ಆಟೋ ಚಾಲಕಿಗೆ ಮಧ್ಯರಾತ್ರಿ ದುಡ್ಡು ಕೊಟ್ಟು ಸಹಾಯ ಮಾಡಿದ ಪ್ರತಾಪ್, ಎಲ್ಲೆಡೆ ಬಾರಿ ಮೆಚ್ಚುಗೆ

 | 
Ghhh

ಈಗ ಬಿಗ್​ಬಾಸ್​​ ಖ್ಯಾತಿಯ ಡ್ರೋನ್​ ಪ್ರತಾಪ್​ದ್ದೇ ಹವಾ. ಇವರಿಗಾಗಿ ಫ್ಯಾನ್ಸ್​ ಪೇಜ್​ ಅಸಂಖ್ಯ ಹುಟ್ಟುಕೊಂಡಿದೆ. ಪ್ರತಾಪ್​ ಎಲ್ಲಿ ಹೋದರೂ ಅದರ ಬಗ್ಗೆ ಅಪ್​ಡೇಟ್​ ಕೊಡುತ್ತಲೇ ಇರುತ್ತಾರೆ. ಅದೇ ರೀತಿ ಬಿಗ್​ಬಾಸ್​ ಮನೆಗೆ ಹೋಗಿ ಬಂದ ಮೇಲೆ ಇವರ ಅಭಿಮಾನಿಗಳ ಬಳಗ ಬಹುದೊಡ್ಡದಾಗಿಯೇ ಇದೆ. ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರನ್ನು ಮಾತಿನ ಮೋಡಿಯಲ್ಲಿ ಸಿಲುಕಿಸಿ ಮೋಸ, ವಂಚನೆ ಮಾಡಿರುವ ಗಂಭೀರ ಆರೋಪ ಎದುರಿಸುತ್ತಿದ್ದ ಡ್ರೋನ್​ ಪ್ರತಾಪ್​ಗೆ, ಬಿಗ್​ಬಾಸ್​ ಕೃಪೆಯಿಂದಾಗಿ ಅಭಿಮಾನಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ.

 ಬಿಗ್​ಬಾಸ್​ನಲ್ಲಿ ರನ್ನರ್​ ಅಪ್​ ಆದ ಬಳಿಕ ಡ್ರೋನ್​ ಹೀರೋ ಆಗಿಬಿಟ್ಟಿದ್ದಾರೆ. ಯಾವುದೇ ಸ್ಟಾರ್​ ನಟರಿಗೂ ಕಡಿಮೆ ಇಲ್ಲದಂತೆ ಅದ್ಧೂರಿ ಸ್ವಾಗತ ಇವರಿಗೆ ಸಿಗುತ್ತಿದೆ. ಕೊನೆಯವರೆಗೂ ಬಿಗ್​ಬಾಸ್​ನಲ್ಲಿ ಇರುತ್ತೇನೆ. ಫಿನಾಲೆಯಲ್ಲಿ ಸುದೀಪ್​ ಅವರು ಎತ್ತಲು ಹಿಡಿಯುವ ಕೈಯಲ್ಲಿ ನನ್ನದೂ ಒಂದಾಗಿರುತ್ತದೆ ಎಂದು ಅಂದುಕೊಂಡಿರಲೇ ಇಲ್ಲ. ಮೊದಲ ವಾರದಲ್ಲಿಯೇ ಅಲ್ಲಿ ನಡೆದ ಕೆಲವು ಘಟನೆಗಳನ್ನು ನೋಡಿ ಶೀಘ್ರವೇ ಬಿಗ್​ಬಾಸ್​ನಿಂದ ಹೊರಕ್ಕೆ ಹೋಗುತ್ತೇನೆ ಅಂದುಕೊಂಡಿದ್ದೆ. ಆದರೆ ಎಲ್ಲರ ಆಶೀರ್ವಾದದಿಂದ ರನ್ನರ್​ ಅಪ್​ ಆದೆ ಎಂದು ಹೇಳಿಕೊಂಡಿರುವ ಡ್ರೋನ್​ ಪ್ರತಾಪ್​ ಅವರಿಗೆ ಬಿಗ್​ಬಾಸ್​ ಹೊಸದೊಂದೇ ಜೀವನ ಕೊಟ್ಟಿದೆ.

