ವಯಸ್ಸು 40 ಆದರೂ ಕೂಡ ಡಿಸ್ಕೋ ಡ್ಯಾನ್ಸ್ ಮಾಡಿದ ರಾಧಿಕಾ ಪಂಡಿತ್

 | 
ೀುುುಪಹ

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್​ ಇತ್ತೀಚೆಗಷ್ಟೇ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ತಮ್ಮ ಮಗಳ ಐದನೇ ವರ್ಷದ ಬರ್ತ್‌ಡೇ ಪಾರ್ಟಿಯನ್ನ ಗ್ರ್ಯಾಂಡ್‌ ಆಗಿ ಸೆಲೆಬ್ರೇಟ್ ಮಾಡಿದ್ದಾರೆ. ಯಶ್ ಹಾಗೂ ರಾಧಿಕಾ ಪಂಡಿತ್​ ಮಗಳು ಐರಾ ಬರ್ತ್​ ಡೇ ಸೆಲೆಬ್ರೇಷನ್​ ಅದ್ದೂರಿಯಾಗಿ ನಡೆಯಿತು. ಐರಾಸ್​ ವಿಂಟರ್ ಲ್ಯಾಂಡ್ ಥೀಮ್​ನಲ್ಲಿ ಹುಟ್ಟುಹಬ್ಬವನ್ನು ಆಚರಿಸಲಾಯ್ತು.

ಅದರ ಬೆನ್ನಲ್ಲೇ ಈ ಹಿಂದೆ ರಾಧಿಕಾ ಐರಾ ಮಾಡಿದ ಡ್ಯಾನ್ಸ್ ಒಂದು ಎಲ್ಲರ ಗಮನ ಸೆಳೆದಿದೆ.ಮಗಳ ದಿನದಂದು ಸ್ಯಾಂಡಲ್ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್  ತಮ್ಮ ಪುತ್ರಿ ಐರಾಳ ಫೋಟೋ ಹಂಚಿಕೊಂಡು ಸುಂದರವಾದ ಸಾಲುಗಳನ್ನು ಬರೆದುಕೊಂಡಿದ್ದಾರೆ. ನಮ್ಮೆಲ್ಲರ ನಗುವಿಗೆ ನೀನೇ ಕಾರಣ ಕಂದ ಎಂದು ಮಗಳ ಗುಣಗಾನ ಮಾಡಿದ್ದಾರೆ.

ಅದೇ ರೀತಿ ರಾಧಿಕಾ ಪಂಡಿತ್ ಮಗಳ ಮುದ್ದಾದ ಎರಡು ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಐರಾ ನಗುತ್ತಿದ್ರೆ, ಮತ್ತೊಂದರಲ್ಲಿ ಅಮ್ಮನ ಜೊತೆ ಸೆಲ್ಫಿಗೆ ಫೋಸ್ ಕೊಟ್ಟಿದ್ದಾರೆ. ಸಿನಿಮಾದಿಂದ ಬ್ರೇಕ್ ಪಡೆದುಕೊಂಡಿರುವ ರಾಧಿಕಾ ಪಂಡಿತ್, ಮಕ್ಕಳ ಲಾಲನೆ-ಪಾಲನೆಯಲ್ಲಿ ತೊಡಗಿಕೊಂಡಿದ್ದಾರೆ. ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ರಾಧಿಕಾ ಮುದ್ದು ಮಕ್ಕಳ ಕ್ಯೂಟ್ ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಚಂದನವನದ ಎವರ್​ಗ್ರೀನ್​ ಬ್ಯೂಟಿಫುಲ್​ ನಟಿ ರಾಧಿಕಾ ಪಂಡಿತ್​. ಇವರು ಕೆಲವು ವರ್ಷಗಳಿಂದ ಸಿನಿ ರಂಗದಿಂದ ದೂರವೇ ಉಳಿದಿದ್ದಾರೆ. ಹಾಗಂತ ಅಭಿಮಾನಿಗಳಿಗೆ ರಾಧಿಕಾ ಮೇಲಿನ ಕ್ರೇಜ್​ ಕಮ್ಮಿಯಾಗಿಲ್ಲ. ಸ್ಯಾಂಡಲ್​ವುಡ್​ ರಾಕಿಂಗ್​ ಸ್ಟಾರ್​ ಯಶ್​ ಅವರನ್ನು ಮದುವೆಯಾದಾಗಿನಿಂದ ಸಂಸಾರ, ಮಕ್ಕಳು ಅಂತ ಫುಲ್​ ಬ್ಯುಸಿಯಾಗಿದ್ದಾರೆ. 

ಆದರೆ ತಮ್ಮ ಫ್ಯಾನ್ಸ್​ ಜೊತೆ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕದಲ್ಲಿದ್ದಾರೆ. ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳಿಗೆ ಟ್ರೀಟ್​ ನೀಡುತ್ತಿರುತ್ತಾರೆ. ಈದೀಗ ಮಗಳೊಂದಿಗೆ ಹೆಜ್ಜೆ ಹಾಕಿದ ವೀಡಿಯೊ ಹಂಚಿಕೊಂಡು ಸಂಭ್ರಮಿಸಿದ್ದಾರೆ.