ಕೇರಳದ ಕೊಟ್ಟಿಯೂರ್ ದೇವಾಲಯದಲ್ಲಿ ನಟ ದರ್ಶನ್, ಇತ್ತ ಬಾವುಕ ಫೋಟೋ ಹಂಚಿಕೊಂಡ ಪವಿತ್ರ ಗೌಡ

 | 
Kk
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ವಾಸ ಅನುಭವಿಸಿ ಬಂದ ಬಳಿಕ ದರ್ಶನ್ ತೂಗುದೀಪ ಅವರಿಗೆ ದೈವ ಭಕ್ತಿ ಹೆಚ್ಚಾಗಿದೆ. ಪದೇ ಪದೇ ದೇವಾಲಯಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಕೆಲ ತಿಂಗಳ ಹಿಂದಷ್ಟೆ ಕೇರಳದಲ್ಲಿ ಶತ್ರು ಸಂಹಾರ ಹೋಮ ಮಾಡಿಸಿದ್ದ ದರ್ಶನ್, ಈಗ ಮತ್ತೊಮ್ಮೆ ಕೇರಳದ ಪ್ರಮುಖ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಕೇರಳದ ಕೊಟ್ಟೆಯೂರು ದೇವಾಲಯಕ್ಕೆ ನಟ ದರ್ಶನ್ ಭೇಟಿ ನೀಡಿದ್ದಾರೆ. ಆತ್ಮೀಯ ಧನ್ವೀರ್ ಗೌಡ ಹಾಗೂ ಕುಟುಂಬದ ಜೊತೆಗೆ ನಟ ದರ್ಶನ್ ಕೊಟ್ಟೆಯೂರು ದೇವಾಲಯಕ್ಕೆ ದರ್ಶನ್ ಭೇಟಿ ನೀಡಿದ್ದಾರೆ. ಇದು ಶಿವ ದೇವಾಲಯವಾಗಿದ್ದು, ದಕ್ಷಿಣ ಕಾಶಿ ಎಂದೇ ಈ ಸ್ಥಳವನ್ನು ಕರೆಯಲಾಗುತ್ತದೆ. ವಿಜಯಲಕ್ಷ್ಮಿ, ಧನ್ವೀರ್ ಅವರುಗಳ ಜೊತೆಗೆ ನಟ ದರ್ಶನ್ ಈ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ದರ್ಶನ್ ಹಾಗೂ ಅವರ ಕುಟುಂಬ ಭೇಟಿ ನೀಡಿರುವ ಈ ಕೊಟ್ಟೆಯೂರು ದೇವಾಲಯ ಧಾರ್ಮಿಕ ಮಹತ್ವ ಹೊಂದಿರುವ ದೇವಾಲಯ ಆಗಿದೆ. ಈಗ ದರ್ಶನ್ ಭೇಟಿ ನೀಡಿರುವ ದೇವಾಲಯ ವರ್ಷದಲ್ಲಿ ಕೇವಲ ಮೂವತ್ತು ದಿನ ಮಾತ್ರವೇ ತೆರೆದಿರುತ್ತದೆ. ಕೊಟ್ಟೆಯೂರುನಲ್ಲಿ ಎರಡು ದೇವಾಲಯಗಳಿಗೆ ಅಕ್ಕರೆ ಕೊಟ್ಟೆಯೂರು ಮತ್ತು ಇಕ್ಕರೆ ಕೊಟ್ಟೆಯೂರು ಎಂದು. ಈಗ ದರ್ಶನ್ ಭೇಟಿ ನೀಡಿರುವುದು ಅಕ್ಕರೆ ಕೊಟ್ಟೆಯೂರು, ಇಲ್ಲಿ ವೈಶಾಖ ಮಾಸದಲ್ಲಿ ಮಾತ್ರ ಪೂಜೆ ನಡೆಯುತ್ತದೆ. ಇದೇ ಕಾರಣಕ್ಕೆ ಜೂನ್ 8 ರಿಂದ ಜುಲೈ 4 ರವರೆಗೆ ಮಾತ್ರ ಈ ದೇವಾಲಯ ತೆರೆದಿರುತ್ತದೆ. ಜೂನ್ 30ರ ಬಳಿಕ ಮಹಿಳೆಯರ ಪ್ರವೇಶಕ್ಕೆ ನಿಷೇಧ ಹೇರಲಾಗುತ್ತದೆ
ಹಲವು ಧಾರ್ಮಿಕ ಮಹತ್ವ ಹೊಂದಿರುವ ದೇವಾಲಯ ಇದಾಗಿದ್ದು, ಈಗ ವಿಶೇಷ ಪೂಜೆಗಳು ನಡೆಯುತ್ತಿದ್ದು ದರ್ಶನ್, ಕುಟುಂಬ ಸಮೇತರಾಗಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇದೇ ವರ್ಷ ಮಾರ್ಚ್ ತಿಂಗಳಲ್ಲಿ ಕೇರಳದ ಕಣ್ಣೂರಿನ ಬಳಿ ಪಡೆಕಾವು ಶ್ರೀ ಭಗವತಿ ದೇವಾಲಯಕ್ಕೆ ನಟ ದರ್ಶನ್ ಭೇಟಿ ನೀಡಿದ್ದರು. 
ಈ ದೇವಾಲಯದಲ್ಲಿ ಶತ್ರು ವಿನಾಶ ಪೂಜೆಯನ್ನು ದರ್ಶನ್ ಅವರು ಮಾಡಿಸಿದ್ದರು. ಈಗ ಕೇರಳದ ಮತ್ತೊಂದು ಧಾರ್ಮಿಕ ಮಹತ್ವದ ದೇವಾಲಯವಾದ ಕೊಟ್ಟೆಯೂರು ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub