂದವರಿಗೆ 1 ಕೋಟಿ ರೂ. ಬಹುಮಾನ ಘೋಷಣೆ ಮಾಡಲಾಗಿದೆ. ವ್ಯೂಹಂ ಸಿನಿಮಾದಲ್ಲಿ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರನ್ನು ಅವಮಾನಿಸುವ ರೀತಿಯಲ್ಲಿ ತೋರಿಸಲಾಗಿದೆ ಎಂದು ಟಿಡಿಪಿ ಮತ್ತು ಜನಸೇನಾ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. 

ಇದೇ ವೇಳೆ ಟಿಡಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಚಿತ್ರ ಬಿಡುಗಡೆಗೆ ತಡೆ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸದ್ಯ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಇತ್ತ ಇದೇ ತಿಂಗಳ 29ಕ್ಕೆ ವ್ಯೂಹಂ ಸಿನಿಮಾ ಬಿಡುಗಡೆಯಾಗಲಿದೆ ಎಂದು ಆರ್‌ಜಿವಿ ಘೋಷಿಸಿದ ಬೆನ್ನಲ್ಲೇ, ಟಿಡಿಪಿ ಮತ್ತು ಜನಸೇನೆ ಸಿನಿಮಾ ಬಿಡುಗಡೆಗೆ ತಡೆಯೊಡ್ಡಲು ಹರಸಾಹಸ ಮಾಡುತ್ತಿದೆ. 

ಈ ಮಧ್ಯೆ, ಸುದ್ದಿ ವಾಹಿನಿಯಲ್ಲಿ ಚರ್ಚೆಗೆ ಕುಳಿತ ಅಮರಾವತಿ ಚಳವಳಿಯ ನಾಯಕ ಕೊಲಿಕಿ ಪುಡಿ ಶ್ರೀನಿವಾಸ ರಾವ್, ಆರ್‌ಜಿವಿ ವಿರುದ್ಧ ಮಾತಿನ ಚಾಟಿ ಬೀಸಿದ್ದಾರೆ. ರಾಮ್‌ಗೋಪಾಲ್‌ ಅವರ ತಲೆಯನ್ನು ಕತ್ತರಿಸಿ ತಂದವರಿಗೆ ಒಂದು ಕೋಟಿ ರೂ. ಬಹುಮಾನ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.