ಹಳ್ಳಿ ಹುಡುಗಿಯಂತೆ ತುಳಸಿ ಪೂಜೆ ಆಚರಿಸಿಕೊಂಡ ರಾಧಿಕಾ ಪಂಡಿತ್, ಗಂಡನಿಂದ ಬಾರಿ ಮೆಚ್ಚುಗೆ

 | 
ರ

ಕರಾವಳಿ ಭಾಗದಲ್ಲಿ ಈ ತುಳಸಿ ಪೂಜೆ ಆಚರಣೆ ತಲೆತಲಾಂತರದಿಂದ ನಡೆದುಕೊಂಡು ಬಂದಿದೆ. ಶ್ರಾವಣ ಮಾಸದಲ್ಲಿ ಮುತ್ತೈದೆಯರು ಅದರಲ್ಲಿಯೂ ವಿಶೇಷವಾಗಿ ನವವಿವಾಹಿತರು ಚೂಡಿ ಪೂಜೆ ಸಲ್ಲಿಸುತ್ತಾರೆ.ಶ್ರಾವಣ ಮಾಸದಲ್ಲಿ ಪ್ರತಿ ಶುಕ್ರವಾರ ಹಾಗೂ ಭಾನುವಾರ ಈ ಪೂಜೆ ಮಾಡಲಾಗುತ್ತದೆ.

 ಅಂದು ಮನೆಯ ಮುಂದಿನ ತುಳಸಿ ಕಟ್ಟೆ, ಬಾವಿಯ ಕಟ್ಟೆ ಹಾಗೂ ಮನೆಯ ಹೊಸ್ತಿಲಿಗೆ ಪೂಜೆ ಸಲ್ಲಿಸುತ್ತಾರೆ. ಚೂಡಿ ಪೂಜೆ ಮಾಡಿದರೆ ವಿವಾಹಿತ ಮಹಿಳೆಯರಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಇಂತಹ ಚೂಡಿ ಪೂಜೆಯನ್ನ ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ನೆರವೇರಿಸಿದ್ದಾರೆ.

ಸ್ಯಾಂಡಲ್ವುಡ್  ಬ್ಯೂಟಿ ರಾಧಿಕಾ ಪಂಡಿತ್  ಸದ್ಯ ಚಿತ್ರರಂಗದಿಂದ ದೂರ ಸರಿದಿದ್ದರು ಕೂಡ ಅವರ ಮೇಲಿನ ಕ್ರೇಜ್ ಅಭಿಮಾನಿಗಳಿಗೆ ಇನ್ನೂ ಕಮ್ಮಿಯಾಗಿಲ್ಲ. ಮದುವೆ, ಸಂಸಾರ, ಮಕ್ಕಳು ಅಂತಾ ಬ್ಯೂಸಿಯಿದ್ದರು ಕೂಡ ಅಭಿಮಾನಿಗಳ ಜೊತೆ ಸದಾ ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕದಲ್ಲಿದ್ದಾರೆ. 

ನಟಿ ರಾಧಿಕಾ ಪಂಡಿತ್ ತಮ್ಮ ಮನೆಯ ಮುಂದಿರುವ ತುಳಸಿ ಕಟ್ಟೆಗೆ ಪೂಜೆ ಸಲ್ಲಿಸಿದರು. ಈ ಫೋಟೋವನ್ನ ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ವೇಳೆ ಸಂಪ್ರದಾಯಸ್ಥ ಗೃಹಿಣಿಯಾಗಿ ಕಂಗೊಳಿಸುತ್ತಿದ್ದ ರಾಧಿಕಾ ಪಂಡಿತ್ ಮಕ್ಕಳೊಂದಿಗೆ ಮನೆಯಲ್ಲಿ  ಈ ಸಲದ ಚೂಡಿ ಪೂಜೆಯನ್ನ ಆಚರಿಸಿದ್ದಾರೆ. ಇನ್ನು ಅದರ ಫೋಟೋಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.