ಮೀಡಿಯಾದವರಿಗೆ ಸರಿಯಾಗಿ ಜಾಡಿಸಿದ ಪವಿತ್ರ ಗೌಡ ತಮ್ಮ; ಸಿಡಿದೆ ದ್ದ ರಂಗಣ್ಣ

 | 
Hbj

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಪ್ರಮುಖ ಆರೋಪಿ ಆಗಿರುವ ನಟ ದರ್ಶನ್ ಗೆಳತಿ ಪವಿತ್ರಾ ಗೌಡಗೆ ನ್ಯಾಯಾಂಗ ಬಂಧನವಾದ ಹಿನ್ನೆಲೆ ನಟಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಪವಿತ್ರಾ ಗೌಡ ನೋಡಲು ಪೋಷಕರು ಜೈಲಿಗೆ ಭೇಟಿ ನೀಡಿದ್ರು. ಇದೇ ವೇಳೆ ಮಾಧ್ಯಮಗಳ ಕ್ಯಾಮೆರಾ ಕಂಡು ಪವಿತ್ರಾ ಗೌಡ ಸಹೋದರ ಗರಂ ಆಗಿದ್ದಾರೆ.

ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಾಮಾನ್ಯ ಕೈದಿಯಂತೆ ಒಂದು ದಿನ ಕಳೆದಿದ್ದಾರೆ. ಪವಿತ್ರಾ ಗೌಡ ಅವರನ್ನು ನೋಡಲು ಅವರ ತಂದೆ, ತಾಯಿ, ಸಹೋದರ ಹಾಗೂ ಚಿಕ್ಕಮ್ಮ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ರು.ಕೊಲೆ ಕೇಸ್ ನಲ್ಲಿ ಪವಿತ್ರಾ ಗೌಡ ಮೊದಲ ಆರೋಪಿಯಾಗಿ ಜೈಲು ಪಾಲಾಗಿದ್ರೆ, ಇತ್ತ ಅಕ್ಕನನ್ನು ನೋಡಲು ಬಂದ ತಮ್ಮ ಮಾಧ್ಯಮದವರನ್ನು ಕಂಡು ಗರಂ ಆಗ್ತಿದ್ದಾರೆ. 

ಯಾಕೆ ವಿಡಿಯೋ ಮಾಡ್ತೀರಾ? ನಿಮ್ಗೆ ಮಾಡೋದ್ದಕ್ಕೆ ಕೆಲ್ಸ ಇಲ್ವಾ ಎಂದು ಕ್ಯಾಮೆರಾಗೆ ಕೈ ತೋರಿಸಿ ಮಾತಾಡಿದ್ದಾರೆ. ಜೈಲಿನ ಹೊರಗಡೆ ಪವಿತ್ರಾ ಗೌಡ ಸಹೋದರ ಕೋಪಗೊಂಡ ವಿಡಿಯೋ ಇದೀಗ ಮಾಧ್ಯಮಗಳಲ್ಲಿ ವೈರಲ್ ಆಗ್ತಿದೆ.ಆರ್​ ಆರ್​ ನಗರದ ಮನೆಗೆ ಪೊಲೀಸರು ಪವಿತ್ರಾ ಗೌಡ ಅವರನ್ನು ಮಹಜರು ಮಾಡಲು ಕರೆದುಕೊಂಡು ಹೋಗಿದ್ದ ವೇಳೆ ನಟಿ ಕ್ಯಾಮೆರಾ ಕಂಡು ಮೂತಿ ಮುರಿದಿದ್ದರು. ಮನೆಯಿಂದ ಹೊರಗೆ ಬಂದು ಪೊಲೀಸ್ ಜೀಪ್ ಹತ್ತುವವರೆಗೂ ಅನೇಕ ಬಾರಿ ಮೂಗು ಮುರಿದಿದ್ದರು. ಈ ವಿಡಿಯೋ ಕೂಡ ವೈರಲ್ ಆಗಿತ್ತು.

ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ದರ್ಶನ್ ಗೆಳತಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಸೇರಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಪವಿತ್ರಾ ಗೌಡ ಸರಿಯಾಗಿ ಊಟ, ನಿದ್ರೆ ಮಾಡದೆ ಚಡಪಡಿಸಿದ್ದಾರೆ ಎನ್ನಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಡಿ ಗ್ಯಾಂಗ್ ಒಂದು ದಿನ ಕಳೆದಿದ್ದಾರೆ.ಪವಿತ್ರಾಗೌಡಗೆ ಜೈಲಿನಲ್ಲೂ ಡಿ ಬ್ಯಾರಕ್ ಕೊಠಡಿ ನೀಡಲಾಗಿತ್ತು. 

ಡಿ ಬಾಸ್ ಗೆಳತಿ ಪವಿತ್ರಾಗೆ ಡಿ ಬ್ಯಾರಕ್ ಕೊಠಡಿ ನೀಡಿದ್ದು ಉಳಿದ ಆರೋಪಿಗಳನ್ನು ಜೈಲಿನ ಕ್ವಾರೆಂಟೈನ್ ಬ್ಯಾರಕ್​ಗೆ ಶಿಫ್ಟ್ ಮಾಡಲಾಗಿತ್ತು. ನಿನ್ನೆ ಜೈಲಿಗೆ ಆರೋಪಿಗಳು ತಡವಾಗಿ ಆಗಮಿಸಿದ ಹಿನ್ನೆಲೆ ಈ ರೀತಿ ಮಾಡಲಾಗಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.