ಕ್ರಿಕೆಟರ್ ಮಾಡಿದ ಕೆಲಸಕ್ಕೆ ನಮ್ಮೆಲ್ಲರ ನೆಚ್ಚಿನ ನ.ಟಿ ಗರ್ಭಿಣಿ

 | 
ಪಾ

ಸಿನಿಮಾಗಳಂತೆ ಕೆಲವು ನಟ ನಟಿಯರ ಜೀವನ ಬಹಳ ನೋವಿನಿಂದ, ಕುತೂಹಲದಿಂದ ಕೂಡಿರುತ್ತದೆ. ಕೆಲವೊಂದಿಷ್ಟು ಬಹಿರಂಗವಾದರೆ ಇನ್ನೂ ಕೆಲವೊಂದಿಷ್ಟು ಅವರ ಮನದಲ್ಲಿಯೇ ಉಳಿದುಕೊಂಡಿರುತ್ತವೆ. ಈ ಪೈಕಿ ನಟಿಯೊಬ್ಬರು ಕ್ರಿಕೆಟಿಗನ ಪ್ರೀತಿಯ ಬಲೆಗೆ ಬಿದ್ದು, ಮದುವೆಯಾಗದೇ ಗರ್ಭಿಣಿಯಾಗಿ ಮಗುವಿನ ಜನ್ಮ ನೀಡಿದ್ದರು. ಅಷ್ಟಕ್ಕೂ ಆ ನಟಿ ಯಾರು ಅಂತ ಗೊತ್ತಾದ್ರೆ ಹುಬ್ಬೇರಿಸೋದು ಗ್ಯಾರಂಟಿ.

ಹಿರಿಯ ನಟಿ ನೀನಾ ಗುಪ್ತಾ ಅವರ ವೈಯಕ್ತಿಕ ಜೀವನ ಬಹಳ ರೋಚಕ. 80ರ ದಶಕದಲ್ಲಿ, ನಟಿ ಎಲ್ಲರಿಗೂ ಆಘಾತ ನೀಡುವ ನಿರ್ಧಾರವನ್ನು ತೆಗೆದುಕೊಂಡಿದ್ದರು. ಅದರ ನಂತರ, ಅವರು ಮದುವೆಯಿಲ್ಲದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಅವರ ಈ ನಿರ್ಧಾರಕ್ಕೆ ಕುಟುಂಬಸ್ಥರು ಕೂಡ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಹೌದು.. ಬಾಲಿವುಡ್‌ನ ಹಿರಿಯ ನಟಿ ನೀನಾ ಗುಪ್ತಾ ಮದುವೆಯಾಗದೇ ಗರ್ಭಿಣಿಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಅದಕ್ಕಾಗಿಯೇ ಅನಿಸುತ್ತೆ ಅವರು ಇಂದಿಗೂ ತಮ್ಮ ನೇರ ಮತ್ತು ಸ್ಪಷ್ಟ ಮಾತುಗಳಿಂದ ಜನಮನದಲ್ಲಿ ಉಳಿದಿದ್ದಾಳೆ.ರ್

ವೆಸ್ಟ್ ಇಂಡೀಸ್ ಕ್ರಿಕೆಟಿಗ ವಿವಿಯನ್ ರಿಚರ್ಡ್ ಜೊತೆ ನೀನಾ ಗುಪ್ತಾ ಅಫೇರ್ ಹೊಂದಿದ್ದರು. ವಿವಿಯನ್‌ಗೆ ಮುಂಚೆಯೇ ಮದುವೆಯಾಗಿದ್ದ ಕಾರಣ ನೀನಾಳನ್ನು ಮದುವೆಯಾಗಲು ಅವರು ನಿರಾಕರಿಸಿದರು. ವಿವಿಯನ್ ಮದುವೆಗೆ ಬೇಡ ಅಂದ್ರೂ ಸಹ ನೀನಾ ತನ್ನ ಗರ್ಭಾವಸ್ಥೆಯನ್ನು ಮುಂದುವರೆಸಿದ್ದರು.

ತಾನು ಗರ್ಭಿಣಿಯಾಗಿದ್ದಾಗಿ ವಿವಿಯನ್‌ಗೂ ಸಹ ತಿಳಿಸಿದ್ದರಂತೆ. ಇನ್ನು ನೀನಾಗೂ ಸಹ ಈ ಮಗು ಬೇಕಿತ್ತು. ಅದಕ್ಕಾಗಿ ಅವರು ಸಮಾಜದ ನಾಲ್ಕು ಜನರ ಬಗ್ಗೆ ಯೋಚಿಸದೆ ತನ್ನ ಮತ್ತು ತನ್ನ ಭವಿಷ್ಯದ ಮಗುವಿನ ಬಗ್ಗೆ ಯೋಚಿಸಿ 1989 ರಲ್ಲಿ ಮಸಾಬಾ ಎಂಬ ಹೆಣ್ಣು ಮಗುವಿಗೆ ಜನ್ಮ ನೀಡಿ ಸಿಂಗಲ್ ಪೇರೆಂಟ್ ಆಗಿ ಬೆಳೆಸಿದರು. 

ಅವರ ಈ ನಿರ್ಧಾರವನ್ನು ಕುಟುಂಬಸ್ಥರು ವಿರೋಧಿಸಿದ್ದರೂ ಸಹ ಅವರ ತಂದೆ ಅವರ ನಿರ್ಧಾರವನ್ನು ಬೆಂಬಲಿಸಿದರು ಎಂದು ನಟಿ ನೀನಾ ಸಂದರ್ಶನವೊಂದರಲ್ಲಿ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.