ಮಂಗಳೂರಿನ ಪ್ರಖ್ಯಾತ ಕಟೀಲು ದೇವಾಲಯಕ್ಕೆ ರಚಿತಾ ರಾಮ್ ಭೇಟಿ, ದೇವರನ್ನೇ ನೊಡುತ್ತ ಭಾವುಕ

 | 
Bvg

ಕಟೀಲು ಶ್ರೀ ದುರ್ಗಾಪರಮೇಶ್ವರೀ ಸಮೂಹ ಶಿಕ್ಷಣ ಸಂಸ್ಥೆಗಳ ಅಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಭ್ರಮರ ಇಂಚರ ನುಡಿಹಬ್ಬ ಕಾರ್ಯಕ್ರಮಕ್ಕೆ ಅತಿಥಿಯಾಗಿ ಭಾಗವಹಿಸಿದ ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಭಾಗವಹಿಸಿ ಮಕ್ಕಳ ಜೊತೆಗೆ ಮಕ್ಕಳಂತೆ ಬೆರೆತು ಮಕ್ಕಳನ್ನು ಕೊಂಡಾಡಿದರು.

ನುಡಿಹಬ್ಬದಲ್ಲಿ ನಟಿ ರಚಿತಾ ರಾಮ್ ಅವರು ಭಾಗಿಯಾಗುವುದಕ್ಕಾಗಿ ಅವರು ಮಂಗಳೂರಿಗೆ ಬಂದಿದ್ದರು. ಆ ಹಿನ್ನೆಲೆಯಲ್ಲಿ ಸಮಾರಂಭದಲ್ಲಿ ಭಾಗಿಯಾಗುವುದಕ್ಕೂ ಮುನ್ನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿ, ದೇವಿಯ ಆಶೀರ್ವಾದ ಪಡೆದುಕೊಂಡರು. ಭ್ರಮರ ಇಂಚರ ನುಡಿಹಬ್ಬ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ನಟಿ ರಚಿತಾ ರಾಮ್ ಅವರು, ವೇದಿಕೆ ಸಿಕ್ಕಾಗ ಅದನ್ನು ಬಳಸಿಕೊಳ್ಳಬೇಕು. ಇಂತಹ ವೇದಿಕೆಗಳು ಎಲ್ಲ ಸಂದರ್ಭದಲ್ಲೂ ಸಿಗುವುದಿಲ್ಲ. ನಮ್ಮ ಪ್ರತಿಭೆಯನ್ನು ನಾವೇ ಪ್ರದರ್ಶಿಸಬೇಕು ಎಂದರು.

ಆರಂಭದಲ್ಲಿ ರಚಿತಾ ರಾಮ್ ಅವರು ತುಳು ಭಾಷೆಯಲ್ಲಿ ಮಾತನಾಡಿದ್ದು ವಿಶೇಷವಾಗಿತ್ತು. ಇನ್ನು, ಇದೇ ಕಾರ್ಯಕ್ರಮದಲ್ಲಿ ರಚಿತಾ ರಾಮ್ ಅವರ ರೇಖಾಚಿತ್ರಗಳನ್ನು ವಿದ್ಯಾರ್ಥಿಗಳು ರಚಿಸಿದ್ದರು. ಅವರನ್ನು ವೇದಿಕೆಗೆ ಕರೆದು ಅವರೊಂದಿಗೆ ಚಿತ್ರ ಬಿಡಿಸಿದ ಬಗ್ಗೆ ರಚಿತಾ ರಾಮ್ ಮಾಹಿತಿ ಪಡೆದುಕೊಂಡರು. 

ವೇದಿಕೆಯಲ್ಲಿ ವಿದ್ಯಾಥಿಗಳು ನಟಿ ರಚಿತಾ ರಾಮ್ ಅವರ ಡ್ರಾಯಿಂಗ್ ಮಾಡಿ ಕೊಡುಗೆಯಾಗಿ ನೀಡಿದಾಗ ಖುಷಿ ಪಟ್ಟ ನಟಿ ಆ ವಿದ್ಯಾರ್ಥಿಗಳನ್ನು ವೇದಿಕೆಗೆ ತಾವೇ ಕರೆಸಿ ಅಭಿನಂದಿಸಿದರು. ಹಾಗೂ ಕೆಲವು ವಿದ್ಯಾರ್ಥಿಗಳ ಜೊತೆ ವೇದಿಕೆಗೆ ಕರೆಸಿ ಹಾಡಿಸಿದರು. ಅದರಲ್ಲಿ ತಾನೇ ಬಂದು ವೇದಿಕೆಯಲ್ಲಿ ಒಂದು ಪುಟಾಣಿ ಬಾಳ ಒಳ್ಳೇರು ನಮ್ಮ ಮಿಸ್ ಎನ ಹೇಳಿದ್ರು ಎಸ್ ಎಸ್ಸು ಎಂದು ಹಾಡಿದಾಗ ನಟಿ ಬಹಳ ಖುಷಿ ಪಟ್ಟರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.