ವಿಕ್ರಮ್ ಇಳಿದ ಜಾಗಕ್ಕೆ ಶಿವ ಶಕ್ತಿ ಎಂದು ಮೋದಿ ನಾಮಕರಣ, ಆದರೆ ಇಸ್ರೋ ಮುಖ್ಯಸ್ಥ ಹೇಳಿದ್ದೇನು ಗೊತ್ತಾ

 | 
Bd

ಚಂದ್ರಯಾನ-3ಕ್ಕೆ ಮುನ್ನ ಇಸ್ರೋ ವಿಜ್ಞಾನಿಗಳು ತಿರುಪತಿ ದೇಗುಲಕ್ಕೆ ಭೇಟಿ ನೀಡಿದ್ದರು. ಆ ಹೊತ್ತಲ್ಲಿ ವಿಜ್ಞಾನಿಗಳು ದೇವಾಲಯಗಳಿಗೆ ಭೇಟಿ ನೀಡುವುದರ ಕುರಿತು, ವಿಜ್ಞಾನ ಮತ್ತು ಧರ್ಮದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಯಾಗಿತ್ತು. ಚಂದ್ರಯಾನ-3 ಯಶಸ್ಸಿನ ಬಳಿಕ ಭಾನುವಾರ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ತಿರುವನಂತಪುರಂನಲ್ಲಿರುವ ಭದ್ರಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. 

ಇದಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರಲ್ಲಿ ಧರ್ಮ ಮತ್ತು ವಿಜ್ಞಾನದ ಬಗ್ಗೆ ಪತ್ರಕರ್ತರು ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸೋಮನಾಥ್, ನಾನೊಬ್ಬ ಪರಿಶೋಧಕ. ನಾವು ಚಂದ್ರನನ್ನು ಪರಿಶೋಧಿಸಿದ್ದೇವೆ. ನಾನು ನನ್ನ ಅಂತರಂಗವನ್ನೂ ಪರಿಶೋಧಿಸುತ್ತಿರುತ್ತೇನೆ. ವಿಜ್ಞಾನ ಮತ್ತು ಆಧ್ಯಾತ್ಮ ಎರಡನ್ನೂ ಪರಿಶೋಧಿಸುವುದು ನನ್ನ ಬದುಕಿನ ಪಯಣದ ಭಾಗ. 

ನಾನು ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದೇನೆ. ಹಲವು ಧರ್ಮ ಗ್ರಂಥಗಳನ್ನೂ ಓದಿದ್ದೇನೆ. ನಮ್ಮ ಅಸ್ತಿತ್ವದ ಅರ್ಥ ಮತ್ತು ಬ್ರಹ್ಮಾಂಡದಲ್ಲಿ ನಮ್ಮ ಪಯಣದ ಕುರಿತು ತಿಳಿದುಕೊಳ್ಳುವ ಕುತೂಹಲ ಹೊಂದಿದ್ದೇನೆ. ಹೀಗಾಗಿ ವಿಜ್ಞಾನದ ಅಧ್ಯಯನದಲ್ಲಿ ಬಾಹ್ಯವಾಗಿ ತೊಡಗಿದ್ದು, ಅಂತರಂಗದ ನೆಮ್ಮದಿಗಾಗಿ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ.

ಅದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಚಂದ್ರಯಾನ-3 ಟಚ್‌ಡೌನ್ ಸ್ಪಾಟ್ ಅನ್ನು ಶಿವಶಕ್ತಿ ಪಾಯಿಂಟ್ ಎಂದು ಹೆಸರಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ಹೇಳಿದರು. ಸೋಮನಾಥ್ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಅಧ್ಯಕ್ಷರಾಗಿ ಚಂದ್ರಯಾನ-3 ಮಿಷನ್‌ನ ನಾಯಕರಾಗಿದ್ದಾರೆ. ಇನ್ನು ಶಿವಶಕ್ತಿ ಪಾಯಿಂಟ್ ಹೆಸರಿನ ಬಗ್ಗೆ ಮಾತನಾಡಿದ ಸೋಮನಾಥ್, ಪ್ರಧಾನಿ ಅವರು ನಮಗೆಲ್ಲರಿಗೂ ಸರಿಹೊಂದುವ ರೀತಿಯಲ್ಲಿ ಅದರ ಅರ್ಥವನ್ನು ವಿವರಿಸಿದ್ದಾರೆ. 

ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ನಾನು ಭಾವಿಸುತ್ತೇನೆ. ಅವರು ಭಾರತೀಯತೆಯನ್ನು ಧ್ವನಿಸುವ ಹೆಸರನ್ನು ನೀಡಿದ್ದಾರೆ. ದೇಶದ ಪ್ರಧಾನಿ ಆಗಿದ್ದರಿಂದ ಹೆಸರು ನೀಡುವ ವಿಶೇಷ ಅಧಿಕಾರವನ್ನು ಅವರು ಹೊಂದಿದ್ದಾರೆ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.