ಬಡವರ ಮಗ ಎನ್ನುವ ಪ್ರದೀಪ್ ಈಶ್ವರ್ ಸಂಬಳ ಎಷ್ಟು, ಸದ್ಯಕ್ಕೆ ಈತನ ಲೈಫ್ ಸ್ಟೈಲ್ ಹೇಗಿದೆ ಗೊತ್ತಾ
Updated: Aug 5, 2023, 14:32 IST
|
ಪ್ರಖರ ಭಾಷಣ, ಸ್ಫೂರ್ತಿದಾಯಕ ಮಾತುಗಳು, ಪರಿಶ್ರಮ ಅಕಾಡೆಮಿ ಮೂಲಕ ಗಮನ ಸೆಳೆದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಶಾಸಕ ಪ್ರದೀಪ್ ಈಶ್ವರ್ ಅವರು ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಮಾತು, ಶಾಸಕನಾದ ಬಳಿಕ ಜನರೊಂದಿಗೆ ಬೆರೆಯುವ ರೀತಿ, ಸ್ಪಂದಿಸುವ ಪರಿ ಕುರಿತು ಸಕಾರಾತ್ಮಕ ಮಾತುಗಳು ಕೇಳಿ ಬರುತ್ತಿವೆ.
ಹೌದು ಚುನಾವಣೆಯ ಹಿಂದಿನವರೆಗೂ ಪ್ರದೀಪ್ ಈಶ್ವರ್ ಎಂದರೆ ಯಾರೆಂದೂ ತಿಳಿಯದ ಹಲವರಿಗೆ ಇಂದು ಅವರೇ ರೋಲ್ ಮಾಡೆಲ್. ಇನ್ನು ಟಾಕ್ ಆಫ್ ಟೌನ್ ಆಗಿರುವ ಅವರು ಎಲ್ಲ ಶಾಸಕರಂತೆ ತಿಂಗಳಿಗೆ 40 ಸಾವಿರ ರೂಪಾಯಿ ಮೂಲ ವೇತನದ ಜೊತೆಗೆ ಕ್ಷೇತ್ರದಲ್ಲಿ ವಾಸಿಸಲು ಒಂದು ಮನೆ ಆಫೀಸ್ ಹಾಗೂ ಅಲ್ಲಿ ಕೆಲಸಕ್ಕೆ ಸಹಾಯಕರನ್ನು ನೇಮಿಸಿಕೊಳ್ಳಲು ತಿಂಗಳಿಗೆ 20ಸಾವಿರ ಹಾಗೂ ಟೆಲಿಫೋನ್ ಹಾಗೂ ಕಾಗದ ಪತ್ರ ವಿತರಣೆಗೆಂದು ತಿಂಗಳಿಗೆ 20 ಸಾವಿರ ಹಾಗೂ 5 ಸಾವಿರ ರೂಪಾಯಿಯನ್ನು ಪಡೆಯುತ್ತಾರೆ.
ಅಲ್ಲದೆ ಅವರು ಬೇಕೆಂದರೆ ವಾಸಿಸಲು ಬೆಂಗಳೂರಿನಲ್ಲಿರುವ ಶಾಸಕ ಭವನದಲ್ಲಿ ಕೂಡ ಇರಬಹುದಾಗಿದೆ. ಇಷ್ಟು ಮಾತ್ರವಲ್ಲದೆ ಕರ್ನಾಟಕದ ಒಳಗೆ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡಿದ್ದರೆ ಭಾಗವಹಿಸಲು ಪ್ರತಿದಿನ ಇವರಿಗೆ 2000 ರೂಪಾಯಿ ವೇತನ ದೊರೆಯುತ್ತದೆ.ಇನ್ನು ಬೇರೆ ರಾಜ್ಯಗಳಲ್ಲಿ ಆದರೆ ಸರಾಸರಿ ದಿನಕ್ಕೆ 7000 ವರೆಗೂ ಸಿಗುತ್ತದೆ.ಇನ್ನು ಎಲ್ಲ ಮೊತ್ತಗಳನ್ನು ಸೇರಿದರೆ ಕರ್ನಾಟಕ ಸರ್ಕಾರ ಪ್ರತಿಶಾಸಕರಿಗೆ ತಿಂಗಳಿಗೆ 2 ಲಕ್ಷದ ತನಕ ಹಣವನ್ನು ಸಂದಾಯ ಮಾಡುತ್ತದೆ ಹಾಗಾಗಿ ಇವರಿಗೂ ಕೂಡ ಒಟ್ಟು 2ಲಕ್ಷದ ತನಕ ಪ್ರತಿ ತಿಂಗಳು ಸಿಗುತ್ತದೆ ಎನ್ನಬಹುದಾಗಿದೆ.
ಇನ್ನು ಶಾಸಕ ಪ್ರದೀಪ್ ಈಶ್ವರ್, ಶನಿವಾರ ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿರುವ ಶ್ರೀ ಸಿಯಾರಾ ಹೋಟೆಲ್‌ನಲ್ಲಿ ಡಬ್ಲ್ಯು ಡಬ್ಲ್ಯು ಡಬ್ಲ್ಯು.ಪ್ರದೀಪ್ ಈಶ್ವರ್‌ಎಂಎಲ್‌ಎ .ಕಾಂ ಹೆಸರಿನ ವೆಬ್ ಸೈಟ್ ಆರಂಭಿಸಿದ್ದಾರೆ. ವೆಬ್ ಸೈಟ್ ಆರಂಭಿಸಿ ಮಾತನಾಡಿದ ಶಾಸಕರು, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ವೆಬ್‌ಸೈಟ್ ಆರಂಭಿಸಿದ್ದೇನೆ. ಕ್ಷೇತ್ರದ ಜನ ತಮ್ಮ ಸಮಸ್ಯೆಗಳನ್ನು ನೇರವಾಗಿ ಬಂದು ಹೇಳಿಕೊಳ್ಳಲು, ದೂರು ನೀಡಲು ತಮ್ಮನ್ನು ಭೇಟಿ ಮಾಡುವ ಅಗತ್ಯವಿಲ್ಲ, ಜನರು ತಮ್ಮ ಸಮಸ್ಯೆಗಳನ್ನು ಈ ವೆಬ್ ಸೈಟ್ ಮೂಲಕ ತಿಳಿಸಬಹುದಾಗಿದೆ. ಒಟ್ಟಿನಲ್ಲಿ ಜನರ ಮನ ಗೆಲ್ಲುವ ಮೂಲಕ ಒಬ್ಬ ಒಳ್ಳೆಯ ಶಾಸಕನಾಗುವ ಎಲ್ಲ ಲಕ್ಷಣಗಳನ್ನು ಪ್ರದೀಪ್ ಈಶ್ವರ್ ತೋರುತ್ತಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.