ಖ್ಯಾ ತ ನಟನ ಜೊತೆ ಪಿ ವಿ ಸಿಂಧು ಡೇಟಿಂಗ್;

 | 
Us

ಸ್ಯಾಂಡಲ್‌ವುಡ್‌ನ ಡೈರೆಕ್ಟರ್ ತರುಣ್ ಸುಧೀರ್ ತಮ್ಮ ಮದುವೆಯನ್ನ ತುಂಬಾನೇ ಚೆನ್ನಾಗಿ ಪ್ಲಾನ್ ಮಾಡಿದ್ದಾರೆ. ಲಗ್ನಪತ್ರಿಕೆಯಲ್ಲೂ ಒಂದಷ್ಟು ವಿಶೇಷತೆಗಳನ್ನ ಪ್ಲಾನ್ ಮಾಡಿದ್ದಾರೆ. ಅದನ್ನ ಸುಮ್ನೆ ನೋಡಿದ್ರೆ ಎಷ್ಟು ಸಿಂಪಲ್ ಅನಿಸುತ್ತದೆ. ಪುಟ್ಟ ಚೀಲ ಇದೆ. ಆ ಚೀಲದಲ್ಲಿ ಹಾಳೆಯ ಲಗ್ನ ಪತ್ರಿಕೆ ಇದೆ. ಒಂದು ಪುಟ್ಟ ಬುಕ್ ಇದೆ. ಜೊತೆಗೆ ಒಂದಷ್ಟು ಪೆನ್ಸಿಲ್‌ಗಳೂ ಇವೆ. ಅಷ್ಟು ನೋಡಿದ್ರೆ, ಇಷ್ಟು ದೊಡ್ಡ ಡೈರೆಕ್ಟರ್ ಆಗಿದ್ದಾರೆ. ಇಷ್ಟು ಸೀದಾ-ಸಾದಾ ಲಗ್ನಪತ್ರಿಕೇನಾ ಅನ್ನೋ ಪ್ರಶ್ನೆ ಕೂಡ ಬರುತ್ತದೆ.

ಆದರೆ, ಇದು ಸಿಂಪಲ್ ಆಗಿ ಕಂಡ್ರು ಇದರಲ್ಲಿ ಒಂದು ಕಳಕಳಿ ಇದೆ. ಪರಿಸರದ ಮೇಲಿನ ಪ್ರೀತಿ ಎದ್ದು ಕಾಣಿಸುತ್ತದೆ. ಲಗ್ನಪತ್ರಿಕೆಯ ಮೇಲೆ ದೇವರ ಫೋಟೋಗಳನ್ನ ಹಾಕಿಸುತ್ತಾರೆ. ಹಾಗಾಗಿಯೇ ಅದನ್ನ ಯಾರೂ ಚೆಲ್ಲೋದಕ್ಕೆ ಹೋಗೋದಿಲ್ಲ. ತರುಣ್ ಸೋನಲ್ ಮದುವೆ ಲಗ್ನ ಪತ್ರಿಕೆಯನ್ನ ಮದುವೆ ಬಳಿಕ ಮನೆಯ ಕೈತೋಟದಲ್ಲಿ ಹಾಕಿದ್ರೆ ಸಾಕು, ಅಲ್ಲೊಂದು ಹೊಸ ಆಶ್ಚರ್ಯವೇ ಮೂಡುತ್ತದೆ ನೋಡಿ.

ತರುಣ್ ತುಂಬಾನೇ ಚೆನ್ನಾಗಿ ಪ್ಲಾನ್ ಮಾಡಿದ್ದಾರೆ. ಮದುವೆ ಪತ್ರಿಕೆಯಲ್ಲೂ ಒಂದು ಹೊಸತನ ಮೆಂಟೇನ್ ಮಾಡಿದ್ದಾರೆ. ಅದೇ ಲಗ್ನಪತ್ರಿಕೆಯನ್ನ ಕೊಟ್ಟು ಎಲ್ಲರಿಗೂ ಆಹ್ವಾನ ಕೊಡುತ್ತಿದ್ದಾರೆ. ಹಾಗೆ ಈ ಒಂದು ಸೀಡ್ಸ್ ಲಗ್ನಪತ್ರಿಕೆಯ ವಿಶೇಷ ಏನೂ ಅನ್ನೋದು ಕೂಡ ಇದೀಗ ಗೊತ್ತಾಗಿದೆ ನೋಡಿ.ಸೀಡ್ಸ್ ಲಗ್ನಪತ್ರಿಕೆಯಲ್ಲಿ ಹಾಳೆಗಳನ್ನೆ ಬಳಸಲಾಗಿದೆ. ಸೋನಲ್ ಮಂಥೆರೋ ಮತ್ತು ತರುಣ್ ಸುಧೀರ್ ಹೆಸರು ಬರೆದಿರೋ ಪತ್ರಿಕೆನೂ ಇದೆ. ಇದು ವೈಟ್ ಆ್ಯಂಡ್ ವೈಟ್ ಆಗಿಯೇ ಇದೆ. 

ಇದನ್ನ ಸೂಕ್ಷ್ಮವಾಗಿ ಗಮನಿಸಿದ್ರೆ, ಅಲ್ಲಲ್ಲಿ ಕಪ್ಪು ಚುಕ್ಕೆ ರೀತಿ ಕಾಣಿಸುತ್ತದೆ. ಈ ಕಪ್ಪು ಚುಕ್ಕೆಗಳೇ ವಿವಿಧ ಗಿಡಗಳ ಬೀಜಗಳೇ ಆಗಿವೆ. ಮದುವೆಗೆ ಆಹ್ವಾನಿಸೋರು ಅರಿಶಿನ-ಕುಂಕುಮ ಇರೋ ಕಾರ್ಡ್ ಕೊಡುತ್ತಾರೆ. ಆದರೆ, ಡೈರೆಕ್ಟರ್ ತರುಣ್ ಆ ಕೆಲಸ ಮಾಡೋಕೆ ಹೋಗಿಲ್ಲ. ಬದಲಾಗಿ, ಬುಕ್ ಮತ್ತು ಪೆನ್ಸಿಲ್ ಕೊಟ್ಟಿದ್ದಾರೆ. ಈ ಪೆನ್ಸಿಲ್‌ ಹಾಳೆಯಿಂದಲೇ ತಯಾರಿಸಿರೋದೇ ಆಗಿದೆ. ಬುಕ್ ನಲ್ಲೂ ಸೀಡ್‌ ಇವೆ. 

ಈ ಲಗ್ನಪತ್ರಿಕೆಯನ್ನ ಅಲ್ಲಿ ಇಲ್ಲಿ ಇಡದೇ ನೇರವಾಗಿ ಕೈತೋಟಕ್ಕೆ ಹಾಕಿದ್ರೆ ಸಾಕು, ಮಣ್ಣಲ್ಲಿ ಮಣ್ಣಾಗುತ್ತದೆ. ನೀರು ಬಿದ್ದ ಮೇಲೆ ಸಸಿಯಾಗಿ ಮೊಳಕೆನೂ ಒಡೆಯುತ್ತದೆ. ಗಿಡವಾಗಿಯೂ ಗಮನ ಸೆಳೆಯುತ್ತದೆ. ಅಂತಹ ಪರಿಸರ ಸ್ನೇಹಿ ಈ ವೆಡ್ಡಿಂಗ್ ಕಾರ್ಡ್ ಇದೀಗ ವಿಶೇಷವಾಗಿಯೇ ಗಮನ ಸೆಳೆಯುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.