ದರ್ಶನ್ ಹೆಸರಲ್ಲಿ ಮತ್ತೆ ಪೂಜೆ ಮಾಡಿಸಿದ ಪವಿತ್ರ ಗೌಡ, ಈ ಪೂಜೆಯ ಫಲ ಸಿಗುತ್ತಾ

 | 
Nx
ನಟಿ ಪವಿತ್ರಾ ಗೌಡ ಅವರು ಜಾಮೀನು ಪಡೆದು ಜೈಲಿನಿಂದ ಹೊರಗೆ ಬಂದ ನಂತರ ಈಗ ತಮ್ಮ ಬ್ಯುಸಿನೆಸ್​ನಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋ ಕೆಲಸಗಳನ್ನು ಮಾಡುತ್ತಾ ನಟಿ ಪವಿತ್ರಾ ಅವರು ಅದರಲ್ಲಿಯೇ ತೊಡಗಿಸಿಕೊಂಡಿದ್ದಾರೆ. ಆಗಾಗ ಅದಕ್ಕೆ ಸಂಬಂಧಿಸಿದ ಪೋಸ್ಟ್, ಸ್ಟೋರಿಗಳನ್ನು ಹಾಕುತ್ತಲೇ ಇರುತ್ತಾರೆ.
ನಟಿ ಇತ್ತೀಚೆಗೆ ಯುಗಾದಿ ದಿನ ಪೂಜೆ ಮಾಡುವ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಪವಿತ್ರಾ ಜೊತೆ ಯಾವಾಗಲೂ ಮಗಳು ಜೊತೆಗೇ ಇದ್ದರೆ ಈಗ ನಟಿ ಒಬ್ಬರೇ ಪೂಜೆ ಮಾಡಿದ್ದಾರೆ.ಪವಿತ್ರಾ ಗೌಡ ಅವರು ವಿಡಿಯೋ ಶೇರ್ ಮಾಡಿದ್ದು ಅದರೊಂದಿಗೆ ಕ್ಯಾಪ್ಶನ್ ಕೂಡಾ ಇದೆ. ಕೆಟ್ಟ ದೃಷ್ಟಿ ಯಾವಾಗಲೂ ನೋಡುತ್ತಲೇ ಇರುತ್ತದೆ. ಆದರೆ ನನ್ನ ಮುಟ್ಟೋಕಾಗಲ್ಲ ಎಂದಿದ್ದಾರೆ. ಜನ ಮಾತ್ರ ಇದು ಶತ್ರು ಸಂಹಾರ ಯಾಗವೇ ಕೇಳಿದ್ದಾರೆ.
ಋಣಾತ್ಮಕತೆಯೇ ತುಂಬಿರುವ ಜಗತ್ತಿನಲ್ಲಿ ನಿಮ್ಮ ದೃಷ್ಟಿಯೂ ಘಾನತ್ಮಕತೆಯಿಂದ ಮಿಂಚುತ್ತಿರಲಿ. ಯುಗಾದಿ ಶುಭಾಶಯ ಎಂದಿದ್ದಾರೆ ಪವಿತ್ರಾ ಗೌಡ.ನಟಿ ಆಕರ್ಷಕವಾದ ಸಲ್ವಾರ್ ಧರಿಸಿಕೊಂಡಿದ್ದರು. ಸಿಂಪಲ್ ಆಗಿ ಜೆಡೆ ಹೆಣೆದುಕೊಂಡು ಹಣೆಗೆ ಕುಂಕುಮ ಇಟ್ಟಿದ್ದರು. ಅರಶಿನ ಕುಂಕುಮ ಹಚ್ಚಿಕೊಂಡು ಲಕ್ಷಣವಾಗಿ ಕಾಣಿಸಿದ್ದಾರೆ.
ಯಾರೋ ಒಬ್ಬರು ಮಿಸ್ ಆಗಿದ್ದಾರೆ ಪೂಜೆ ಗೆ ಕಳೆ ಇಲ್ಲ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಅಕ್ಕ ಬಾಸ್ ಎಲ್ಲಿ ಬಾಸ್ ಜೊತೆ ಒಂದು ಫೋಟೋ ಹಾಕಿ ಅಕ್ಕ ಎಂದಿದ್ದಾರೆ. ಇನ್ನೂ ಕೆಲವರು ಸ್ವಾವಲಂಬಿ ಜೀವನ ಎಂದಿದ್ದಾರೆ. ಅಂತೂ ಪವಿತ್ರಾ ಗೌಡ ಅವರು ಸರಳವಾಗಿ ಮನೆಯಲ್ಲೇ ಯುಗಾದಿ ಆಚರಿಸಿದಂತೆ ಕಂಡು ಬಂದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub