ರೇಣುಕಾಸ್ವಾಮಿಗೆ ಚಪ್ಪಲಿಯಲ್ಲಿ ಹೊಡೆದ ಪವಿತ್ರ; ' ಸಿಸಿಟಿವಿಯಲ್ಲಿ ರೆಕಾರ್ಡ್'

 | 
Ji

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರಗೌಡ ಸೇರಿ ಒಟ್ಟು 13 ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸ್ ಅಧಿಕಾರಿಗಳು ಕೊಲೆ ಹಿಂದಿನ ಕಾರಣವನ್ನು ಕೆದಕುತ್ತಿದ್ದಾರೆ. ಅಷ್ಟಕ್ಕೂ ಕೊಲೆಯಾದ ರೇಣುಕಾಸ್ವಾಮಿ ಪವಿತ್ರಗೌಡಗೆ ಪದೇ ಪದೆ ಮೆಸೇಜ್ ಮಾಡ್ತಿದ್ದನಂತೆ. ಅಕೌಂಟ್ ಬ್ಲಾಕ್ ಮಾಡಿದ್ರೂ ಬೇರೆ ಅಕೌಂಟ್​ ಕ್ರಿಯೇಟ್ ಮಾಡಿ ಮೆಸೇಜ್ ಮಾಡುತ್ತಿದ್ದ.

ಫೆಬ್ರವರಿ 27ರಿಂದ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದನಂತೆ. ರೇಣುಕಾಸ್ವಾಮಿಯ ಅಶ್ಲೀಲ ಮೆಸೇಜ್​ಗಳಿಂದ ಪವಿತ್ರಾ ಬೇಸತ್ತಿದ್ದಳು. ಇತ್ತೀಚೆಗೆ ಮರ್ಮಾಂಗದ ಫೋಟೋ ಕಳುಹಿಸಿ ನನ್ನ ಜೊತೆ ಬಾ ಎಂದು ಮೆಸೇಜ್ ಮಾಡಿದ್ದನಂತೆ. ಇದರಿಂದ ಕೋಪಗೊಂಡ ದರ್ಶನ್ ಒಂದು ವಾರದಿಂದ ಟ್ರಾಕ್ ಮಾಡಿದ ನಂತರ ರೇಣುಕಾಸ್ವಾಮಿಯನ್ನ ಚಿತ್ರದುರ್ಗ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ, ರಾಘವೇಂದ್ರ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದನಂತೆ. ನಂತ್ರ  ಆರ್ ಆರ್ ನಗರ , ವಾಹನ ಸೀಜರ್ ಮಾಡಿ ಇಡುವ ಶೆಡ್ ನಲ್ಲಿ ಇಟ್ಟು ರೇಣುಕಾಸ್ವಾಮಿಯನ್ನ ಹೊಡೆದಿದ್ದಾರೆ. ಹಲ್ಲೆಯಲ್ಲಿ ಗಾಯವಾದ ರೇಣುಕಾಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದ.

ಅದಾದ ನಂತರ ಶನಿವಾರ ನಡುರಾತ್ರಿ ಕಾಮಾಕ್ಷಿ ಪಾಳ್ಯದ  ಸಲಾರ್ ಪುರ ಸತ್ವ ಬಳಿಯ  ಮೋರಿಯಲ್ಲಿ ರೇಣುಕಾಸ್ವಾಮಿ ಮೃತದೇಹವನ್ನು  ಎಸೆದು ಹೋಗಲಾಗಿದೆ. ದರ್ಶನ್ ರೇಣುಕಾಸ್ವಾಮಿ ತಲೆಗೆ ಕಬ್ಬಿಣದ ರಾಡ್ ನಿಂದ ಹೊಡೆದಿದ್ದಾರೆ ಎನ್ನಲಾಗುತ್ತಿದೆ. ಇದಿಷ್ಟೇ ಅಲ್ಲ ಮೃತ ರೇಣುಕಾ ಸ್ವಾಮಿ ಗೆ ಪವಿತ್ರಾ ಗೌಡ ಚಪ್ಪಲಿ ಏಟನ್ನು ಸಹಾ ನೀಡಿದ್ದಾಳೆ. 

ಹಲ್ಲೆ ನಡೆಸಿ ಕೊಲೆ ಮಾಡಿದ ಬಳಿಕ ಆರೋಪಿಗಳು ಸುಮನಹಳ್ಳಿ ಬ್ರಿಡ್ಜ್ ಬಳಿ ಇರುವ ಸತ್ವ ಅಪಾರ್ಟ್ ಮೆಂಟ್ ಬಳಿ ರಾಜಕಾಲುವೆ ಎಸೆದಿದ್ದರು. ಬೆಳಗಿನ ಜಾವ ಅಪಾರ್ಟ್ ಮೆಂಟ್ ಸೆಕ್ಯೂರಿಟಿ ಮೃತದೇಹ ನೋಡಿ 112 ಕರೆ ಮಾಡಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದ. ಅಪರಿಚಿತ ಶವದ ಕುರಿತು ತನಿಖೆ ವೇಳೆ ಇಬ್ಬರು ಪೊಲೀಸರಿಗೆ ಶರಣಾಗಿದ್ದರು. ವಿಚಾರಣೆ ಮಾಡಿದಾಗ ವಿನಯ್ ಪಾತ್ರ ಬಯಲಿಗೆ ಬಂದಿತ್ತು. ವಿನಯ್ ಸೇರಿ ನಾಲ್ವರನ್ನ  ಪೊಲೀಸರು ಅರೆಸ್ಟ್ ಮಾಡಿದ್ದರು. 

ಈ ವೇಳೆ ವಿನಯ್ ಜೊತೆಗೆ ನಟ ದರ್ಶನ್ ಇದ್ದಿದ್ದು ಸ್ಪಷ್ಟವಾಗಿತ್ತು.  ವಿನಯ್ ಮತ್ತು ದರ್ಶನ್ ರಿಂದ ರೇಣುಕಾ ಸ್ವಾಮಿಗೆ ಹಲ್ಲೆ ಮಾಡಿರುವ  ಬಗ್ಗೆ ಪೊಲೀಸ್ ತನಿಖೆಯಲ್ಲಿ ಬಹಿರಂಗವಾಯ್ತು. ನಾಲ್ವರ ಹೇಳಿಕೆ ಆಧರಿಸಿ ನಟ ದರ್ಶನ್ ಅರೆಸ್ಟ್ ಮಾಡಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.