ಹುಟ್ಟಿದ ಊರಿನಲ್ಲಿ ಪ್ರತಾಪ್ ಕಟೌಟ್, ಆದರೆ ಬಿಗ್ ಬಾಸ್ ವಿನ್ನರ್ ವಿನಯ್ ಎಂದ ಸುದೀಪ್

 | 
ಲತಚ

ಬಿಗ್ ಬಾಸ್‌ ಕನ್ನಡ 10 ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಜರುಗುತ್ತಿದೆ. ಒಟ್ಟು 6 ಸ್ಪರ್ಧಿಗಳು ಗ್ರ್ಯಾಂಡ್ ಫಿನಾಲೆ ತಲುಪಿದ್ದಾರೆ. ವಿನಯ್, ಕಾರ್ತಿಕ್, ಸಂಗೀತಾ, ವರ್ತೂರು ಸಂತೋಷ್, ತುಕಾಲಿ ಸಂತು ಹಾಗೂ ಡ್ರೋನ್ ಪ್ರತಾಪ್ ಟಾಪ್ 6 ಹಂತದಲ್ಲಿದ್ದಾರೆ. ಗ್ರ್ಯಾಂಡ್‌ ಫಿನಾಲೆ ವೇದಿಕೆಯಲ್ಲಿ ‘ಬಿಗ್ ಬಾಸ್‌’ ಹಾಗೂ ಕಿಚ್ಚ ಸುದೀಪ್‌ಗೆ ಡ್ರೋನ್ ಪ್ರತಾಪ್‌ ತಂದೆ, ತಾಯಿ ಧನ್ಯವಾದ ಅರ್ಪಿಸಿದ್ದಾರೆ.

 ಬಿಗ್ ಬಾಸ್‌ ವೇದಿಕೆಯಿಂದ ನಮ್ಮ ಮಗ ನಮಗೆ ವಾಪಸ್ ಸಿಕ್ಕಿದ್ದಾನೆ. ಬದುಕಿರೋವರೆಗೂ ನಾವು ನಿಮಗೆ ಚಿರಋಣಿ ಎಂದಿದ್ದಾರೆ ಡ್ರೋನ್ ಪ್ರತಾಪ್‌ ತಂದೆ - ತಾಯಿ.ಜನರಿಗೆ ನಾವು ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲಲ್ಲ. ನಾವು ಎಲ್ಲೇ ಹೋದರೂ, ಪ್ರತಾಪ್ ತಂದೆನಾ ಅಂತ ಗೌರವಿಸುತ್ತಾರೆ. ಅದು ಸಿಕ್ಕಿದ್ದು ಈ ವೇದಿಕೆಯಿಂದ. ಈ ವೇದಿಕೆ ನನ್ನ ಮಗನನ್ನ ಮನುಷ್ಯನನ್ನಾಗಿ ಮಾಡಿತು. 
 
ಈ ವೇದಿಕೆ ಸಿಕ್ಕಿಲ್ಲ ಅಂದಿದ್ದರೆ ಆ ಮಟ್ಟಕ್ಕೆ ಹೋಗುತ್ತಿರಲಿಲ್ಲ. ಈ ವೇದಿಕೆ ಹಾಗೂ ಕರ್ನಾಟಕದ ಜನತೆಗೆ ನನ್ನ ನಮನ ಎಂದು ಹೇಳಿ ಡ್ರೋನ್ ಪ್ರತಾಪ್ ತಂದೆ ಸಂತಸ ವ್ಯಕ್ತಪಡಿಸಿದರು. ಪ್ರತಾಪ್ ಊರಲ್ಲಿ ಸಹ 6ಅಡಿ ಕಟ್ಟೌಟ್ ಹಾಕಿಸಿ ಪ್ರತಾಪ್ ಗೆದ್ದು ಬಾ ಎಂದು ಊರವರು ಹಾರೈಸಿದ್ದಾರೆ. ಅಲ್ಲದೆ ನೀನು ಒಳ್ಳೆಯ ಸ್ಪರ್ಧಿ ಚೆನ್ನಾಗಿ ಆಟ ಅಡಿದ್ದೀಯ ಗೆಲುವು ನಿನ್ನದೆ ಎಂದು ಹಾರೈಸಿದ್ದಾರೆ. ಇದನ್ನೆಲ್ಲ ಕಂಡು ಅವರ ತಂದೆ ತಾಯಿ ಕೂಡ ಈದೀಗ ಮಗನ ಬಗ್ಗೆ ಹೆಮ್ಮ ಆಗುತ್ತದೆ ಎಂದು ಹೇಳಿದ್ದಾರೆ. 

ಡ್ರೋನ್ ಪ್ರತಾಪ್ ಅಭಿಮಾನಿಗಳು ಸಹ ಅವರ ಗೆಲುವನ್ನು ಬಯಸುತ್ತಿದ್ದಾರೆ. ಕೆಲವು ಘಟನೆಗಳಿಂದ ದೂರ ಆಗಿದ್ವಿ. ಇದು ಲೈಫ್ ಚೇಂಜಿಂಗ್ ಮೊಮೆಂಟ್. ಈ ವೇದಿಕೆಗೆ ನಾನು ಬಂದಿಲ್ಲ ಅಂದಿದ್ದರೆ, ನೀವು ಇರಲಿಲ್ಲ ಅಂದಿದ್ದರೆ, ಈ ಸ್ಪರ್ಧಿಗಳೂ ಇರಲಿಲ್ಲ ಅಂದಿದ್ದರೆ, ಕೆಲ ಘಟನೆಗಳು ನಡೆಯಲಿಲ್ಲ ಅಂದಿದ್ದರೆ.. ಇದ್ಯಾವುದೂ ಸಾಧ್ಯವಾಗುತ್ತಿರಲಿಲ್ಲ ಸರ್. ಎಲ್ಲವೂ ಕೂಡಿಬಂದಿದೆ ಸರ್. ನಿಮಗೆ ನನ್ನ ಕಡೆಯಿಂದ ದೊಡ್ಡ ಥ್ಯಾಂಕ್ಸ್ ಸರ್‌ ಅಭಿಮಾನಿಗಳೇ ನಿಮಗೆ ಧನ್ಯವಾದ ಎಂದಿದ್ದಾರೆ  ಡ್ರೋನ್ ಪ್ರತಾಪ್. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.