ಮದುವೆ ಮುನ್ನವೇ ಸಿಹಿಸುದ್ದಿ ಕೊಟ್ಟ ರಚಿತಾ ರಾಮ್, ಕನ್ನಡಿಗರು ಫಿದಾ

 | 
Bs
ಅಭಿಮಾನಿಗಳಿಗೆ ರಚಿತಾ ರಾಮ್ ಇದೀಗ ಸಿಹಿ ಸುದ್ದಿ ನೀಡಿದ್ದಾರೆ.ಚಿತ್ರಮಂದಿರಗಳಲ್ಲಿ ಒಂದು ಬಾರಿ ಬಿಡುಗಡೆಯಾದ ಚಿತ್ರಗಳಿಗೆ ಎರಡನೇ ಅವಕಾಶ ಸಿಗುವುದು ಬಹಳ ಅಪರೂಪ, ಆದರೆ ಅದು ಈಗ ಭಾರತದಲ್ಲಿ ಟ್ರೆಂಡ್ ಆಗಿದೆ. ಈ ಪಟ್ಟಿಗೆ ನಿರ್ದೇಶಕ ನಾಗಶೇಖರ್ ನಿರ್ದೇಶನದ ಶ್ರೀನಗರ ಕಿಟ್ಟಿ ಹಾಗೂ ರಚಿತರಾಮ್ ನಟಿಸಿರುವ ಸಂಜು ವೆಡ್ಸ್ ಗೀತಾ 2 ಸೇರಿದೆ. ಇದು ಮರು-ಬಿಡುಗಡೆಗೆ ಸಿದ್ಧವಾಗಿದೆ.
ಜನವರಿ 17 ರಂದು ಬಿಡುಗಡೆಯಾಗಿ ಕೆಲ ವಾರಗಳ ನಂತರ ಚಿತ್ರಮಂದಿರಗಳಿಂದ ಸದ್ದಿಲ್ಲದೆ ಎತ್ತಂಗಡಿ ಆಗಿದ್ದ ಚಿತ್ರ 20 ನಿಮಿಷಗಳ ಹೆಚ್ಚುವರಿ ದೃಶ್ಯಗಳೊಂದಿಗೆ ಹೊಸ ಆವೃತ್ತಿಯೊಂದಿಗೆ ಮರಳಲು ಸಿದ್ಧವಾಗಿದೆ. ಇದೇ ಕಥೆಯ ಜೀವಾಳ ಆಗಿದೆ ಎಂದು ನಿರ್ದೇಶಕ ನಾಗಶೇಖರ್ ಹೇಳಿದ್ದಾರೆ.ನಾನು ಕಲ್ಪಿಸಿಕೊಂಡಂತೆ ಸಿನಿಮಾ ತೋರಿಸಲು ಆಗಿರಲಿಲ್ಲ. ಕಾನೂನು ಗೋಜಲಿನಿಂದ ಮೊದಲ ಆವೃತ್ತಿ ಚೆನ್ನಾಗಿ ಮೂಡಿಬರಲಿಲ್ಲ.
 ಅಂತಿಮ ಲ್ಯಾಬ್ ಆವೃತ್ತಿಯನ್ನು ಥಿಯೇಟರ್ ನಲ್ಲಿ ಬಿಡುಗಡೆ ಮಾಡುವಾಗ ಅಳವಡಿಸದಂತೆ ನ್ಯಾಯಾಲಯ ತಡೆಯಿತು. ಲಭ್ಯವಿರುವುದನ್ನು ಬಿಡುಗಡೆ ಮಾಡುವುದನ್ನು ಬಿಟ್ಟು ನನಗೆ ಬೇರೆ ಆಯ್ಕೆ ಇರಲಿಲ್ಲ ಎಂದು ತಿಳಿಸಿದರು.ಸಿನಿಮಾ ನೋಡಿದ ವೀಕ್ಷಕರು, ದೃಶ್ಯಗಳು ಆಕಸ್ಮಿಕವಾಗಿ ಒಟ್ಟಿಗೆ ಸೇರಿಕೊಂಡಿವೆ ಎಂದು ಹೇಳಿದರು. ಅಲ್ಲದೇ, ರಾಗಿಣಿ ದ್ವಿವೇದಿ ಕೇವಲ ಒಂದು ಹಾಡನ್ನು ಹೊರತುಪಡಿಸಿ ಅವರ ಪ್ರಮುಖ ದೃಶ್ಯಗಳು ಕಾಣೆಯಾಗಿದ್ದವು. 
ರಂಗಾಯಣ ರಘು ಮತ್ತು ಸಂಪತ್ ರಾಜ್ ಅವರೊಂದಿಗಿನ ದೃಶ್ಯಗಳಲ್ಲಿ ಯಾವುದೇ ಭಾವನಾತ್ಮಕ ಸಂಪರ್ಕ ಇರಲಿಲ್ಲ. ಈ ಸಂಪರ್ಕವನ್ನು ಈಗ ಮತ್ತೆ ತರುತ್ತಿದ್ದೇನೆ ಎಂದರು.ಈಗಾಗಲೇ ಬಿಡುಗಡೆಯಾಗಿದ್ದ ಆವೃತ್ತಿಯಲ್ಲಿ ಚಿತ್ರದ ಅವಧಿ 2 ಗಂಟೆ ಮತ್ತು 2 ನಿಮಿಷ ಇತ್ತು. ಈಗ ಅದನ್ನು 2 ಗಂಟೆ 23 ನಿಮಿಷಕ್ಕೆ ಹೆಚ್ಚಿಸಲಾಗಿದೆ. ಆ 20 ನಿಮಿಷ ಫಿಲ್ಲರ್ ಅಲ್ಲ. ಅದು ಆತ್ಮ. ಅದು ಇಲ್ಲದೆ, ಚಿತ್ರ ನಿರ್ಜೀವವಾಗಿತ್ತು ಎಂದು ನಾಗಶೇಖರ್ ಹೇಳಿದರು. ಸಂಜು ವೆಡ್ಸ್ ಗೀತಾ 2 ನಾಗಶೇಖರ್ ಅವರ 11 ನೇ ಚಿತ್ರವಾಗಿದೆ. ಪ್ರತಿ ಚಿತ್ರವು ಏನಾದರೊಂದು ಕಲಿಸುತ್ತದೆ. 10 ಸಿನಿಮಾ ಮಾಡಿ ಆದ ನನ್ನ ಅನುಭವವನ್ನು ಇದರಲ್ಲಿ ತಂದಿದ್ದೇನೆ. ನಾನು ಹೇಳಲು ಉದ್ದೇಶಿಸಿದ್ದನ್ನು ನಿಖರವಾಗಿ ತೋರಿಸಬೇಕಾಗದ ಅಗತ್ಯವಿದೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.