ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ರವಿಚಂದ್ರನ್ ಮೈಮೇಲೆ ಬಿದ್ದು ಒದ್ದಾಡಿದ ರಚಿತಾ ರಾಮ್

 | 
Gh

ಕನ್ನಡ ಕಿರುತೆರೆಯಲ್ಲಿ ವಿಭಿನ್ನ ರಿಯಾಲಿಟಿ ಶೋ ಅನ್ನು ಜೀ ಕನ್ನಡ ಪ್ರಸಾರ ಮಾಡಿತ್ತು. ಅದುವೇ 'ಭರ್ಜರಿ ಬ್ಯಾಚುಲರ್ಸ್'. ಕಳೆದ ನಾಲ್ಕು ತಿಂಗಳಿನಿಂದ ಬ್ಯಾಚುಲರ್‌ಗಳ ಜೀವನವನ್ನು ಮನರಂಜನೆಯ ಜೊತೆ ಜೊತೆ ಎಲಿಜಿಬಲ್ ಮಾಡುವ ಪ್ರಯತ್ನಕ್ಕೆ ಮುಂದಾಗಿತ್ತು. ಹೀಗಾಗಿ ಇದು ಕಿರುತೆರೆ ಲೋಕದಲ್ಲಿಯೇ ಒಂದು ವಿಭಿನ್ನ ಪ್ರಯತ್ನ ಎನ್ನಬಹುದು.

ಕನ್ನಡದ ಧಾರಾವಾಹಿಗಳಲ್ಲಿ, ರಿಯಾಲಿಟಿ ಶೋಗಳನ್ನು ಗುರುತಿಸಿಕೊಂಡಿರುವ 10 ಯುವಕರನ್ನು ಒಟ್ಟಿಗೆ ಸೇರಿ ಅವರನ್ನು ಮೋಸ್ಟ್ ಎಲಿಜಿಬಲ್ ಬ್ಯಾಚುಲರ್‌ಗಳಾಗಿ ಮಾಡುವ ಪ್ರಯತ್ನ ಮಾಡಲಾಗಿತ್ತು. ಒಂದೊಂದು ತಂಡಕ್ಕೂ ಮೆಂಟರ್‌ಗಳನ್ನು ನಿಯೋಜನೆ ಮಾಡಲಾಗಿತ್ತು. ಅವರಿಗೆ ಮಾರ್ಗದರ್ಶನವನ್ನೂ ನೀಡಲಾಗಿತ್ತು.

ಕ್ರೇಜಿಸ್ಟಾರ್ ರವಿಚಂದ್ರನ್, ಡಿಂಪಲ್ ಕ್ವೀನ್ ರಚಿತಾ ರಾಮ್ ಜೊತೆಗೆ ನಿರೂಪಕ ಅಕುಲ್ ಬಾಲಾಜಿ ಮೂವರು ಒಟ್ಟಿಗೆ ಸೇರಿ ಬ್ಯಾಚುಲರ್‌ಗಳನ್ನು ಜೀವನವನ್ನೇ ಬದಲಾಯಿಸುವ ಪಣ ತೊಟ್ಟಿದ್ದರು. ಭಿನ್ನ ವಿಭಿನ್ನ ಟಾಸ್ಕ್‌ಗಳನ್ನು ಕಿರುತೆರೆ ವೀಕ್ಷಕರಿಗೆ ವಿಭಿನ್ನ ಮನರಂಜನೆಯನ್ನು ಅವರಿಂದ ಕೊಡಿಸಿದ್ದರು. ಕ್ರೇಜಿ ಸ್ಟಾರ್ ಖಡಕ್ ಮಾತು. ರಚಿತಾ ರಾಮ್ ನಗುವಿನ ಟಾನಿಕ್ಕು ಬ್ಯಾಚುಲರ್ಸ್‌ಗಳಿಗೂ ಕಿಕ್ ಕೊಟ್ಟಿತ್ತು.

ರಿಯಾಲಿಟಿ ಶೋನ ಕೊನೆ ಕೊನೆಯಲ್ಲಿ ಬ್ಯಾಚುಲರ್ಸ್‌ಗೆ ವಿಭಿನ್ನ ಟಾಸ್ಕ್‌ಗಳನ್ನು ನೀಡಲು ಮಲೇಷ್ಯಾಗೆ ಕರೆದುಕೊಂಡು ಹೋಗಿದ್ದರು. 10 ಜೋಡಿಗಳ ಜೊತೆಗೆ ಸುಮಾರು 50 ಕ್ಕೂ ಹೆಚ್ಚು ಮಂದಿ ತಂತ್ರಜ್ಞರನ್ನು ಒಳಗೊಂಡ ದೊಡ್ಡ ತಂಡ ವಿದೇಶಿ ನೆಲದಲ್ಲಿ ಬ್ಯಾಚುಲರ್‌ಗಳಿಗೆ ಟಾಸ್ಕ್ ನೀಡಿತ್ತು. ಅಲ್ಲಿ ಇಡೀ ಸಂಚಿಕೆಯನ್ನ ಯಶಸ್ವಿಯಾಗಿ ಮುಗಿಸಿ ಬಂದಿತ್ತು. ಈ ಮೂಲಕ ವಿದೇಶಿ ನೆಲದಲ್ಲಿ ಸಂಚಿಕೆಯನ್ನ ಶೂಟಿಂಗ್ ಮಾಡಿದ ಮೊದಲ ಕನ್ನಡದ ಮನರಂಜನಾ ಚಾನೆಲ್ ಎಂಬ ಹೆಗ್ಗಳಿಕೆಯನ್ನು ಜೀ಼ ಕನ್ನಡ ಪಡೆದುಕೊಂಡಿದೆ.

ಸಿಂಗಲ್ಸ್ ಆಗಿ ವೇದಿಕೆ ಏರಿದ ಬ್ಯಾಚುಲರ್ಸ್ ಜೀವನದಲ್ಲಿ ಹೆಣ್ಣೊಬ್ಬಳು ಪ್ರವೇಶ ಮಾಡಿದ್ರೆ ಏನಾಗಬಹುದು ಎಂಬುದನ್ನು ಟಾಸ್ಕ್ ರೂಪದಲ್ಲಿ ನೀಡಲಾಗಿತ್ತು. ಅದರಲ್ಲಿ ಬ್ಯಾಚುಲರ್‌ಗಳು ಸೈ ಎನಿಸಿಕೊಂಡರು. ಈ ಟಾಸ್ಕ್ ಮೂಲಕ ಏಂಜಲ್ಸ್ ಮನಸ್ಸನ್ನು ಗೆಲ್ಲುವುದಷ್ಟೇ ಅಲ್ಲ. ಅವರು ತೆಗೆದುಕೊಂಡ ರಿಸ್ಕ್ ಅನ್ನು ಇಡೀ ಕರುನಾಡೆ ಮೆಚ್ಚಿತ್ತು. 

ಇನ್ನು ನಟ ರವಿಚಂದ್ರನ್ ಜೊತೆ ಬೊಂಬೆ ಬೊಂಬೆ ಹಾಡಿಗೆ ಹೆಜ್ಜೆ ಹಾಕಿದ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರನ್ನೂ ಕೂಡ ಹಲವಾರು ಜನ ಮೆಚ್ಚಿದ್ದರು. ಕಾಮಿಡಿಯಾಗಿ ಮಾತಾಡುತ್ತ ಎಲ್ಲರ ಮನಗೆದ್ದ ಅಕುಲ್ ಬಾಲಾಜಿ ಅವರನ್ನೂ ಮರೆಯುವ ಹಾಗಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.