ಸುಧಾಕರ್ ಮಾತಿಗೆ ರೊಚ್ಚಿಗೆದ್ದ ಪ್ರದೀಪ್ ಈಶ್ವರ್, ಹೇಳಿದ್ದೇನು ಗೊ.ತ್ತಾ

 | 
ಹೂ

ಯಾರಾದರೂ ಶಾಸಕರಾಗಿ ಬಿಗ್‌ ಬಾಸ್‌ಗೆ ಹೋಗ್ತಾರಾ? ಇವರು ಚಿಕ್ಕಬಳ್ಳಾಪುರವನ್ನು ನಗೆಪಾಟಲಿಗೆ ಈಡು ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಕಲಶಪ್ರಾಯವಾಗಿತ್ತು. ಕ್ಷೇತ್ರದ ಮರ್ಯಾದೆ ಹಾಳು ಮಾಡ್ತಾರೆ ಎಂದ ಸುಧಾಕರ ಅವರಿಗೆ ಬಿಗ್ಬಾಸ್ ಮನೆಯಿಂದ ಇಂದು ಹೊರಬಂದು ಟಕ್ಕರ್ ಕೊಟ್ಟಿದ್ದಾರೆ ಪ್ರದೀಪ್ ಈಶ್ವರ್ ಅವರು.

ಬಿಗ್‍ಬಾಸ್‍ಗೆ ನಾನು ಸ್ರ್ಪಧಿಯಾಗಿ ಹೋಗಿರಲಿಲ್ಲ. ಖಾಸಗಿ ಚಾನೆಲ್‍ನ ಸ್ನೇಹಿತರು ಆಹ್ವಾನಿಸಿದ್ದಕ್ಕಾಗಿ ಎರಡು ಮೂರು ಗಂಟೆ ಭಾಗವಹಿಸಿದ್ದೆ. ಆದರೆ ನಾನೇ ಸ್ರ್ಪಧಿ ಎಂದು ಉದ್ದೇಶಪೂರ್ವಕವಾಗಿಯೇ ಫ್ರಾಂಕ್ ಮಾಡಲಾಗಿತ್ತು ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ. ಮಾಜಿ ಸಚಿವ ಡಾ. ಸುಧಾಕರ್ ಅವರು ನಿನ್ನೆ ಪತ್ರಿಕಾಗೋಷ್ಠಿ ನಡೆಸಿ ಶಾಸಕರು ಬಿಗ್‍ಬಾಸ್‍ಗೆ ಹೋಗಿದ್ದರಿಂದಾಗಿ ನಗೆಪಾಟಲಿನ ವಾತಾವರಣ ನಿರ್ಮಾಣವಾಗಿದೆ ಎಂದು ಟೀಕೆ ಮಾಡಿದರು. 

ಇದಕ್ಕೆ ತಿರುಗೇಟು ನೀಡಿದ ಪ್ರದೀಪ್ ಈಶ್ವರ್, ಈ ಹಿಂದೆ ಚಿಕ್ಕಬಳ್ಳಾಪುರ ಉತ್ಸವ ಮಾಡಿ ದೊಡ್ಡ ದೊಡ್ಡ ಸ್ಟಾರ್‌ಗಳನ್ನೇ ಕರೆಸಿದ್ದ ಸುಧಾಕರ್‌ರವರು ಸೋಲು ಕಂಡಿದ್ದಾರೆ. ಈಗ ನಾನು ಬಿಗ್‍ಬಾಸ್‍ಗೆ ಹೋಗಿದ್ದಕ್ಕಾಗಿ ಟೀಕೆ ಮಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕನಾಗಿ ಕನಿಷ್ಠ ಸರಿಯಾಗಿ ವಿಮರ್ಶೆ ಮಾಡಲು ಅವರಿಗೆ ಬರುತ್ತಿಲ್ಲ ಎಂದರು. ಟೀಕೆ ಮಾಡುವುದು ವಿರೋಧಪಕ್ಷದವರ ಹಕ್ಕು. ಒಂದು ವೇಳೆ ನಾನೇ ಸುಧಾಕರ್ ಅವರ ಸ್ಥಾನದಲ್ಲಿದ್ದರೆ ಆಟವೇ ಬೇರೆಯಾಗಿರುತ್ತಿತ್ತು. 

