ಗಿಜ್ಜಿ ಗಿಲಿಗಿಲಿಯಲ್ಲಿ ಡ್ಯಾನ್ಸ್ ಮಾಡಲು ತಯಾರಿ ನಡೆಸುತ್ತಿರುವ ಪ್ರತಾಪ್, ಎದ್ದು ಬಿದ್ದು ನಕ್ಕ ನೆಟ್ಟಿಗರು

 | 
Hs

ಬಿಗ್ ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋ ಮುಕ್ತಾಯವಾಗಿದೆ. ಈ ಶೋನಲ್ಲಿ ಯಾರೂ ನಿರೀಕ್ಷೆ ಮಾಡದಂತಹ ರಿಸಲ್ಟ್ ಸಿಕ್ಕಿದೆ. ಘಟಾನುಘಟಿ ಸ್ಪರ್ಧಿಗಳನ್ನು ಹಿಂದಿಕ್ಕಿ ಡ್ರೋನ್ ಪ್ರತಾಪ್ ಅವರು ರನ್ನರ್ ಅಪ್ ಆಗಿ, ಹೊರಹೊಮ್ಮಿದ್ದು ಈ ಸಲದ ವಿಶೇಷ. ಸದ್ಯ ಡ್ರೋನ್‌ ಪ್ರತಾಪ್ ಅವರು ಕಲರ್ಸ್ ಕನ್ನಡ ವಾಹಿನಿಯ ಗಿಚ್ಚಿ ಗಿಲಿ ಗಿಲಿ ಕಾಮಿಡಿ ಶೋನಲ್ಲೂ ಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಅದಕ್ಕಾಗಿ ಅವರು ಡ್ಯಾನ್ಸ್ ಪ್ರಾಕ್ಟೀಸ್ ಮಾಡಿದ್ದಾರೆ. ಸ್ಟೇಜ್ ಮೇಲೆ ಸಕತ್ತಾಗಿ ಡ್ಯಾನ್ಸ್ ಮಾಡುವ ಮೂಲಕ ಇನ್ನಷ್ಟು ಜನರ ಮನಗೆಲ್ಲಬಹುದು ಎಂಬುದು ಅವರ ಅಭಿಪ್ರಾಯವಾಗಿದೆ. ಈ ಬಾರಿ ಬಿಗ್ ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಬಹುತೇಕ ಸ್ಪರ್ಧಿಗಳು ಎಂಟರ್‌ಟೇನ್‌ಮೆಂಟ್ ಇಂಡಸ್ಟ್ರಿಯಿಂದ ಬಂದವರು. ಆದರೆ ಪ್ರತಾಪ್ ಸಾಮಾನ್ಯ ವ್ಯಕ್ತಿಯಾಗಿ ಒಳಗೆ ಹೋಗಿದ್ದರು. ಮನರಂಜನೆ ವಿಚಾರ ಬಂದಾಗೆಲ್ಲ, ನಾನು ಎಂಟರ್‌ಟೇನ್‌ಮೆಂಟ್ ಇಂಡಸ್ಟ್ರಿ ಯಿಂದ ಬಂದಿಲ್ಲ.. ಎನ್ನುತ್ತಿದ್ದರು ಪ್ರತಾಪ್. ಇದರ ಬಗ್ಗೆ ಸುದೀಪ್ ಕೂಡ ಮಾತನಾಡಿದ್ದರು.

ಇದೀಗ ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಕಾಮಿಡಿಯೇ ಹೈಲೈಟ್. ಇಂತಹ ಶೋನಲ್ಲಿ ಪ್ರತಾಪ್ ಕಾಮಿಡಿ ಮಾಡ್ತಾರಾ ಅನ್ನೋದು ಕೆಲವರ ಪ್ರಶ್ನೆ. ಅದಕ್ಕೆ ಗಿಚ್ಚಿ ಗಿಲಿ ಗಿಲಿ ಟೀಮ್ ಉತ್ತರ ನೀಡಿದೆ. ಇದರಲ್ಲಿ ನಟನೆ ಗೊತ್ತಿರುವ ಕಲಾವಿದರೇ ಭಾಗವಹಿಸಬೇಕು ಅಂತೇನಿಲ್ಲ. ಯಾರೂ ಬೇಕಾದರೂ ಬರಬಹುದು..ಎಂದು ಟೀಮ್ ಹೇಳಿಕೊಂಡಿದೆ. ಡ್ರೋನ್ ಪ್ರತಾಪ್ ಅವರು ಈ ಸಲ ನಮ್ಮ ಸೀಸನ್‌ನಲ್ಲಿ ಇದ್ದಾರೆ. ಅದು ಒಂದು ವಿಶೇಷತೆ ನಮಗೆ. ಯಾಕೆಂದರೆ, ಅವರನ್ನು ಬಿಗ್ ಬಾಸ್ ಶೋನಲ್ಲಿ ಟಾಪ್ 2ರಲ್ಲಿ ತಂದು ಕೂರಿಸಿದವರು ಕನ್ನಡದ ಜನ. 

ಹೀಗಿರುವಾಗ, ಈ ಶೋನಲ್ಲಿ ಅವರಿದ್ದರೆ ಚೆನ್ನಾಗಿರುತ್ತದೆ ಎಂಬುದು ನಮ್ಮ ಆಲೋಚನೆ. ಹಾಸ್ಯ ಕಲಾವಿದರು ವರ್ಸಸ್ ಹಾಸ್ಯ ಕಲಾವಿದರಲ್ಲಾದವರು ಎಂಬುದೇ ಈ ಶೋನ ಥೀಮ್. ನಟನೆ ಮಾಡದವರನ್ನು ಕರೆದುಕೊಂಡು ಬಂದು, ಅವರಿಂದ ನಟನೆ ಮಾಡಿಸುವುದೇ ಇದರ ಉದ್ದೇಶ. ಆ ಥರ ತುಂಬ ಜನ ನಟನೆ ಗೊತ್ತಿಲ್ಲದವರು ಈ ಶೋನಲ್ಲಿ ಬಂದು, ಆಮೇಲೆ ತಮ್ಮ ನಟನೆ ಮೂಲಕ ಎಲ್ಲರನ್ನೂ ನಗಿಸಿರುವ ಉದಾಹರಣೆಗಳಿವೆ ಎಂದು ಶೋನ ನಿರೂಪಕ ನಿರಂಜನ್ ದೇಶಪಾಂಡೆ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.