ಮಧ್ಯರಾತ್ರಿ ಬಿಗ್ ಬಾಸ್ ಮನೆಯಿಂದ ಪ್ರತಾಪ್ ಔಟ್, ವೀಕ್ಷಕರಿಗೆ ಬಾರಿ ನಿರಾಶೆ

 | 
Hd

ಬಿಗ್ ಬಾಸ್ ಸೀಸನ್ 10 ಫಿನಾಲೆಗೆ ದಿನಗಣನೆ ಶುರುವಾಗಿದೆ. ಫಿನಾಲೆ ಸ್ಪರ್ಧೆಗಳಲ್ಲಿ ಯಾರು ಟ್ರೋಫಿ ಗೆಲ್ಲುತ್ತಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ದಿನ ಸಮೀಪಿಸುತ್ತಿದ್ದಂತೆ ಹೆಚ್ಚಾಗುತ್ತಿದೆ. ಈ  ಬಾರಿ ದೊಡ್ಮನೆ ಆಟ ನೂರು ದಿನಕ್ಕೂ ಹೆಚ್ಚು ನಡೆದಿದೆ. ಅಂತಿಮವಾಗಿ ಆರು ಜನ ಮನೆಯಲ್ಲಿ ಉಳಿದಿದ್ದಾರೆ. ವಿನಯ್, ಸಂಗೀತಾ, ಕಾರ್ತಿಕ್, ತುಕಾಲಿ ಸಂತೋಷ್, ವರ್ತೂರು ಸಂತೋಷ್ ಹಾಗೂ ಡ್ರೋನ್ ಪ್ರತಾಪ್ ಬಿಗ್ ಬಾಸ್ ಟ್ರೋಫಿ ಗೆಲ್ಲುವ ಹಾದಿಯಲ್ಲಿದ್ದಾರೆ.

ಬಿಗ್ ಬಾಸ್ ಆಟ ಅಂತಿಮ ಘಟ್ಟದಲ್ಲಿದ್ದು, ಮನೆಯಲ್ಲಿನ ಸ್ಪರ್ಧಿಗಳು ಫಿನಾಲೆ ವೇದಿಕೆ ಹತ್ತಲು ಕಾಯುತ್ತಿದ್ದಾರೆ. ಈ ನಡುವೆ ಆರು ಜನ ಸ್ಪರ್ಧೆಯಲ್ಲಿ ಒಬ್ಬರು ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ತನ್ನ ನಿರ್ಧಾರ ಹಾಗೂ ವ್ಯಕ್ತಿತ್ವದಿಂದ ಗಮನ ಸೆಳೆದು ಅಪಾರ ಪ್ರೇಕ್ಷಕರ ಬೆಂಬಲ ಪಡೆದುಕೊಂಡಿದ್ದ ಡ್ರೋನ್ ಪ್ರತಾಪ್ ಫಿನಾಲೆಗೆ ದಿನಗಣನೆ ಇರುವಾಗಲೇ ದೊಡ್ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ಹರಿದಾಡುತ್ತಿದೆ.

ಕಿಚ್ಚ ಸುದೀಪ್ ಕಳೆದ ವಾರದ ವೀಕೆಂಡ್ ನಲ್ಲಿ ಆರು ಜನರಲ್ಲಿ ಒಬ್ಬರು ಎಲಿಮಿನೇಟ್ ಆಗುತ್ತಾರೆ ಎಂದಿದ್ದರು. ಹೇಗೆ ಆಗ್ತಾರೆ, ಯಾವಾಗ ಆಗ್ತಾರೆ ಎನ್ನುವುದನ್ನು ಕುತೂಹಲವಾಗಿಟ್ಟಿದ್ದರು. ಇದೀಗ ಡ್ರೋನ್ ಪ್ರತಾಪ್ ಎಲಿಮಿನೇಟ್ ವಿಚಾರ ಹರಿದಾಡಿದ್ದು, ಕಿಚ್ಚ ಸುದೀಪ್ ಹೇಳಿದಂತೆ ಒಬ್ಬರು ಎಲಿಮಿನೇಟ್ ಆಗಿರಬಹುದು ಎನ್ನಲಾಗುತ್ತಿದೆ. ಆದರೆ ಕೆಲವರು ಇದು ಫ್ರಾ‌ಂಕ್ ಮಾಡಲು ಮಾಡಿರಬಹುದು ಹೇಳುತ್ತಿದ್ದಾರೆ. 

ಡ್ರೋನ್ ಪ್ರತಾಪ್ ಹೊರಗೆ ಹೋಗಿದ್ದಾರೋ ಇಲ್ವೋ ಎನ್ನುವುದರ ಬಗ್ಗೆ ಯಾವ ಸ್ಪಷ್ಟನೆ ಇದುವರೆಗೆ ಸಿಕ್ಕಿಲ್ಲ.ಡ್ರೋನ್ ಪ್ರತಾಪ್ ಮಂಗಳವಾರವೇ ಬಿಗ್ ಬಾಸ್​ ಮನೆಯಿಂದ ಹೊರಗೆ ಹೋಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿರುವ ಸುದ್ದಿ ನೋಡಿ ಡ್ರೋನ್ ಫ್ಯಾನ್ಸ್ ಶಾಕ್ ಆಗಿರೋದಂತು ಸತ್ಯ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.