ದರ್ಶನ್ ಯಶ್ ಅವರ ಸಿನಿಮಾವನ್ನು ಮೀರಿಸಿದ ಕಲೆಕ್ಷನ್ ಮಾಡುತ್ತೆ ಪ್ರೇಮಲೋಕ; ರವಿಚಂದ್ರನ್

 | 
Uu

ಸ್ಯಾಂಡಲ್‌ವುಡ್‌ನ ಕ್ರೇಜಿ ಸ್ಟಾರ್ ರವಿಚಂದ್ರನ್ ಅತಿ ದೊಡ್ಡ ಕನಸು ಕಂಡಿದ್ದಾರೆ. ತಮ್ಮ ಚಿತ್ರ ಜೀವನದಲ್ಲಿ ಪ್ರೇಮಲೋಕವನ್ನೆ ಕಟ್ಟಿ ಗೆದ್ದು ಬೀಗಿರೋದು ಹಳೆ ಮಾತು. ಆ ದಿನಗಳಲ್ಲಿ ಕ್ರೇಜಿಯ ಈ ಚಿತ್ರ ಹೊಸ ಅಲೆ ಎಬ್ಬಿಸಿತ್ತು. ಇದೀಗ 37 ವರ್ಷ ಬಳಿಕ ಮತ್ತೊಮ್ಮೆ ಪ್ರೇಮಲೋಕದ  ಕನಸನ್ನ ಕ್ರೇಜಿ ಸ್ಟಾರ್ ಕಂಡಿದ್ದಾರೆ. 

ಈ ಚಿತ್ರದಲ್ಲಿ 25 ಹಾಡುಗಳನ್ನ ಪ್ಲಾನ್ ಮಾಡಿದ್ದಾರೆ. ತಮ್ಮ ಇಬ್ಬರೂ ಮಕ್ಕಳನ್ನ ಈ ಚಿತ್ರದಲ್ಲಿ ವಿಭಿನ್ನವಾಗಿಯೇ ತೋರಲಿದ್ದಾರೆ. ಆದರೆ, ಈ ಚಿತ್ರದಲ್ಲಿ ತಮ್ಮ ಪಾತ್ರ ಏನು ಅನ್ನೋದು ರಿವೀಲ್ ಮಾಡಿಲ್ಲ. ಹಾಗಿರೋವಾಗ ಕ್ರೇಜಿ ಸ್ಟಾರ್ ರವಿಚಂದ್ರನ್  ಜನ್ಮ ದಿನಕ್ಕೆ ಈ ಒಂದು ಚಿತ್ರದ ಟ್ರೈಲರ್ ರಿಲೀಸ್ ಆಗುತ್ತದೆ ಅನ್ನೋ ನಿರೀಕ್ಷೆ ಇತ್ತು.

ಕ್ರೇಜಿ ಸ್ಟಾರ್ ರವಿಚಂದ್ರನ್ ಜನ್ಮ ದಿನಕ್ಕೆ ಒಂದು ದೊಡ್ಡ ನಿರೀಕ್ಷೆ ಇತ್ತು. ಜನ್ಮ ದಿನದಂದು ರವಿ ಮಾಮ, ಪ್ರೇಮಲೋಕ-2 ಚಿತ್ರದ ಹೊಸ ಮಾಹಿತಿ ಕೊಡ್ತಾರೆ ಅನ್ನೋ ನಂಬಿಕೆ ಇತ್ತು. ಅದು ಈಗ ಸುಳ್ಳಾಗಿದೆ. ಸ್ವತಃ ರವಿಚಂದ್ರನ್ ಹೇಳಿದ್ದಾರೆ. ಇಲ್ಲಿವರೆಗೂ ಕಾದಿದ್ದೀರಿ. ಇನ್ನು 10 ದಿನ ವೇಟ್ ಮಾಡಿ.ಒಳ್ಳೆ ಒಳ್ಳೆ ಸುದ್ದಿ ಕೊಡ್ತೀನಿ ಅಂತಲೇ ಹೇಳಿಕೊಂಡಿದ್ದಾರೆ.

ಪ್ರೇಮಲೋಕ-2 ಚಿತ್ರದ ಟ್ರೈಲರ್ ರೆಡಿ ಇದೆ. ಜನ್ಮ ದಿನಕ್ಕೇನೆ ರಿಲೀಸ್ ಪ್ಲಾನ್ ಆಗಿತ್ತು. ಆದರೆ , ಜನ್ಮ ದಿನ ಆಚರಣೆ ಹಾಗೂ ಪ್ರೇಮಲೋಕ-2 ಸಿನಿಮಾದ ಟ್ರೈಲರ್ ರಿಲೀಸ್, ಇವರೆಡೂ ಒಟ್ಟಿಗೆ ಬೇಡ ಅನ್ನೋ ಅಭಿಪ್ರಾಯ ಬಂತು. ಹಾಗಾಗಿಯೇ ಮೊದಲು ಜನ್ಮ ದಿನ ಸೆಲೆಬ್ರೇಟ್ ಮಾಡೋಕೆ ಪ್ಲಾನ್ ಮಾಡಿದ್ದೇವು. ಒಂದು ಸಾವಿರ ಕೋಟಿ ಖರ್ಚು ಮಾಡಿ ಆದ್ರೂ ಅಂತದೊಂದು ಸಿನಿಮಾ ಮಾಡಬೇಕು ಆಸೆಯಿತ್ತು ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.