ಶೋನಲ್ಲಿ‌ ಸಿಕ್ಕಪಟ್ಟೆ ಡಬಲ್ ಮೀನಿಂಗ್, ರಚಿತಾ ರಾಮ್ ಗೆ ಇಷ್ಟ‌ ಆದ್ರೂ ನನಿಗೆ ಇಷ್ಟ ಆಗಲ್ಲ ಎಂದ ರವೀಂದ್ರನ್

 | 
ಕಕಗ
ನಟ ರವಿಚಂದ್ರನ್ ಅವರು ನಟನೆಯ ಜೊತೆಗೆ ರಿಯಾಲಿಟಿ ಶೋಗಳಲ್ಲೂ ತೊಡಗಿಕೊಳ್ಳುತ್ತಿದ್ದಾರೆ. ಅವರು ಸದ್ಯ ಜೀ ಕನ್ನಡದಲ್ಲಿ ಪ್ರಸಾರ ಕಾಣುವ ಭರ್ಜರಿ ಬ್ಯಾಚುಲರ್ಸ್ 2ನ ಭಾಗವಾಗಿದ್ದಾರೆ. ಅವರು ಸಿನಿಮಾಗಳಲ್ಲಿ ರೊಮ್ಯಾಂಟಿಕ್ ದೃಶ್ಯಗಳನ್ನು ಮಾಡುತ್ತಾರೆ. ಆದರೆ, ತೆರೆಯ ಹಿಂದೆ ಅವರು ಜಂಟಲ್​ಮ್ಯಾನ್. ಅವರು ಈಗ ಡಬಲ್ ಮೀನಿಂಗ್ ಡೈಲಾಗ್​ ಬಗ್ಗೆ ಬೇಸರ ಹೊರಹಾಕಿದ್ದಾರೆ.
ರಿಯಾಲಿಟಿ ಶೋಗಳಲ್ಲಿ ಇದನ್ನು ಹೆಚ್ಚಾಗಿ ಬಳಕೆ ಮಾಡುವುದರ ಬಗ್ಗೆ ಅವರಿಗೆ ಅಸಮಾಧಾನ ಇದೆ. ಆದರೆ, ಅದನ್ನು ಬಿಟ್ಟು ಒಳ್ಳೆಯದನ್ನು ಹೆಕ್ಕಿಕೊಳ್ಳಬೇಕು ಎಂಬುದು ಅವರ ಕಿವಿಮಾತು.ಇತ್ತೀಚೆಗೆ ನಡೆದ ಕಾರ್ಯಕ್ರಮ ಒಂದರಲ್ಲಿ ರವಿಚಂದ್ರನ್ ಮಾತನಾಡಿದ್ದಾರೆ. ಈ ವಿಡಿಯೋನ ಹಲವು ಜನ ಇನ್ಸ್ಟಾ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.ರವಿಚಂದ್ರನ್ ಅವರು ಮಕ್ಕಳಿಗೆ ಸ್ಫೂರ್ತಿ ತುಂಬುವ ರೀತಿಯಲ್ಲಿ ಮಾತನಾಡಿದ್ದಾರೆ. ಈ ವೇಳೆ ರಿಯಾಲಿಟಿ ಶೋಗಳ ಕಷ್ಟಗಳ ಬಗ್ಗೆ ಹಾಗೂ ಅದರಿಂದ ನಾವೇನು ಕಲಿಯಬೇಕು ಎಂಬುದನ್ನು ಚೆನ್ನಾಗಿ ತಿಳಿಸಿದ್ದಾರೆ.
ನಾನು ಭರ್ಜರಿ ಬ್ಯಾಚುಲರ್ಸ್ ರೀತಿಯ ಶೋ ಮಾಡುತ್ತಿರುತ್ತೇನೆ. ಬೆಳಿಗ್ಗೆ 10 ಗಂಟೆಗೆ ಶೋ ಶೂಟಿಂಗ್ ಆರಂಭ ಆದರೆ, ರಾತ್ರಿ 11 ಗಂಟೆಗವರೆಗೂ ಶೋ ಶೂಟ್ ನಡೆಯುತ್ತದೆ. ಅಲ್ಲಲ್ಲಿ ಬೋರ್ ಹೊಡೆಯುತ್ತೆ, ತುಂಬಾ ಸಿಟ್ಟು ಬರುತ್ತದೆ. ಡಬಲ್ ಮೀನಿಂಗ್ ಜಾಸ್ತಿ ಮಾಡ್ತಾರೆ ಇದು ಬೇಕಿತ್ತಾ ಎನಿಸುತ್ತದೆ. ಶೋ ಮುಗಿದ ಮೇಲೆ ವಿಟಿ ಹಾಕ್ತಾರೆ. ನಾಲ್ಕು ತಿಂಗಳ ವಿಟಿ ಎರಡೂವರೆ ನಿಮಿಷ ಇರುತ್ತದೆ. 
ಅದೇ ರೀತಿ ಜೀವನದಲ್ಲಿ ಒಳ್ಳೆ ಕ್ಷಣಗಳನ್ನು ಕೂಡಿಕೊಳ್ಳುತ್ತಾ ಹೋಗಬೇಕು. ಇಡೀ ದಿನ ಚೆನ್ನಾಗಿರಲ್ಲ. ಆದರೆ, ಒಂದು ಕ್ಷಣ ಚೆನ್ನಾಗಿರುತ್ತದೆ. ಅದನ್ನು ಹೆಚ್ಚು ಮಾಡಿದಂತೆ ನಿಮ್ಮ ಜೀವನ ಚೆನ್ನಾಗಿರುತ್ತದೆ ಎಂದಿದ್ದಾರೆ ರವಿಚಂದ್ರನ್.ನಾನು ಆರನೇ ಕ್ಲಾಸ್ ಫೇಲ್. ಪುಸ್ತಕ ಮುಟ್ಟಲ್ಲ ಎಂದು ಶಪತ ಮಾಡಿದೆ. 7ನೇ ಕ್ಲಾಸ್​ನಲ್ಲಿ ಇದ್ದಾಗ ಟೀಚರ್ ಬಂದು ನನಗೆ ಪ್ರಶ್ನೆ ಕೇಳಿದರು. ನನಗೆ ಉತ್ತರ ಬರಲ್ಲ ಎಂದು ಅವರಿಗೆ ಗೊತ್ತಿತ್ತು. 
ಆದರೂ ನನಗೆ ಪ್ರಶ್ನೆ ಮಾಡುತ್ತಿದ್ದರು. ಮೊದಲ ಎರಡು ದಿನ ಬೈಸಿಕೊಂಡೆ. ಆ ಬಳಿಕ ಮೂರನೇ ದಿನ ನಾನೇ ಬೆಂಚ್ ಮೇಲೆ ಎದ್ದು ನಿಂತುಕೊಂಡೆ. ಅಂದು ನಿಂತವನು ಇಂದು ಇಲ್ಲಿ ಬಂದು ನಿಂತುಕೊಂಡಿದ್ದೇನೆ ಎಂದಿದ್ದಾರೆ ರವಿಚಂದ್ರನ್. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub