ದಸರಾ ಮೆರವಣಿಗೆಯಲ್ಲಿ ಪುನೀತ್ ರಾಜ್‍ಕುಮಾರ್, ಅಪ್ಪು ಸ್ತಬ್ಧ ಚಿತ್ರ ನೋಡಿ ಫ್ಯಾನ್ಸ್ ಫಿದಾ

 | 
Vc

ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಂತಿಮ ದಿನದ ನವರಾತ್ರಿ ಸಂಭ್ರಮ ಕಳೆಗಟ್ಟಿತ್ತು. ಐತಿಹಾಸಿಕ ಜಂಬೂ ಸವಾರಿಗೂ ಮುನ್ನ ಎಲ್ಲಾ ಜಿಲ್ಲೆಗಳ ಸ್ತಬ್ಧಚಿತ್ರ ಪ್ರದರ್ಶನ ನಡೆಯಿತು. ದಿವಂಗತ ಪುನೀತ್‌ ರಾಜ್‌ ಕುಮಾರ್‌ ಅವರ ಭಾವಚಿತ್ರ ಇದ್ದ ಸ್ತಬ್ದ ಚಿತ್ರ ಗಮನ ಸೆಳೆಯಿತು. ಸ್ತಬ್ಧ ಚಿತ್ರದ ಮುಂಭಾಗದಲ್ಲಿ ಆನೆಗಳ ಹಾಗೂ ಹುಲಿಯ ಬೃಹತ್ ಚಿತ್ರ ಅಳವಡಿಸಲಾಗಿತ್ತು. 

ಹಿಂಭಾಗದಲ್ಲಿ ಪುನೀತ್‌ ಅವರ ಭಾವಚಿತ್ರ ಗಮನ ಸೆಳೆಯಿತು. ಕಳೆದ ಬಾರಿ ಕೂಡ ಚೆಲುವ ಚಾಮರಾಜನಗರ ರಾಯಭಾರಿ ಹಾಗೂ ಚಾಮರಾಜನಗರದ ತವರಿನ ನಂಟು ಹೊಂದಿದ್ದ‌ ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಸ್ತಬ್ಧಚಿತ್ರದ ಮೂಲಕ ಗೌರವ ಸಲ್ಲಿಸಲು ಚಾಮರಾಜನಗರ ಜಿ.ಪಂ‌‌ ಯೋಚಿಸಿ ಗೌರವ ಸಲ್ಲಿಸಿತ್ತು.

ಇದೀಗ ಅಭಿಮಾನಿಗಳು ಅಪ್ಪು ತೇರು ಕಾಣಲು ಕಾತರರಾಗಿದ್ದಾರೆ.‌ ಹನೂರಿನ‌ ಕಲಾವಿದ ಮಹಾದೇವ್ ಎಂಬವರೊಟ್ಟಿಗೆ 15 ಜನರ ತಂಡ ಈ ಸ್ತಬ್ಧ ಚಿತ್ರ ತಯಾರಿಸಿದ್ದು ಪ್ರಕೃತಿ ಮಡಿಲಿನ ಹುಲಿ ಮತ್ತು ಆನೆ ಅರಣ್ಯ ಧಾಮ ಎಂದು ಸ್ತಬ್ಧ ಚಿತ್ರಕ್ಕೆ ಹೆಸರಿಡಲಾಗಿತ್ತು.
ಜಿಲ್ಲೆಯ ಪ್ರಕೃತಿ, ವನ್ಯಜೀವಿ ಸಂಪತ್ತು, ಪವಾಡ ಪುರುಷ ಮಲೆ ಮಹದೇಶ್ವರ ಸ್ವಾಮಿಯನ್ನು ಸ್ತಬ್ಧಚಿತ್ರದಲ್ಲಿ ಬಿಂಬಿಸಲಿದೆ. 

