ಮೇಕಪ್ ಇಲ್ಲದ ರಚಿತಾ ರಾಮ್ ಮುಖ ನೋಡಿ‌‌ ಬೆ‌ ಚ್ಚಿಬಿದ್ದ ಕನ್ನಡಿಗರು

 | 
Us
ಕಿರುತೆರೆ ಮೂಲಕ ಬಣ್ಣದ ಬದುಕು ಆರಂಭಿಸಿ ಬೆಳ್ಳಿ ತೆರೆಯಲ್ಲಿ ಕೂಡಾ ಸ್ಟಾರ್‌ಗಳಾಗಿ ಮಿಂಚಿದವರಲ್ಲಿ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಕೂಡಾ ಒಬ್ಬರು. ರಚಿತಾ ರಾಮ್‌ ಬೆಂಕಿಯಲ್ಲಿ ಅರಳಿದ ಹೂ ಧಾರಾವಾಹಿ ಮೂಲಕ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟರು. ನಂತರ ಅವರು ಅರಸಿ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ನಟಿಸಿದರು. 
ಚಂದನವನದ ಗುಳಿಕೆನ್ನೆ ಬೆಡಗಿ ರಚಿತಾ ರಾಮ್​ ಬೆಂಗಳೂರಿನ ಕಮರ್ಶಿಯಲ್​ ಸ್ಟ್ರೀಟ್​ನಲ್ಲಿ ಮಾಮೂಲಿ ಹುಡುಗಿಯಂತೆ ಸುತ್ತಾಡುತ್ತಾ ಬಟ್ಟೆ ಖರೀದಿ ಮಾಡಿದ ವೀಡಿಯೋ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ವೀರಂ ಸಿನಿಮಾದ ಕಾಸ್ಟ್ಯೂಮ್​ ಖರೀದಿಗಾಗಿ ಕಮರ್ಶಿಯಲ್​ ಸ್ಟ್ರೀಟ್​ಗೆ ಹೋಗಿದ್ದ ಡಿಂಪಲ್​ ಕ್ವೀನ್​ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಯಾರಿಗೂ ಗುರುತು ಸಿಗದಂತೆ ಸುತ್ತಾಡಿದ್ದಾರೆ.
ಅಷ್ಟೇ ಅಲ್ಲದೇ ತಮ್ಮ ನೋ ಮೇಕಪ್ ಲುಕ್ ಅನ್ನು ಕೂಡ ರಿವಿಲ್ ಮಾಡ್ತಿದ್ದಾರೆ. ಸಾಮನ್ಯವಾಗಿ ನಟಿಯರು ಮೇಕಪ್ ಇಲ್ಲದೇ ಕಾಣಿಸಿಕೊಳ್ಳಲು ಮುಜುಗರ ಪಡುವ ಹಿನ್ನೆಲೆಯಲ್ಲಿ ಒಂದಿಷ್ಟೂ ಬೇಸರವಿಲ್ಲದೆ ತಮ್ಮ ನೋ ಮೇಕಪ್ ಲುಕ್ ರಿವಿಲ್ ಮಾಡಿದ್ದಾರೆ. ಇವರ ಈ ನಡೆಯನ್ನು ಮೆಚ್ಚಿದ ಅಭಿಮಾನಿಗಳು ನಟಿಯೆಂದರೆ ನೀವೇ ಎಂದು ಹಾಡಿ ಹೊಗಳಿದ್ದಾರೆ. ಕ್ರಾಂತಿ ಚಿತ್ರದಲ್ಲಿ ದರ್ಶನ್,ರನ್ನ ಚಿತ್ರದಲ್ಲಿ ಸುದೀಪ್, ಚಕ್ರವ್ಯೂಹ ಚಿತ್ರದಲ್ಲಿ ಪುನೀತ್‌ ರಾಜ್‌ಕುಮಾರ್‌, ಜಾನಿ ಜಾನಿ ಯಸ್‌ ಪಪ್ಪಾ ಚಿತ್ರದಲ್ಲಿ ದುನಿಯಾ ವಿಜಯ್‌, ಸೀತಾರಾಮ ಕಳ್ಯಾಣ ಚಿತ್ರದಲ್ಲಿ ನಿಖಿಲ್‌ ಕುಮಾರಸ್ವಾಮಿ, ಐ ಲವ್‌ ಯೂ ಚಿತ್ರದಲ್ಲಿ ಉಪೇಂದ್ರ, ಆಯುಷ್ಮಾನ್‌ ಭವ ಚಿತ್ರದಲ್ಲಿ ಶಿವರಾಜ್ಕುಮಾರ್.‌ 
ಅಮರ್‌ ಚಿತ್ರದಲ್ಲಿ ಅಭಿಷೇಕ್‌ ಅಂಬರೀಷ್, ರಥಾವರ ಚಿತ್ರದಲ್ಲಿ ಶ್ರೀಮುರಳಿ ಸೇರಿ ಹಲವು ಹೀರೋ ಜೋತೆ ನಟಿಸಿದ್ದಾರೆ. ರಚಿತಾ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.