ಶ್ರೀಗಳ ಮಾತು ಕೇಳದೆ ತಂದೆ ತಾಯಿ ಬಳಿ ಹೋದ ಪ್ರತಾಪ್, ಇನ್ನುಮುಂದೆ ಶನಿ ಕಾಟ ಶುರು
ಬಿಗ್ ಬಾಸ್ ಮನೆಯಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಅಗಮಿಸಿದ್ದರು .ನೂತನ ವರ್ಷದಲ್ಲಿ ಸ್ಪರ್ಧಿಗಳ ಭವಿಷ್ಯ ಹೇಗಿರಲಿದೆ ಎಂದು ಹೇಳಿದ್ದಾರೆ. ಮುಂದಿನ ವರ್ಷ ಹೇಗಿದೆ ಎಂದು ಎಂದು ಗುರೂಜಿ ಹೇಳಿದ್ದಾರೆ. ಗುರೂಜಿ ಭವಿಷ್ಯ ಕೆಲವರಿಗೆ ಖುಷಿ ಕೊಟ್ರೆ ಇನ್ನು ಕೆಲವರ ಕಣ್ಣಲ್ಲಿ ನೀರು ತರಿಸಿತ್ತು.
ಇದನ್ನು ಹೇಳಲು ಬೇಜಾರಾಗ್ತಿದೆ ಆದ್ರೆ ನೀನು ಕುಟುಂಬದಿಂದ ದೂರ ಇರಬೇಕು ಎಂದು ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಹೇಳಿದ್ದಾರೆ. ಕುಟುಂಬ ಜೀವನ ನಿನಗೆ ಸರಿ ಹೊಂದಲ್ಲ. ದೂರ ಇದ್ದು ಧೂಪ ಆಗ್ತಿಯೋ, ಹತ್ತಿರ ಇದ್ದು ಹೇಸಿಗೆ ಆಗ್ತಿಯೋ ನಿನಗೆ ಬಿಟ್ಟಿದ್ದು ಎಂದು ಸ್ವಾಮೀಜಿ ಹೇಳಿದ್ರು.ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಭವಿಷ್ಯ ಕೇಳಿ ಡ್ರೋನ್ ಪ್ರತಾಪ್ ಕಣ್ಣೀರು ಹಾಕಿದ್ದರು.3 ವರ್ಷಗಳ ಬಳಿಕ ಅಪ್ಪ-ಅಮ್ಮನನ್ನು ಬಿಗ್ ಬಾಸ್ ಮನೆಯಲ್ಲಿ ಭೇಟಿಯಾದ ಡ್ರೋನ್ ಪ್ರತಾಪ್ಗೆ ಸ್ವಾಮೀಜಿ ಮಾತು ದೊಡ್ಡ ಆಘಾತಕ್ಕೆ ಕಾರಣವಾಗಿತ್ತು.
ಇತ್ತೀಚಿಗಷ್ಟೇ ಕುಟುಂಬದ ಜೊತೆ ಒಂದಾಗಿದ್ದ ಡ್ರೋನ್ ಪ್ರತಾಪ್, ಸ್ವಾಮೀಜಿ ಮಾತು ಕೇಳಿ ಕಣ್ಣೀರು ಹಾಕಿದ್ರು. ಆಘಾತಕ್ಕೂ ಒಳಗಾಗಿದ್ದರು. ಆದ್ರೆ ಬಿಗ್ಬಾಸ್ ಮನೆಯಿಂದ ಆಚೆ ರನ್ನರ್ ಅಪ್ ಪಟ್ಟ ಹೊತ್ತು ಬಂದಮೇಲೆ ಹೊಸ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಕುರಿತು ನುಡಿದಿದ್ದಾರೆ.ಬಿಗ್ ಬಾಸ್ ಬಳಿಕ ಸ್ಪರ್ಧಿಗಳು ನಾನಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಬಿಗ್ ಬಾಸ್ ನಲ್ಲಿ ರನ್ನರ್ ಅಪ್ ಆಗಿ ಮಿಂಚಿದ ಡ್ರೋನ್ ಪ್ರತಾಪ್ ಅವರು ಮತ್ತೊಂದು ಕಾರ್ಯಕ್ರಮದಲ್ಲಿ ಭಾಗಿಯಾಗಲು ರೆಡಿಯಾಗಿದ್ದಾರೆ ಎನ್ನಲಾಗಿದೆ.
ಗಿಚ್ಚ ಗಿಲಿ ಗಿಲಿ ಕಾರ್ಯಕ್ರಮದ ಬಗ್ಗೆ ಕರ್ನಾಟಕದ ಜನತೆಗೆ ಗೊತ್ತೇ ಇದೆ. ಕಳೆದೆರೆಡು ಸೀಸನ್ ಗಳ ಬಳಿಕ ಇದೀಗ ಮೂರನೇ ಸೀಸನ್ ಆರಂಭಕ್ಕೆ ದಿನಗಣನೆ ಬಾಕಿ ಉಳಿದಿದೆ. ಈ ಕಾರ್ಯಕ್ರಮದಲ್ಲಿ ಈ ಬಾರಿ ಹೊಸ ಸ್ಪರ್ಧಿಗಳು ಭಾಗಿಯಾಗಲಿದ್ದಾರೆ. ಇದರಲ್ಲಿ ಈಗಷ್ಟೇ ಬಿಗ್ ಬಾಸ್ ಕಾರ್ಯಕ್ರಮ ಮುಗಿಸಿರುವ ಸ್ಪರ್ಧಿಗಳು ಕೂಡ ಇರಲಿದ್ದಾರೆ.ಬಿಗ್ ಬಾಸ್ ರನ್ನರ್ ಅಪ್ ಡ್ರೋನ್ ಪ್ರತಾಪ್ ಅವರು ಗಿಚ್ಚ ಗಿಲಿ ಗಲಿ ಸೀಸನ್ -3 ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆ ಮೂಲಕ ಹಾಸ್ಯಗಾರನಾಗಿ ಪ್ರತಾಪ್ ವೀಕ್ಷಕರ ಮನಗೆಲ್ಲಲು ರೆಡಿಯಾಗಿದ್ದಾರೆ. ಸ್ವಾಮೀಜಿ ಮಾತು ಮರೆತಿದ್ದಾರೆ ಎನ್ನಲಾಗುತ್ತಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.