ಸ್ತಬ್ಧಚಿತ್ರದ ಮುಂಭಾಗ ದೊಡ್ಡ ಹುಲಿಯ ಮುಖ ಇತ್ತು.ಹಸಿರು ಆವರಿಸಿರುವ ಬೆಟ್ಟ, ಅಲ್ಲಿ ಆನೆ ಸೇರಿದಂತೆ ಇತರ ಪ್ರಾಣಿಗಳ ಪ್ರತಿಕೃತಿಗಳು. ಮಧ್ಯದಲ್ಲಿ ಹುಲಿಯ ಮೇಲೆ ಕುಳಿತಿರುವ ಮಲೆ ಮಹದೇಶ್ವರ ಸ್ವಾಮಿಯ ಪ್ರತಿಕೃತಿ ಹಾಗೂ ಹಿಂಭಾಗದಲ್ಲಿ ಮಂದಸ್ಮಿತ ಪುನೀತ್‌ರಾಜ್‌ಕುಮಾರ್‌ ಅವರ ದೊಡ್ಡ ಪ್ರತಿಕೃತಿ ಅಳವಡಿಸಲಾಗಿತ್ತು.

ಇನ್ನು ಇದಲ್ಲದೆ ಬಾಗಲಕೋಟೆ ಜಿಲ್ಲೆಯಿಂದ ಬಾದಾಮಿ ಚಾಲುಕ್ಯರು ಮತ್ತು ಬನಶಂಕರಿ ದೇವಿ ದೇವಸ್ಥಾನ, ಬಳ್ಳಾರಿಯಿಂದ ನಾರಿ ಹಳ್ಳ ಆಣೆಕಟ್ಟು, ಬೆಳಗಾವಿಯಿಂದ ಮಹಾಲಿಂಗೇಶ್ವರ ದೇವಸ್ಥಾನ, ಗೋಕಾಕ್ ಫಾಲ್ಸ್, ಬೆಂಗಳೂರಿನಿಂದ ಚಂದ್ರಯಾನ 3, ಚಾಮರಾಜನಗರದಿಂದ ಜಾನಪದ ಭಕ್ತಿಯ ಬೀಡು, ಆನೆ-ಹುಲಿಗಳ ಸಂತೃಪ್ತಿಯ ಕಾಡು, ಮಂಡ್ಯದಿಂದ ಸಾಂಪ್ರದಾಯಿಕ ಆಲೆಮನೆ, ಬೀದರ್‌ನಿಂದ ಕೃಷ್ಣಮೃಗ ಸಂರಕ್ಷಣಾಧಾಮ, ರಾಯಚೂರಿನಿಂದ ನವರಂಗ ದರ್ವಾಜ, ದಾಸರ ಮಂಟಪ ಮತ್ತು ಕಲ್ಲಿದ್ದಲು ವಿದ್ಯುತ್ ಸ್ಥಾವರ.

ಹಾವೇರಿಯಿಂದ ಶಂಖನಾದ ಮೊಳಗಿಸುತ್ತಿರುವ ಕನಕದಾಸರು ಮತ್ತು ಕಾಗಿನೆಲೆ, ರಾಮನಗರದಿಂದ ಚನ್ನಪಟ್ಟಣದ ಬೊಂಬೆಗಳು, ಶಿವಮೊಗ್ಗದಿಂದ ಕುವೆಂಪು ಗುಡವಿ ಪಕ್ಷಿಧಾಮ, ಕೆಳದಿ ಶಿವಪ್ಪ ನಾಯಕ, ತುಮಕೂರಿನಿಂದ ಮೂಡಲಪಾಯ ಯಕ್ಷಗಾನ ಹಾಗೂ ವಾಸ್ತುಶಿಲ್ಪ ಮತ್ತು ಉಡುಪಿಯಿಂದ ತ್ಯಾಜ್ಯ ಮುಕ್ತ ಮತ್ಯ ಸ್ನೇಹಿ ಸಮುದ್ರ, ವಿಜಯನಗರದಿಂದ ವಿಜಯವಿಠಲ ದೇವಾಲಯ ಸೇರಿದಂತೆ 31 ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಗಮನ ಸೆಳೆದವು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.