ದರ್ಶನ್ ಸಫಾರಿಗೆ ಎಂಟ್ರಿ ಕೊಟ್ಟ ಪವಿತ್ರ ಗೌಡ, ಉರಿದು ಬಿದ್ದ ವಿಜಯಲಕ್ಷ್ಮಿ
Jun 22, 2025, 21:05 IST
|

ಎಲ್ಲರಿಗೂ ಗೊತ್ತಿರುವ ಹಾಗೆ ದರ್ಶನ್ ಆಪ್ತೆಯೂ ಆಗಿರುವ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನ ದರ್ಶನ್, ಪವಿತ್ರಾ ಹಾಗೂ ಇನ್ನಿತರರು ಸೇರಿ ಪಟ್ಟಣಗೆರೆ ಶೆಡ್‌ನಲ್ಲಿ ಕೊಲೆ ಮಾಡಿರುವ ಆರೋಪವಿದೆ. ಇದೇ ಕೇಸ್‌ನಲ್ಲಿ ಇಬ್ಬರೂ ಕೂಡ ಅರೆಸ್ಟ್ ಆಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಬಳಿಕ ದರ್ಶನ್ ಅವರನ್ನ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಹಲವು ತಿಂಗಳ ಕಾಲ ಇಬ್ಬರೂ ಸೆರೆವಾಸದಲ್ಲೇ ಇದ್ದರು. ಬಳಿಕ ಜಾಮೀನು ಸಿಕ್ಕಿದ್ದರಿಂದ ಕೆಲ ತಿಂಗಳ ಹಿಂದೆ ಜೈಲಿಂದ ರಿಲೀಸ್ ಆಗಿದ್ರು. ಅಚ್ಚರಿ ಎಂದರೆ ಜಾಮೀನು ಸಿಕ್ಕ ನಂತರ ಇವರಿಬ್ಬರ ನಡುವೆ ಮಾತುಕತೆಯೂ ಇರಲಿಲ್ಲ.
ಮೊದಲಿನಿಂದಲೂ ಪರಿಚಯ ಇದ್ದ ಇವರು ಒಂದೇ ಕೇಸ್‌ನಲ್ಲಿ ಜೈಲು ಸೇರಿದ ನಂತರ ಅಂತರ ಕಾಯ್ದುಕೊಂಡಿದ್ದು ಎಲ್ಲರ ಅಚ್ಚರಿಗೂ ಕಾರಣವಾಗಿತ್ತು. ಕೋರ್ಟ್ ವಿಚಾರಣೆಗೆ ಹಾಜರಾಗುವ ಸಂದರ್ಭದಲ್ಲಿ ಮಾತ್ರವೇ ಇಬ್ಬರು ಮುಖಾಮುಖಿಯಾಗುತ್ತಿದ್ದರು. ಆದರೆ ಯಾವುದೇ ಮಾತುಕತೆ ಇರುತ್ತಿರಲಿಲ್ಲ. ಹೀಗಾಗಿ ದರ್ಶನ್ ಪವಿತ್ರಾ ಗೌಡ ಅವರ ಮೇಲೆ ಮುನಿಸಿಕೊಂಡಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಇದೀಗ ದರ್ಶನ್ ಅವರ ಅಡ್ಡಾ ಎಂದೇ ಕರೆಯಲ್ಪಡುವ ಜಾಗದಲ್ಲಿ ಪವಿತ್ರಾ ಗೌಡ ಕಾಣಿಸಿಕೊಂಡಿದ್ದಾರೆ. ಅದೂ ಬೆಂಗಳೂರಿನಲ್ಲಿರುವ ಜಾಗದಲ್ಲೇ.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ "ಸ್ಟೋನಿ ಬ್ರೂಕ್" ರೆಸ್ಟೋರೆಂಟ್ ನಟ ದರ್ಶನ್ ಅವರ ಅಡ್ಡಾ ಎಂದೇ ಕರೆಯಲಾಗುತ್ತದೆ. ಏಕೆಂದರೆ ದರ್ಶನ್ ಅವರು ಈ ರೆಸ್ಟೋರೆಂಟ್‌ಗೆ ಹೆಚ್ಚಾಗಿ ಭೇಟಿ ನೀಡಿ, ಪಾರ್ಟಿಗಳನ್ನು ಮಾಡುತ್ತಿದ್ದರು. ಮತ್ತೊಂದು ವಿಶೇಷ ಅಂದ್ರೆ ಇದೇ ರೆಸ್ಟೋರೆಂಟ್‌ನಲ್ಲಿ ದರ್ಶನ್ ಅವರ ನೆನಪಿನಲ್ಲಿ ಡಿಬಾಸ್ ಸಫಾರಿ ಎನ್ನುವ ವಿಶೇಷ ಮಿನಿ ಮ್ಯೂಸಿಯಂ ಕೂಡ ಇದೆ. ಇದರಲ್ಲಿ ಪ್ರಾಣಿಪ್ರಿಯರೂ ಆದ ದರ್ಶನ್ ಅವರು ಸೆರೆಹಿಡಿದಿದ್ದ ಅಪರೂಪದ ವನ್ಯಜೀವಿ ಫೋಟೋಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇದನ್ನು ದರ್ಶನ್ ಅವರೇ ಉದ್ಘಾಟಿಸಿದ್ದರು. ಅಲ್ಲಿಗೆ ಪವಿತ್ರಾ ಗೌಡ ಹೋಗಿದ್ದರು.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Mon,7 Jul 2025