ನೆಚ್ಚಿನ ನಟನನ್ನು ನೋಡಲು ಜೈ‌ ಲಿಗೆ ಹೊರಟ ರಚಿತಾ ರಾಮ್;

 | 
Hu

ದರ್ಶನ್ ನೋಡಲು ಸ್ಯಾಂಡಲ್ವುಡ್ ನಟರು, ಸ್ನೇಹಿತರು, ನಟನ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಪರಪ್ಪನ ಅಗ್ರಹಾರ ಜೈಲಿನ ಬಳಿ ಬರ್ತಾನೆ ಇರ್ತಾರೆ. ಇವತ್ತು ನಟ ದರ್ಶನ್ ನೋಡಲು ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ತೂಗುದೀಪ್ ಆಗಮಿಸಿದ್ರು. ಅಷ್ಟೇ ಅಲ್ಲದೇ ಮತ್ತೊಂದೆಡೆ ಇಬ್ಬರು ಮಹಿಳಾ ಅಭಿಮಾನಿಗಳು ಕೂಡ ಕಾಯ್ತಿದ್ರು.

ದಾವಣಗೆರೆಯಿಂದ ಬಂದಿದ್ದ ಮಹಿಳಾ ಅಭಿಮಾನಿ ಕಾವ್ಯ ನಾನು ದರ್ಶನ್ ಅವರನ್ನು ನೋಡಲೆಂದು ಇಲ್ಲಿಗೆ ಬಂದಿರುವುದಾಗಿ ಹೇಳಿದ್ರು. ಕಾವ್ಯ ಎಂಬ ಯುವತಿ ಜೊತೆ ಆನೇಕಲ್ ತಾಲ್ಲೂಕಿನ ಚಂದಾಪುರದ ರಚ್ಚು ಎಂಬ ಯುವತಿ ಕೂಡ ಆಗಮಿಸಿದ್ರು.ಆದ್ರೆ ಈ ಇಬ್ಬರು ಯುವತಿಯರಿಗೆ ನಟ ದರ್ಶನ್ ಭೇಟಿಗೆ ಜೈಲು ಸಿಬ್ಬಂದಿ ಅವಕಾಶ ನೀಡಲಿಲ್ಲ. ನಟ ದರ್ಶನ್ ಭೇಟಿಗೆ ಅವಕಾಶ ಸಿಗದೆ ವಾಪಸ್ ಆಗಿದ್ದಾರೆ.

ಅಭಿಮಾನಿಗಳನ್ನು ಭೇಟಿಯಾಗುವುದಿಲ್ಲ. ಮನೆಯವರನ್ನು ಮಾತ್ರ ಭೇಟಿ ಮಾಡೋದಾಗಿ ದರ್ಶನ್ ಹೇಳಿದ್ದಾರೆ ಎಂದು ಪೊಲೀಸರು ಯುವತಿಯರಿಗೆ ಹೇಳಿದ್ರು. ನಿನ್ನೆ ಸಹ ನಟ ದರ್ಶನ್ ನೋಡಲು ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್​ ತೂಗದೀಪ್ ಜೈಲಿಗೆ ಭೇಟಿ ನೀಡಿದ್ರು. ಕೆಲ ಕಾಲ ದರ್ಶನ್ ಜೊತೆ ಮಾತಾಡಿದ ವಿಜಯಲಕ್ಷ್ಮಿ, ಕಾನೂನು ಹೋರಾಟದ ಬಗ್ಗೆ ಮಾಹಿತಿ ನೀಡಿದ್ದಾರೆ. 

ಜಾಮೀನಿನ ವಿಚಾರವಾಗಿ ನಟ ದರ್ಶನ್ ‌ಜೊತೆ‌ ಪತ್ನಿ ಮತ್ತು ಸಹೋದರ ಚರ್ಚೆ ಮಾಡಿದ್ದಾರಂತೆ.ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿರುವುದರಿಂದ ಸದ್ಯಕ್ಕೆ ಜಾಮೀನು ಸಿಗುವುದು ಕಷ್ಟ, ಜಾಮೀನು ಪಡೆಯಲು ಇನ್ನು ಕೆಲ ದಿನಗಳು ಕಾಯಲೇಬೇಕು ಎಂದು ವಿಜಯಲಕ್ಷ್ಮಿ, ಪತಿ ದರ್ಶನ್​ಗೆ ಮನವರಿಕೆ ಮಾಡಿಕೊಟ್ಟಿದ್ದಾರಂತೆ. ಇದಕ್ಕೆ ನಟ ದರ್ಶನ್​ ಕೂಡ ನೋಡೋಣ ಬಿಡಿ ಎಂದು ಹೇಳಿದ್ದಾರೆ ಎನ್ನಲಾಗ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.