ಪ್ರಜ್ವಲ್ ರೇವಣ್ಣ ವಿಡಿಯೋ ಲೀಕ್, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಕಾರು ಚಾಲಕ

 | 
ಗಾ

ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿರುವ ಪೆನ್ ಡ್ರೈವ್ ಪ್ರಕರಣ ಇದೀಗ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ.ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಹಗರಣ ಕೇಸ್‌ನಲ್ಲಿ ಇದೇ ಮೊದಲ ಬಾರಿಗೆ ಅವರ ಮಾಜಿ ಚಾಲಕ ಕಾರ್ತಿಕ್ ಹೇಳಿಕೆ ನೀಡಿದ್ದು, ಬಿಜೆಪಿ ನಾಯಕನಿಗೆ ನಾನು ಮೊದಲು ಪೆನ್‌ಡ್ರೈವ್ ಕೊಟ್ಟಿದ್ದು, ಕಾಂಗ್ರೆಸ್‌ನವರಿಗೆ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಮತ್ತು ರೇವಣ್ಣ ಕುಟುಂಬದ ಮಾಜಿ ಕಾರು ಚಾಲಕ ಕಾರ್ತಿಕ್ ಹೇಳಿಕೆಯೊಂದಿಗೆ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಕೇಸ್‌ಗೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಕೆಲವು ತಿಂಗಳ ಹಿಂದೆಯೇ ಈ ಆಶ್ಲೀಲ ವಿಡಿಯೋ, ಫೋಟೋ ಬಹಿರಂಗಗೊಳಿಸದಂತೆ ಕಾರ್ತಿಕ್ ವಿರುದ್ಧ ಕೋರ್ಟ್‌ನಿಂದ ಸ್ಟೇ ಆರ್ಡರ್ ಕೂಡ ಪ್ರಜ್ವಲ್ ರೇವಣ್ಣ ತಂದಿದ್ದರು ಎಂಬ ಅಂಶ ಮತ್ತೆ ಮುನ್ನೆಲೆಗೆ ಬಂದಿದೆ.

ಬಿಜೆಪಿ ನಾಯಕ ಜಿ ದೇವರಾಜ್ ಅವರಿಗಷ್ಟೇ ಆ ಪೆನ್‌ ಡ್ರೈವ್ ನೀಡಿದ್ದೆ. ನನ್ನ ಬಳಿ ಇದ್ದ ಒಂದೇ ಒಂದು ಪೆನ್‌ ಡ್ರೈವ್ ಅದಾಗಿತ್ತು. ಅವರೂ ನನಗೆ ನ್ಯಾಯಕೊಡಿಸುವ ಮಾತನಾಡುತ್ತ, ನಂಬಿಸಿ ಮೋಸ ಮಾಡಿದರು ಎಂದು ಕಾರ್ತಿಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಹತ್ತು ಹದಿನೈದು ವರ್ಷ ಕಾಲ ಪ್ರಜ್ವಲ್ ರೇವಣ್ಣ, ರೇವಣ್ಣ ಕುಟುಂಬದವರಿಗೆ ಕಾರು ಚಾಲಕನಾಗಿ ಕೆಲಸ ಮಾಡಿದ್ದೆ. ಈ ಅವಧಿಯಲ್ಲಿ ನನ್ನ ಹೆಂಡ್ತಿಯನ್ನು ಕರೆಯಿಸಿಕೊಂಡು ಅವರ ಮೇಲೆ ಹಲ್ಲೆ ಮಾಡಿ, ನನ್ನ ಮೇಲೂ ಹಲ್ಲೆ ಮಾಡಿ ನಮ್ಮ ಜಮೀನನ್ನು ಬರೆಯಿಸಿಕೊಂಡಿದ್ದಾರೆ.


 ಅದಾದ ಬಳಿಕ ನಾನು ಅವರಲ್ಲಿ ಕೆಲಸಕ್ಕೆ ಹೋಗುವುದನ್ನು ಬಿಟ್ಟುಬಿಟ್ಟಿದ್ದೆ. ನ್ಯಾಯಕ್ಕಾಗಿ ಹೋರಾಟ ನಡೆಸಿದ್ದೆಬಿಜೆಪಿ ಮುಖಂಡ ಜಿ.ದೇವರಾಜೇ ಗೌಡ ಅವರನ್ನು ಸಂಪರ್ಕಿಸಿದ್ದೆ. ಅವರು ನಂಬಿಕೆ ಹುಟ್ಟಿಸಿದರೇ ಹೊರತು ನ್ಯಾಯ ಕೊಡಿಸುವ ಕೆಲಸ ಮಾಡಲಿಲ್ಲ. ಹೀಗಾಗಿ ಅವರ ಮೇಲೆ ನಂಬಿಕೆ ಹೋದ ಕಾರಣ ಬೇರೆ ವಕೀಲರನ್ನು ಸಂಪರ್ಕಿಸಿ ಅವರ ಮೂಲಕ ಕೇಸ್ ದಾಖಲಿಸಿದ್ದೇನೆ. ಇದರ ನಡುವೆ, ಒಂದು ಲಾಯರ್ ನೋಟಿಸ್ ಬಂತು. ಅದೂ ಅಲ್ಲದೆ, ತಡೆಯಾಜ್ಞೆಯೂ ಬಂತು.

ಪ್ರಜ್ವಲ್ ರೇವಣ್ಣ ಅವರು ಕೋರ್ಟ್‌ಗೆ ಹೋಗಿ, ಅವರ ಅಶ್ಲೀಲ ವಿಡಿಯೋ ಬಹಿರಂಗಗೊಳಿಸದಂತೆ ತಂದ ತಡೆಯಾಜ್ಞೆ ಅದಾಗಿತ್ತು. ಅದು ಏನೆಂದು ಅರ್ಥವಾಗದೇ ಮತ್ತೆ ವಕೀಲರಾಗಿದ್ದ ಬಿಜೆಪಿ ಮುಖಂಡ ಜಿ.ದೇವರಾಜೇ ಗೌಡ ಅವರ ಬಳಿ ಹೋಗಿದ್ದೆ. ಅವರು ನ್ಯಾಯ ಒದಗಿಸುವುದಾಗಿ ಹೇಳುತ್ತ, ಕಾನೂನು ಮಾರ್ಗದಲ್ಲಿ ಹೋದರೆ ನ್ಯಾಯ ಸಿಗದು. ಸುದ್ದಿಗೋಷ್ಠಿ ಮಾಡಿ ಜನರಿಗೆ ತಿಳಿಸೋಣ ಎಂದು ಹೇಳಿದ್ದರು. ಅದರಂತೆ ಅಂದು ಕೂಡ ಸುದ್ದಿಗೋಷ್ಠಿ ಮಾಡಿ, ನನಗೆ ಆಗಿದ್ದ ಅನ್ಯಾಯವನ್ನು ತೋಡಿಕೊಂಡಿದ್ದೆ ಎಂದಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.