ನನ್ನ ಪ್ರಕಾರ ಸುಧಾಕರ್ ಅವರು ಬೆಳಿಗ್ಗೆಯಿಂದ ಸಂಜೆವರೆಗೂ ಚಾನಲ್‍ನಲ್ಲೇ ಕುಳಿತುಕೊಂಡಿರಬೇಕಿತ್ತು. ಬಿಗ್‍ಬಾಸ್‍ಗೆ ಹೋಗಿರುವುದು ನಗೆಪಾಟಲು ಎಂದಿದ್ದಾರೆ. ಅದೊಂದು ದೊಡ್ಡ ವೇದಿಕೆ. ಕೋಟ್ಯಂತರ ಜನ ನೋಡುತ್ತಾರೆ. ನಾನು ಯುವಜನರಿಗೆ ಒಂದಷ್ಟು ಸಕಾರಾತ್ಮಕ ಸಂದೇಶಗಳನ್ನು ನೀಡಬೇಕಿತ್ತು. ಈಗಾಗಲೇ ಹಲವಾರು ಮಾಧ್ಯಮಗಳಲ್ಲಿ, ವೇದಿಕೆಗಳಲ್ಲಿ ನನ್ನ ಅನಿಸಿಕೆಗಳನ್ನು ಹಂಚಿಕೊಂಡಿದ್ದೇನೆ. 

ಬಿಗ್‍ಬಾಸ್ ಕೂಡ ದೊಡ್ಡ ವೇದಿಕೆಯಾದ್ದರಿಂದ ಅದರಲ್ಲಿ ಭಾಗವಹಿಸಿದ್ದೆ ಎಂದರು. ಶೋ ನಡೆಸುವ ಖಾಸಗಿ ಚಾನಲ್‍ನಲ್ಲಿ ನನ್ನ ಸ್ನೇಹಿತರಿದ್ದಾರೆ. ಅವರ ಮನವಿ ಮೇರೆಗೆ ಸೌಜನ್ಯದಿಂದ ನಾನು ಬಿಗ್‍ಬಾಸ್‍ಗೆ ಹೋಗಿದ್ದೆ. ಬೆಳಿಗ್ಗೆಯಿಂದ ಕ್ಷೇತ್ರದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿದ್ದೆ. ಸಂಜೆ ಬೆಂಗಳೂರಿಗೆ ಬಂದು 8.30 ರ ವೇಳೆಗೆ ಶೋಗೆ ಹೋದೆ. 11.30 ರ ವೇಳೆಗೆ ವಾಪಸ್ ಬಂದೆ. ಚಾನಲ್‍ನವರು ಮಾರುಕಟ್ಟೆ ದೃಷ್ಟಿಯಿಂದ ನನ್ನನ್ನು ಸ್ರ್ಪಧಿ ಎಂದು ಫ್ರಾಂಕ್ ಮಾಡುವುದಾಗಿ ಹೇಳಿದರು. 

ಅನುಕೂಲವಾಗುವುದಾದರೆ ಆಗಲಿ ಎಂದು ನಾನು ಸುಮ್ಮನಿದ್ದೆ ಎಂದು ಹೇಳಿದರು. ನಾನು ಬಿಗ್‍ಬಾಸ್‍ಗೆ ಅತಿಥಿಯಾಗಿ ಹೋಗಿದ್ದೇನೆ ಹೊರತು ಸ್ರ್ಪಧಿಯಲ್ಲ. ಅಲ್ಲಿರುವ ಸ್ರ್ಪಧಿಗಳು 100 ದಿನ ಮನೆಯವರಿಂದ ದೂರ ಇರುತ್ತಾರೆ. ಅವರನ್ನು ಪ್ರೇರೇಪಿಸುವ ಸಂದೇಶ ನೀಡುವುದು ನನ್ನ ಉದ್ದೇಶವಾಗಿತ್ತು. ನಾನು ಬಿಗ್‍ಬಾಸ್‍ಗೆ ಹೋಗಿದ್ದು ಏಕೆ ಎಂದು ಮಾಜಿ ಶಾಸಕರಿಗೆ ಅರ್ಥವಾಗಿಲ್ಲ. 

ಹೋಗಲಿ ಅವರು ಅಂದುಕೊಂಡತೆಯಾದರೂ ಸರಿಯಾಗಿ ಟೀಕೆ ಮಾಡಿಲ್ಲ. ಇನ್ನು ಕೆಲವು ಸಂಘಟನೆಗಳು ನನ್ನ ವಿರುದ್ಧ ವಿಧಾನಸಭಾಧ್ಯಕ್ಷರಿಗೆ ದೂರು ನೀಡಿದ್ದಾರೆ. ಇದು ಅವರ ಅಸ್ತಿತ್ವದ ಪ್ರಶ್ನೆ. ನನ್ನ ಆಕ್ಷೇಪವೇನಿಲ್ಲ. ಟೀಕೆಗಳನ್ನು ಎದುರಿಸಲು ಸಿದ್ಧವಾಗಿಯೇ ರಾಜಕಾರಣಕ್ಕೆ ಬಂದಿದ್ದೇನೆ. ಇಂತವರಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.