'ಅಯ್ಯೋ ತಗಡೆ' ಎಂದ ದರ್ಶನ್ ಅವರನ್ನು ವೇದಿಕೆ ಮೇಲೆ ಹಾಡಿ ಹೊಗಳಿದ ಪ್ರಕಾಶ್ ರಾಜ್

 | 
Ghh

ಅಲ್ಲೊಂದು ಇಲ್ಲೊಂದು ಹೇಳಿಕೆ ನೀಡಿ ಗಮನ ಸೆಳೆಯುವ ಪ್ರಕಾಶ್ ರಾಜ್ ಇದೀಗ ಹೊಸ ಹೇಳಿಕೆ ನೀಡಿದ್ದಾರೆ. ಚಾಲೆಂಜಿಂಗ್​ ಸ್ಟಾರ್​​ ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್​​ ಮಧ್ಯೆ ಜಗಳ ಮುಂದುವರಿದಿದೆ. ನಿರ್ಮಾಪಕ ಉಮಪತಿ ಅವರಂತೂ ಈ ವಿಚಾರದ ಬಗ್ಗೆ ಪದೇ ಪದೇ ಪ್ರಸ್ತಾಪ ಮಾಡುತ್ತಲೇ ಇದ್ದಾರೆ. ಈ ಮಧ್ಯೆ ಬಹುಭಾಷಾ ನಟ ಪ್ರಕಾಶ್​ ರಾಜ್​​ ಅವರು ಮಾತಾಡಿದ್ದಾರೆ.

ಖಾಸಗಿ ಚಾನೆಲ್​ವೊಂದಕ್ಕೆ ಸಂದರ್ಶನದಲ್ಲಿ ಮಾತಾಡಿದ ನಟ ಪ್ರಕಾಶ್​ ರಾಜ್​​, ನಾನು ಇಬ್ಬರು ಮಾತಾಡಿದ್ದು ನೋಡ್ತಾ ಇದೀನಿ. ಭಾಷೆ ಸರಿ ಇಲ್ಲ, ಕನ್ನಡ ಭಾಷೆಯನ್ನ ನೀವು ಅಪ್ಪಾಜಿ ಹತ್ತಿರವೇ ಕಲಿಯಬೇಕು. ಭಾಷೆ ಅಂದರೆ ಕನ್ನಡ ಮಾತಾಡೋದಲ್ಲ, ಕನ್ನಡ ಎಂದರೆ ವಿನಯ, ಕನ್ನಡ ಎಂದರೆ ಜ್ಞಾನ, ನಿಮ್ಮ ಅನುಭವ, ನಿಮ್ಮ ಸೌಂದರ್ಯ ಹೊರಗೆ ಬರುತ್ತೆ. ಇಬ್ಬರ ಭಾಷೆ ಕೇಳಕ್ಕೆ ಕಷ್ಟ ಆಗುತ್ತೆ, ಮುಜುಗರ ಆಗುತ್ತೆ ಎಂದರು.

ಯಾರು ಸರಿ ತಪ್ಪು ಅನ್ನೋದಲ್ಲ. ನಮಗೆ ಆ ರೀತಿ ಭಾಷೆ ಕೇಳೋಕೆ ಮುಜುಗರ ಅನಿಸುತ್ತೆ. ನಾವು ಒಂದು ಸಲ ಅಪ್ಪಾಜಿ ಅವರು ಏನು ಮಾತಾಡ್ತಾ ಇದ್ರು ಎಂದು ನೋಡಬೇಕು. ಅವರ ಭಾಷೆಯಲ್ಲಿದ್ದ ಧೀಮಂತಿಕೆ, ಒಂದು ಘನತೆ, ಒಂದು ಗಾಂಭೀರ್ಯ, ಒಂದು ಪ್ರೀತಿ ಕಲಿಯಬೇಕು. ಜನರ ಪ್ರೀತಿ ಕಲಾವಿದರಿಗೆ ಸಿಕ್ಕಾಗ ಸುಂದರ ಆಗಬೇಕೇ ಹೊರತು ಅಸಹ್ಯ ಆಗಬಾರದು ಎಂದರು.

ವೇದಿಕೆ ಮೇಲೆ ಇದ್ದಾಗ ಸರಿಯಾಗಿ ಮಾತಾಡಬೇಕು. ರಸ್ತೆಯಲ್ಲಿ ಯಾರೋ ಹೇಗೋ ಮಾತಾಡಿದ್ರು ಎಂದು ನಾವು ಮಾತಾಡಕ್ಕೆ ಆಗಲ್ಲ. ಪ್ರೀತಿಯಿಂದ ಒಂದು ಸ್ಥಾನದಲ್ಲಿ ನೆಲೆಸಿದ್ದಾಗ 10 ಜನಕ್ಕೆ ಮಾದರಿ ಆಗೋ ಕೆಲಸ ಮಾಡಬೇಕು. ನಮ್ಮ ಮಾತುಗಳ ಮೂಲಕ, ನಮ್ಮ ಅನುಭವದ ಮೂಲಕ, ನಾವು ಹಂಚಿಕೊಳ್ಳೋ ಮೂಲಕ, ದರ್ಶನ್​​ಗೆ ಸಿಕ್ಕ ಸ್ಥಾನ ಎಲ್ಲರಿಗೂ ಸಿಗಲ್ಲ. ನಿಮ್ಮ ಮಾತು ಕೇಳುವರು ಇದ್ದಾಗ ನೋಡಿಕೊಂಡು ಮಾತಾಡಬೇಕು ಎಂದು ನುಡಿದು ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.