ಕರುನಾಡಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ರಾಧಿಕಾ ಕುಮಾರಸ್ವಾಮಿ, ಇದೇ ತಿಂಗಳು ಹಬ್ಬದೂಟ ಎಂದ ನಟಿ

 | 
Uuu

ಇತ್ತೀಚಿಗೆ ಇನ್ಸ್ಟಾಗ್ರಾಮ್ ರೀಲ್ಸ್ ಎಲ್ಲಾ ವರ್ಗದ ಜನರನ್ನು ಸೆಳೆದಿದೆ. ಜನ ಸಾಮಾನ್ಯರು, ಸಿನಿಮಾ ನಟ-ನಟಿಯರು ಕೂಡ ಈ ರೀಲ್ಸ್​ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಮತ್ತಷ್ಟು ಜನಪ್ರಿಯತೆ ಪಡೆಯುತ್ತಿದ್ದಾರೆ. ಬಾಲಿವುಡ್​ ನಟ ​ಶ್ರೇಯಸ್ ತಲ್ಪಾಡೆ ಜೊತೆ ರಾಧಿಕಾ ಕುಮಾರಸ್ವಾಮಿ ಮಸ್ತ್​ ಡ್ಯಾನ್ಸ್ ಮಾಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ರೀಲ್ಸ್ ಅಪ್ಲೋಡ್ ಮಾಡಿದ್ದಾರೆ. 

ಶ್ರೇಯಸ್ ಹಾಗೂ ರಾಧಿಕಾ ಡ್ಯಾನ್ಸ್​ಗೆ ನೆಟ್ಟಿಗರು ಬಗೆ ಬಗೆ ಕಮೆಂಟ್ ಮಾಡುತ್ತಿದ್ದಾರೆ. ರಾಧಿಕಾ ಡ್ಯಾನ್ಸ್ ಸೂಪರೋ ಸೂಪರ್ ಅಂತಿದ್ದಾರೆ. ಶ್ರೇಯಸ್ ತಲ್ಪಾಡೆ ಅನೇಕ ಹಿಂದಿ ಮತ್ತು ಮರಾಠಿ ಚಲನಚಿತ್ರಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿದ್ದಾರೆ. ಇದೀಗ ಶ್ರೇಯಸ್ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಿದ್ದಾರೆ. ರಾಧಿಕಾ ಕುಮಾರಸ್ವಾಮಿ ಜೊತೆ ಅಜಾಗ್ರತ ಸಿನಿಮಾ ಮಾಡುತ್ತಿದ್ದಾರೆ. 

ಅಜಾಗ್ರತ ಸಿನಿಮಾ ಶೂಟಿಂಗ್ ಬ್ಯುಸಿಯಲ್ಲೂ ರೀಲ್ಸ್​ಗೆ ಶ್ರೇಯಸ್​ ಹಾಗೂ ರಾಧಿಕಾ ಕುಮಾರಸ್ವಾಮಿ ಡ್ಯಾನ್ಸ್​ ಮಾಡಿದ್ದಾರೆ. ಬಿಡುವಿನ ಸಮಯದಲ್ಲಿ ರೀಲ್ಸ್​ಗೆ ಮಸ್ತ್ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋವನ್ನು ರಾಧಿಕಾ ಕುಮಾರಸ್ವಾಮಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಿಂದಿ, ಮರಾಠಿ ಸಿನಿಮಾಗಳಲ್ಲಿ ತಮ್ಮ ಛಾಪು ಮೂಡಿಸಿದ ಶ್ರೇಯಸ್ ಈಗ ದಕ್ಷಿಣದಲ್ಲಿ ಹೆಸರು ಮಾಡಲು ಸಜ್ಜಾಗಿದ್ದಾರೆ. 

ಸದ್ಯದಲ್ಲೇ ಅವರು ‘ಅಜಾಗ್ರತ’ ಎಂಬ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಂ ಶಶಿಧರ್ ನಿರ್ದೇಶನದ ಈ ಚಿತ್ರವು ಖ್ಯಾತ ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಅವರ ಕನ್ನಡ ಚೊಚ್ಚಲ ಚಿತ್ರವಾಗಿದೆ. ರವಿರಾಜ್ ನಿರ್ಮಿಸಿರುವ ಅಜಾಗ್ರತ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಕೊಂಕಣಿ, ಮರಾಠಿ ಸೇರಿದಂತೆ ಏಳು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡು ಸಿನಿಮಾ ರಿಲೀಸ್ ಆಗಲಿದೆ.