ಇದೀಗ ಡ್ರೋನ್​ ಪ್ರತಾಪ್​ ಆಟೋ ಓಡಿಸಿದ್ದು, ಅದರ ವಿಡಿಯೋ ಅನ್ನು ಫ್ಯಾನ್ಸ್​ ಪೇಜ್​ ಶೇರ್​ ಮಾಡಿಕೊಂಡಿದೆ. ಆಟೋ ರಾಜ ಶಂಕರ್​ನಾಗ್​ ಅವರಿಗೆ ಜೈ ಎನ್ನುವ ಮೂಲಕ ಆಟೋ ಓಡಿಸುವ ಎಲ್ಲರಿಗೂ ಪ್ರತಾಪ್​ ಶುಭ ಹಾರೈಸಿದ್ದಾರೆ. ಇವರ ಈ ವಿಡಿಯೋಗೆ ಸಹಸ್ರಾರು ಮಂದಿ ಕಮೆಂಟ್​ ಮಾಡಿದ್ದು, ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ನಿಮ್ಮ ಒಳ್ಳೆಯ ಗುಣ ನಿಮ್ಮನ್ನು ಕಾಪಾಡುತ್ತದೆ ಎಂದಿದ್ದಾರೆ. ಯಾರು ಏನೇ ಅಂದರೂ ಕ್ಯಾರೇ ಮಾಡಬೇಡಿ ಎಂದೆಲ್ಲಾ ಹೇಳಿದ್ದಾರೆ. ಆದರೆ ಒಂದಿಷ್ಟು ಮಂದಿ ಇವರ ಕಾಲೆಳೆದಿದ್ದಾರೆ. 

ಡ್ರೋನ್​ ಹೇಗೆ ಓಡಿಸಿದ್ದೆ ಎಂದು ಹಿಂದೊಮ್ಮೆ ಹೇಳುವಾಗ ಪ್ರತಾಪ್​, 100 ಮೀಟರ್​ ಹೋಯ್ತು, ಮುನ್ನೂರು ಮೀಟರ್ ಹೋಯ್ತು, ಆರುನೂರು ಮೀಟರ್ ಹೋಯ್ತು ಎಂದೆಲ್ಲಾ ಹೇಳಿದ್ದರು. ಇದನ್ನೇ ಇಟ್ಟುಕೊಂಡು ಈಗ ಆಟೋ ಹೀಗೆಲ್ಲಾ ಓಡಿತು ಎಂದು ಹೇಳೋಕ್ಕೆ ಇಷ್ಟಪಡ್ತಿನಿ ಎಂದು ಕಮೆಂಟ್​ ಮಾಡಲಾಗಿದೆ. ಇನ್ನು ಕೆಲವರು ಏನಾದ್ರೂ ಓಡಿಸಪ್ಪಾ, ರೀಲ್​ ಮಾತ್ರ ಬಿಡಬೇಡಪ್ಪಾ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರಂತೂ ಈ ಆಟೋನೂ ನೀನೇ ರೆಡಿ ಮಾಡಿದ್ದಾ ಅಂತ ಕಾಲೆಳೆಯುತ್ತಿದ್ದಾರೆ!

ಇನ್ನು ಯಾರೇನೇ ಹೇಳಿದರೂ ತಲೆ ಕೆಡಿಸಿಕೊಳ್ಳದ ಡ್ರೋನ್ ಪ್ರತಾಪ್ ಆಟೋ ಓಡಿಸುತ್ತಾ ಬದುಕು ಸಾಗಿಸುತ್ತಿದ್ದ ಮಹಿಳೆಯೊಬ್ಬರಿಗೆ 2ಸಾವಿರ ರೂಪಾಯಿ ಹಣ ನೀಡಿ. ಮಾನವೀಯತೆ ಮೆರೆದಿದ್ದಾರೆ.ಈಚೆಗಷ್ಟ ಡ್ರೋನ್​ ಪ್ರತಾಪ್​ ಆಟೋ ಓಡಿಸಿದ್ದು, ಅದರ ವಿಡಿಯೋ ಅನ್ನು ಫ್ಯಾನ್ಸ್​ ಪೇಜ್​ ಶೇರ್​ ಮಾಡಿಕೊಂಡಿತ್ತು. ಆಟೋ ರಾಜ ಶಂಕರ್​ನಾಗ್​ ಅವರಿಗೆ ಜೈ ಎನ್ನುವ ಮೂಲಕ ಆಟೋ ಓಡಿಸುವ ಎಲ್ಲರಿಗೂ ಪ್ರತಾಪ್​ ಶುಭ ಹಾರೈಸಿದ್ದರು. ಇವರ ಈ ವಿಡಿಯೋಗೆ ಸಹಸ್ರಾರು ಮಂದಿ ಕಮೆಂಟ್​ ಮಾಡಿದ್ದು, ಹಲವರು ಮೆಚ್ಚುಗೆ ಸೂಚಿಸಿದ್ದರು. ನಿಮ್ಮ ಒಳ್ಳೆಯ ಗುಣ ನಿಮ್ಮನ್ನು ಕಾಪಾಡುತ್ತದೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.