ಬಿಗ್ಬಾಸ್ ಮನೆಗೆ ಖ್ಯಾತ ನಟಿ ಹರಿಪ್ರಿಯಾ ಎಂಟ್ರಿ, ಟ್ರೋಫಿ ಪಕ್ಕಾ ಇವರಿಗೆ ಎಂದ ಜನ
Sep 29, 2024, 10:28 IST
|
ನಟಿ ಹರಿಪ್ರಿಯಾ ಅವರು ಈ ಬಾರಿ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ ಎನ್ನುವ ಪ್ರಶ್ನೆ ಎದುರಾಗಿತ್ತು. ಈ ಬಾರಿ ಬಿಗ್‌ಬಾಸ್‌ನಲ್ಲಿ ಯಾರೆಲ್ಲ ಇದ್ದಾರೆ ಎನ್ನುವ ಕುತೂಹಲ ಹೆಚ್ಚಾಗುತ್ತಿರುವ ಬೆನ್ನಲ್ಲೇ ಕೆಲವು ಹೆಸರುಗಳು ಕೇಳಿ ಬಂದಿತ್ತು. ನಟಿ ಹರಿಪ್ರಿಯಾ ಅವರು ಸಹ ಈ ಬಾರಿಯ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿತ್ತು. ಇದಕ್ಕೆ ಹರಿಪ್ರಿಯಾ ಅವರು ಏನು ಹೇಳಿದ್ದಾರೆ ನೋಡಿ.
ನಟಿ ಹರಿಪ್ರಿಯಾ ಅವರು ಕನ್ನಡದ ಖ್ಯಾತ ನಟಿ, ನಟ ವಸಿಷ್ಠ ಸಿಂಹ ಅವರನ್ನು ವಿವಾಹವಾಗಿದ್ದು. ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿ ಎನ್ನುವ ಖ್ಯಾತಿ ಈ ಜೋಡಿಗೆ ಇದೆ. ಈಚೆಗೆ ಅವರು ಸಿನಿಮಾದಿಂದ ಸಣ್ಣ ಬ್ರೇಕ್ ತೆಗೆದುಕೊಂಡಿದ್ದಾರೆ. ಹೀಗಾಗಿ ಅವರು, ಈ ಬಾರಿ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ಳಬಹುದು ಎಂದು ಅವರ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ, ಈ ಬಗ್ಗೆ ಭಿನ್ನವಾಗಿ ಹರಿಪ್ರಿಯಾ ಅವರು ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ಗೆ ಅವರ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಟಿ ಹರಿಪ್ರಿಯಾ ಅವರು ಈ ಬಾರಿಯ ಬಿಗ್‌ಬಾಸ್‌ಗೆ ಹೋಗಲಿದ್ದಾರೆ ಎನ್ನುವ ಬಗ್ಗೆ ಈಚೆಗೆ ಸೋಷಿಯಲ್ ಮೀಡಿಯಾದಲ್ಲಿ ಜೋರು ಚರ್ಚೆ ನಡೆದಿತ್ತು. ಈ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ನಟಿ ಹರಿಪ್ರಿಯಾ ಅವರು ಪೋಸ್ಟ್‌ವೊಂದನ್ನು ಮಾಡಿದ್ದಾರೆ. ಅದರಲ್ಲಿ ಇಲ್ಲಪ್ಪಾ ಇಲ್ಲ...! ನನಗೆ ನಾನೆ ಬಾಸು, ನಾನು ನಮ್ಮ ಮನೆ ಬಿಟ್ಟು ಯಾವ್ ಮನೆಗೂ ಹೋಗ್ತಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ಗೆ ಅವರ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೆಲವರು ನೀವು ಬಿಗ್‌ಬಾಸ್‌ಗೆ ಹೋಗಬೇಕಿತ್ತು ಮೇಡಂ ನೀವು ಈ ಬಾರಿಯ ಬಿಗ್‌ಬಾಸ್‌ನಲ್ಲಿ ಇರುತ್ತೀರಿ ಎಂದು ನಿರೀಕ್ಷೆ ಮಾಡಿದ್ವಿ ಎಂದಿದ್ದರೆ, ಇನ್ನೂ ಕೆಲವರು ನಿಜವಾಗ್ಲೂ ಹೋಗ್ತಿಲ್ವಾ, ನೀವು ಹೋಗಲ್ಲ ಅಂತ ನಮಗೆ ಗೊತ್ತಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ನೀವು ಹೋಗ್ತೀನಿ ಅಂದ್ರು ಸಿಂಹದ ಗುಹೆಯಿಂದ ತಪ್ಪುಸ್ಕೊಂಡ್ ಹೋಗೋಕಾಗಲ್ವಲ್ಲ ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.