ಮೂರನೇ ಮದುವೆ ಬಳಿಕ ನೆಮ್ಮದಿ ಕಂಡ ಪವನ್ ಕಲ್ಯಾಣ್;

 | 
Js

ತೆಲುಗು ನಟ ಮತ್ತು ಹಾಲಿ ರಾಜಕಾರಣಿ ಪವನ್ ಕಲ್ಯಾಣ್ ಅವರು ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ್ದಾರೆ. ಚಂದ್ರಬಾಬು ನಾಯ್ಡು ನಾಲ್ಕನೇ ಬಾರಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ. ಇದೇ ವೇಳೆ ಪವನ್ ಕಲ್ಯಾಣ್ ಆಂಧ್ರಪ್ರದೇಶ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಈ ಪ್ರಮಾಣ ವಚನ ಸಮಾರಂಭದ ವೇಳೆ ಒಬ್ಬರು ಎಲ್ಲರ ಗಮನ ಸೆಳೆದರು. ನಾವು ಹೇಳುತ್ತಿರುವ ವ್ಯಕ್ತಿ ಪವನ್ ಕಲ್ಯಾಣ್ ಅವರ ಮೂರನೇ ಪತ್ನಿ ಅನ್ನಾ ಲೆಜ್ನೆವಾ ಅವರ ಬಗ್ಗೆ. ಹೌದು.ಆಂಧ್ರ ಪ್ರದೇಶದ ನೂತನ ಸರ್ಕಾರದ ಪ್ರಮಾಣ ವಚನ ಸಮಾರಂಭದಲ್ಲಿ ಅನ್ನಾ ಲೆಜ್ನೆವಾ ಕೂಡ ಅಲ್ಲಿಯೇ ಇದ್ದರು ಮತ್ತು ನಿರಂತರವಾಗಿ ತಮ್ಮ ಫೋನ್‌ನಲ್ಲಿ ಛಾಯಾಚಿತ್ರಗಳನ್ನು ತೆಗೆದುಕೊಳ್ಳುತ್ತಿದ್ದರು.

ಅನ್ನಾ ಲೆಜ್ನೆವಾ ರಷ್ಯಾದ ಮಾಡೆಲ್ ಆಗಿದ್ದಾರೆ. ಅವರು 1980 ರಲ್ಲಿ ರಷ್ಯಾದಲ್ಲಿ ಜನಿಸಿದ್ದರು. ಅವರು ದಕ್ಷಿಣದ ಹಲವು ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ತೀನ್ ಮಾರ್ ಚಿತ್ರದಲ್ಲಿ ಸಹ ಅನ್ನಾ ಲೆಜ್ನೆವಾ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.ಪವನ್ ಕಲ್ಯಾಣ್ ಮತ್ತು ಅನ್ನಾ ಲೆಜ್ನೆವಾ ತೀನ್ ಮಾರ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಈ ಚಿತ್ರದ ಶೂಟಿಂಗ್ ವೇಳೆ ಇಬ್ಬರಿಗೂ ಪ್ರೇಮಾಂಕುರವಾಗಿತ್ತು.

 ಇದಾದ ನಂತರ ಇಬ್ಬರೂ ಕೆಲಸ ಸಮಯದ ಕಾಲ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದರು. ನಂತರ 2013ರಲ್ಲಿ ಇಬ್ಬರೂ ಮದುವೆಯಾಗಿದ್ದರು.2017ರಲ್ಲಿ, ಅನ್ನಾ ಲೆಜ್ನೆವಾ ಮತ್ತು ಪವನ್ ಅವರ ಮಗ ಮಾರ್ಕ್ ಶಂಕರ್ ಪವನೋವಿಚ್ ಜನಿಸಿದರು. ಅನ್ನಾ ಲೆಜ್ನೆವಾ ಅವರ ಮೊದಲ ಮದುವೆಯ ನಂತರ ಬ್ರೇಕಪ್ ಆಗಿ ಡಿವೋರ್ಸ್ ಆಗಿತ್ತು. ಮೊದಲ ಮದುವೆಯಿಂದ ಅನ್ನಾ ಲೆಜ್ನೆವಾಗೆ ಒಬ್ಬಳು ಮಗಳಿದ್ದಾಳೆ, ಅವಳ ಹೆಸರು ಅಂಜನಾ ಪಾವ್ನೋವಾ.

ಕಳೆದ ವರ್ಷ ಇವರಿಬ್ಬರ ನಡುವೆ ಏನೂ ಸರಿಯಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಇಬ್ಬರೂ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದರು ಎಂದು ವರದಿಗಳಲ್ಲಿ ಹೇಳಲಾಗಿತ್ತು. ತೆಲುಗು ಸ್ಟಾರ್ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ನಿಶ್ಚಿತಾರ್ಥ ಮಾಡಿಕೊಂಡಾಗ ಈ ವದಂತಿ ಬೆಳಕಿಗೆ ಬಂದಿತ್ತು. ಈ ಸಮಾರಂಭದಲ್ಲಇ ಇಬ್ಬರೂ ಭಾಗಿಯಾಗಿರಲಿಲ್ಲ. 

ಇದಲ್ಲದೆ, ರಾಮ್ ಚರಣ್ ಮತ್ತು ಉಪಾಸನಾ ಅವರ ಮಗಳ ನಾಮಕರಣ ಸಮಾರಂಭದಲ್ಲಿ ಅವರು ಒಟ್ಟಿಗೆ ಕಾಣಿಸಿಕೊಂಡಿಲ್ಲ. ಸದ್ಯ ಆಂಧ್ರಪ್ರದೇಶ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಅವರನ್ನು ಅನ್ನಾ ಲೆಜ್ನೆವಾ ಮತ್ತು ಅವರ ಮಗ ಅಕಿರಾ ನಂದನ್ ಅವರನ್ನು ಸ್ವಾಗತಿಸಿದಾಗ ಈ ವದಂತಿಗಳಿಗೆ ತೆರೆ ಎಳೆಯಲಾಯಿತು.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.