ಸೆಲ್ಫಿ ಯಿಂದ ಶುರುವಾಯ್ತು ಲವ್ ಸ್ಟೋರಿ, ಮನಬಿಚ್ಚಿ ಮಾತಾಡಿದ ಪ್ರಗತಿ ರಿಷಬ್ ಶೆಟ್ಟಿ

 | 
ಹಹ೭

ಕಾಂತಾರ ಶಿವ ಯಾರಿಗೆ ತಾನೇ ಗೊತ್ತಿಲ್ಲಾ ಹೇಳಿ ಹೌದು ಅವರ ಬದುಕು ಹಲವರಿಗೆ ಮಾದರಿ ರಿಷಬ್ ಆಗತಾನೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ರಿಷಬ್ ಹಾಗೂ ಪ್ರಗತಿ ಮಧ್ಯೆ ಲವ್ ಆಗಿತ್ತು. ಇವರ ಲವ್​ ಸ್ಟೋರಿ ಆರಂಭ ಆಗಿದ್ದು ಹೇಗೆ ಎನ್ನುವ ಬಗ್ಗೆ ಪ್ರಗತಿ ಶೆಟ್ಟಿ ಅವರು ಹೇಳಿಕೊಂಡಿದ್ದಾರೆ.

ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ತಮ್ಮ ಪ್ರೀತಿ ಹೇಗೆ ಹುಟ್ಟಿತು ಎಂಬುದನ್ನು ಎಲ್ಲಿಯೂ ಹೆಚ್ಚಾಗಿ ಹೇಳಿಕೊಳ್ಳದ ಈ ಜೋಡಿ ಕಾಂತಾರ ಸಮಯದಲ್ಲಿ ನಡೆದಿದ್ದ ಸಂದರ್ಶನಗಳಲ್ಲಿ ಈ ವಿಷಯವನ್ನು ಬಹಿರಂಗಪಡಿಸಿತ್ತು. ಪ್ರಗತಿ ಶೆಟ್ಟಿ ತನ್ನ ಹಾಗೂ ರಿಷಬ್ ಶೆಟ್ಟಿ ಪರಿಚಯ ಹೇಗಾಯ್ತು, ಇಬ್ಬರ ನಡುವೆ ಸ್ನೇಹ ಹೇಗೆ ಬೆಳೆಯಿತು ಹಾಗೂ ಅದಕ್ಕೆ ಕಾರಣವೇನು ಮತ್ತು ಪ್ರೀತಿ ಹೇಗೆ ಹುಟ್ಟಿಕೊಂಡಿತು ಎಂಬುದನ್ನು ಎಲ್ಲರ ಮುಂದಿಟ್ಟಿದ್ದಾರೆ.

ಮೊದಲಿಗೆ ಹಲವು ಚಿತ್ರಗಳಲ್ಲಿ ಬಣ್ಣ ಹಚ್ಚಿ ನಟನೆ ಮಾಡಿದ್ದ ರಿಷಬ್ ಶೆಟ್ಟಿ ಮೊದಲಿಗೆ ತಮ್ಮ ಗೆಳೆಯ ರಕ್ಷಿತ್ ಶೆಟ್ಟಿಗೆ ರಿಕ್ಕಿ ಎಂಬ ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕನಾಗಿ ಜರ್ನಿ ಶುರು ಮಾಡಿದ್ದರು. ಈ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಅಭಿಮಾನಿಯಾಗಿದ್ದ ತಾನು ಚಿತ್ರ ನೋಡಲು ಸ್ನೇಹಿತೆಯರೊಡನೆ ಚಿತ್ರಮಂದಿರಕ್ಕೆ ಬಂದಾಗ ತನ್ನ ಗೆಳತಿಯರು ರಿಷಬ್ ಶೆಟ್ಟಿ ಅವರನ್ನು ತೋರಿಸಿ ಅವರೇ ನಿರ್ದೇಶಕರು ಎಂದು ಹೇಳಿದರು, ಆಗ ಅವರ ಹೆಸರೂ ಸಹ ತನಗೆ ತಿಳಿದಿರಲಿಲ್ಲ ಎಂದು ಪ್ರಗತಿ ಶೆಟ್ಟಿ ಹೇಳಿಕೊಂಡರು.

ಇನ್ನು ಉಳಿದವರು ಕಂಡಂತೆ ಚಿತ್ರ ನೋಡಿ ರಕ್ಷಿತ್ ಶೆಟ್ಟಿ ಅಭಿಮಾನಿಯಾಗಿದ್ದ ಪ್ರಗತಿ ಶೆಟ್ಟಿ ರಿಕ್ಕಿ ನೋಡಲು ಚಿತ್ರಮಂದಿರಕ್ಕೆ ಬಂದು ಸ್ನೇಹಿತೆಯರು ಹೇಳಿದ ಕಾರಣಕ್ಕಾಗಿ ರಿಷಬ್ ಶೆಟ್ಟಿ ಬಳಿ ತೆರಳಿ ಮಾತನಾಡಿ ಸೆಲ್ಫಿ ತೆಗೆದುಕೊಂಡಿದ್ದರು. ಹೌದು, ಎಲ್ಲರೂ ರಕ್ಷಿತ್ ಶೆಟ್ಟಿ ಜತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದ ಸಂದರ್ಭದಲ್ಲಿ ಅಲ್ಲಿಯೇ ಒಂಟಿಯಾಗಿ ನಿಂತಿದ್ದ ರಿಷಬ್ ಶೆಟ್ಟಿ ಬಳಿ ತೆರಳಿದೆವು.

 ಹಾಗೂ ಅವರೂ ಸಹ ನಮ್ಮ ಊರಿನ ಕಡೆಯವರಾದ ಕಾರಣ ನ್ನು ಅವರ ಬಳಿ ನಮ್ಮ ಊರಿನವರು ನೀವು, ಅಲ್ಲಿಂದ ಬಂದು ಚಿತ್ರರಂಗದಲ್ಲಿ ಇಷ್ಟೆಲ್ಲಾ ಮಾಡುತ್ತಿರುವುದು ಹೆಮ್ಮೆ ಎನಿಸುತ್ತೆ ಎಂದು ಹೇಳಿದ್ದೆ, ಅದೇ ಮೊದಲ ಬಾರಿಗೆ ಅವರ ಜತೆ ನಾನು ಮಾತನಾಡಿದ್ದು, ಅವರ ಹೆಸರೂ ಸಹ ತಿಳಿದಿದ್ದು ಎಂದು ಪ್ರಗತಿ ಶೆಟ್ಟಿ ತಿಳಿಸಿದರು. ಇನ್ನು ಆ ದಿನದಂದು ಪ್ರಗತಿ ಶೆಟ್ಟಿ ರಿಷಬ್ ಜತೆ ಫೋಟೊ ತೆಗೆಸಿಕೊಂಡಿದ್ದರು. ಈ ಫೋಟೊವನ್ನು ಕಳೆದ ಬಾರಿಯ ವಿವಾಹ ವಾರ್ಷಿಕೋತ್ಸವದ ದಿನದಂದು ರಿಷಬ್ ಶೆಟ್ಟಿ ಹಂಚಿಕೊಂಡಿದ್ದರು.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.