ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
May 21, 2025, 17:48 IST
|

ಕೆಲ ದಿನಗಳ ಹಿಂದಷ್ಟೇ ರಾಧಿಕಾ ಕುಮಾರಸ್ವಾಮಿ ತಮ್ಮ ಮಗಳು ಶಮಿಕಾ ಫೋಟೋಗಳನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಹಲವು ವರ್ಷಗಳ ಹಿಂದಿನ ಫೋಟೋಗಳನ್ನು ಬಿಟ್ರೇ ಇತ್ತೀಚಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಗಲ್ಲ. ಸೋಶಿಯಲ್ ಮೀಡಿಯಾದಲ್ಲೂ ಶಮಿಕಾ ಆ್ಯಕ್ಟಿವ್ ಆಗಿಲ್ಲ.
ನಮ್ಮ ಫ್ಯಾಮಿಲಿಯಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ಶಮಿಕಾ ವಿಚಾರವನ್ನು ಎಲ್ಲೂ ರಿವೀಲ್ ಮಾಡುವಂತಿಲ್ಲ. ಆಕೆಯ ವಿಚಾರಗಳ ಬಗ್ಗೆ ಹೆಚ್ಚು ಹೇಳುವಂತಿಲ್ಲ. ದೊಡ್ಡ ರೀತಿಯಲ್ಲಿ ಅವಳನ್ನು ಪರಿಚಯಿಸುವ ಆಸೆ ಇದೆ ಅಲ್ಲಿಯವರೆಗೂ ನೀವು ಕಾಯಲೇಬೇಕು ಎಂದು ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.ಹಬ್ಬ ಅಂದ್ರೆ ಶಮಿಕಾಗೂ ತುಂಬಾ ಖುಷಿ ಆಗುತ್ತೆ. ಎಲ್ಲ ವಿಚಾರದಲ್ಲೂ ಅವಳು ನನಗಿಂತ ಜೋರಾಗಿದ್ದಾಳೆ.
ಆ್ಯಕ್ಟಿಂಗ್, ಡ್ಯಾನ್ಸ್ ಹಾಗೂ ಹಬ್ಬಗಳ ಟೈಮ್ ನಲ್ಲಿ ಮೇಕಪ್ ವಿಚಾರದಲ್ಲೂ ನನ್ನನ್ನು ಮೀರಿಸಿದ್ದಾಳೆ. ಅವಳು ಸ್ವೀಟ್ ಅನ್ನು ಕೂಡ ಹೆಚ್ಚಾಗಿಯೇ ತಿನ್ನುತ್ತಾಳೆ ಜೊತೆಗೆ ವರ್ಕೌಟ್ ಕೂಡ ಮಾಡ್ತಾಳೆ ಎಂದಿದ್ದಾರೆ.ಯೂಟ್ಯೂಬ್ ಗಳಲ್ಲಿ ವರ್ಕೌಟ್, ಡ್ಯಾನ್ಸ್ ಸ್ಟೆಪ್ಸ್ ಗಳನ್ನು ನೋಡಿ ನನಗೂ ಫಾರ್ವಡ್ ಮಾಡ್ತಾಳೆ. ನೀವು ಇದನ್ನು ಕಲಿಬೇಕು ಅಂತ ಟಿಪ್ಸ್ ಕೂಡ ಕೊಡುತ್ತಿರುತ್ತಾಳೆ ಎಂದು ರಾಧಿಕಾ ಹೇಳಿಕೊಂಡಿದ್ದಾರೆ.
ನನ್ನ ಮಗಳಿಗೂ ಡ್ಯಾನ್ಸ್ ಅಂದ್ರೆ ಸಿಕ್ಕಾಪಟ್ಟೆ ಹುಚ್ಚು. ಕೆಲವೊಮ್ಮೆ ನಾನು ಚೈಲ್ಡಿಶ್ ಆಗಿ ಆಡ್ತೀನಿ. ಅವಳು ಒಮ್ಮೆಮ್ಮೆ ನನ್ನನ್ನು ಕೇಳ್ತಾಳೆ. ನೀವು ನನಗೆ ತಾಯಿನಾ? ಅಥವಾ ನನ್ನ ಮಗಳಾ ಎಂದು ಕೇಳ್ತಾನೆ ಇರ್ತಾಳೆ ಎಂದು ರಾಧಿಕಾ ಕುಮಾರಸ್ವಾಮಿ ಮಗಳ ಬಗ್ಗೆ ಮಾಹಿತಿ ಹಂಚಿಕೊಂಡ್ರು.ಕನ್ನಡ ಚಿತ್ರರಂಗದಲ್ಲೂ ಕಾಸ್ಟಿಂಗ್ ಕೌಚ್ ಕುರಿತ ಚರ್ಚೆಗಳು ಮತ್ತೆ ಸದ್ದು ಮಾಡುವ ಸಾಧ್ಯತೆ ಇದೆ.
ಕನ್ನಡ ಇಂಡಸ್ಟ್ರಿಯಲ್ಲೂ ಕಾಸ್ಟಿಂಗ್ ಕೌಚ್ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ನಟಿ ರಾಧಿಕಾ ಕುಮಾರಸ್ವಾಮಿ, ನಾನು ಸಣ್ಣ ವಯಸ್ಸಿನಲ್ಲೇ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟೇ. ಚಿತ್ರರಂಗಕ್ಕೆ ಬಂದಾಗ ನಾನು ತುಂಬಾ ಚಿಕ್ಕವಳಾಗಿದ್ದ ಹಿನ್ನೆಲೆ ನಿರ್ದೇಶಕ-ನಿರ್ಮಾಪಕರು ಕೂಡ ಮಗಳಂತೆ ಕಾಣ್ತಿದ್ರು. ತಂಗಿಯಂತೆ ನೋಡಿಕೊಳ್ತಿದ್ರು ಎಂದು ನಟಿ ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.