ಪಾರು ಸೀರಿಯಲ್ ನಟಿ ಅನುಷ್ಕಾ ನಿಶ್ಚಿತಾರ್ಥ, ಹುಡುಗನನ್ನು ನೋಡಿದ್ರೆ ಪಕ್ಕಾ ಶಾ ಕ್ ಆಗ್ತೀರಾ

 | 
ಕಾ
 ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪಾರು' ಧಾರಾವಾಹಿಯಲ್ಲಿ ಅನುಷ್ಕಾ ಆಗಿ ಅಭಿನಯಿಸಿದ್ದ ಮಾನ್ಸಿ ಜೋಶಿ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಹೌದು, ಕಿರುತೆರೆ ನಟಿ ಮಾನ್ಸಿ ಜೋಶಿ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ನಿನ್ನೆಯಷ್ಟೇ ರಾಘವ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಮಾನ್ಸಿ ಜೋಶಿ.
ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಮಾನ್ಸಿ ಜೋಶಿ ತಮ್ಮ ಎಂಗೇಜ್‌ಮೆಂಟ್ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಹೌದು, ಎಂಗೇಜ್‌ಮೆಂಟ್‌ನ ಒಂದಷ್ಟು ಪೋಟೋಗಳನ್ನು ಹಂಚಿಕೊಂಡಿರುವ ಮಾನ್ಸಿ ಜೋಶಿ 'M/R forever, ಮಾನಸಿಯ ರಾಘವ" ಎಂದು ಬರೆದುಕೊಂಡಿದ್ದಾರೆ.
ಅಂದ ಹಾಗೇ ಮಾನ್ಸಿ ಅವರ ಕೈ ಹಿಡಿಯುತ್ತಿರುವ ರಾಘವ ಅವರು ಯಾರು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಹೊರಬಂದಿಲ್ಲ. ಇನ್ನು ಮಾನ್ಸಿ ಅವರು ನೇರಳೆ ಬಣ್ಣದ ಸಾರಿಯನ್ನು ಧರಿಸಿದ್ದರೆ ಅವರ ಭಾವಿ ಪತಿ ರಾಘವ್ ಅವರು ನೇರಳೆ ಬಣ್ಣದ ಶರ್ಟ್‌ನಲ್ಲಿ ಮಿಂಚಿದ್ದಾರೆ. ಒಟ್ಟಿನಲ್ಲಿ ಈ ಮುದ್ದಾದ ಜೋಡಿ ಕಂಡು ಕಿರುತೆರೆ ವೀಕ್ಷಕರು ಹಾಗೂ ನೆಟ್ಟಿಗರು ಫಿದಾ ಆಗಿದ್ದಾರೆ.
ಸದ್ಯ ಮಲಯಾಳಂನ 'ಚಂದ್ರಕಲಲೆಯುಮ್ ಚಂದ್ರಕಾಂತಮ್' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ಮಾನ್ಸಿ ಜೋಶಿ ಅವರ ನಟನಾ ಪಯಣ ಶುರುವಾಗಿದ್ದು 'ಬಿಳಿ ಹೆಂಡ್ತಿ' ಧಾರಾವಾಹಿಯ ಮೂಲಕ. ಹೌದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬಿಳಿ ಹೆಂಡ್ತಿ' ಧಾರಾವಾಹಿಯಲ್ಲಿ ರಮ್ಯಾ ಆಗಿ ಅಭಿನಯಿಸಿದ್ದ ಈಕೆ ಮೊದಲ ಧಾರಾವಾಹಿಯಲ್ಲಿಯೇ ಖಳನಾಯಕಿಯಾಗಿ ಮೋಡಿ ಮಾಡಿರುವ ಬೆಡಗಿ ಇವಳಾಗಿದ್ದಾಳೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.