ಯಶ್ ರವರ ನೂರಾರು ಕಾರುಗಳಿಗೆ ಪೂಜೆ ಮಾಡಿದ ರಾಧಿಕಾ ಪಂಡಿತ್ ಮಕ್ಕಳು
Oct 14, 2024, 16:51 IST
|

ಯಾವುದೇ ಹಬ್ಬವಾದ್ರೂ ನಟ ಯಶ್ ಫ್ಯಾಮಿಲಿ ಸಂಭ್ರಮದಿಂದ ಆಚರಿಸುತ್ತದೆ. ಆಯುಧ ಪೂಜೆಯಲ್ಲಿ ಯಶ್ ಮಕ್ಕಳು ಕಾರಿಗೆ ಪೂಜೆ ಮಾಡ್ತಿರುವ ಫೋಟೋವನ್ನು ನಟಿ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ ಸ್ಟೋರಿಸ್ನಲ್ಲಿ ರಾಧಿಕಾ ಪಂಡಿತ್ ಮನೆಯಲ್ಲಿ ಆಯುಧ ಪೂಜೆ ಮಾಡಿದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಫೋಟೋಗಳಲ್ಲಿ ಯಶ್ ಮಕ್ಕಳಾದ ಐರಾ ಹಾಗೂ ಯಥರ್ವ್ ಕಾರಿಗೆ ಪೂಜೆ ಮಾಡುತ್ತಿರುವುದನ್ನು ಕಾಣಬಹುದಾಗಿದೆ.
ಮತ್ತೊಂದು ಫೋಟೋದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಮುದ್ದಾದ ಮಕ್ಕಳು ತಮ್ಮ ಸೈಕಲ್ಗೂ ಪೂಜೆ ಸಲ್ಲಿಸಿ ಅದೇ ಸೈಕಲ್ ಮೇಲೆ ಕುಳಿತು ಫೋಟೋಗೆ ಪೋಸ್ ಕೊಟ್ಟಿದ್ದಾರೆ.ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ರಾಧಿಕಾ ಪಂಡಿತ್ ಅವರು ಆಗಾಗ ಫ್ಯಾಮಿಲಿ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡುತ್ತಿರುತ್ತಾರೆ.
ಮಗಳೊಂದಿಗೂ ಫೋಟೋಸ್ ಹಾಕುತ್ತಾರೆ.ಕೆಜಿಎಫ್: ಚಾಪ್ಟರ್ 2 ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆದ ಬಳಿಕ ಅವರ ಡಿಮ್ಯಾಂಡ್ ಹೆಚ್ಚಿದೆ. ಅನೇಕ ಪ್ರತಿಷ್ಠಿತ ಬ್ರ್ಯಾಂಡ್ಗಳಿಗೆ ರಾಯಭಾರಿ ಆಗಿರುವ ಅವರು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಅದಕ್ಕೆ ತಕ್ಕಂತೆ ಅವರ ಲೈಫ್ಸ್ಟೈಲ್ ಕೂಡ ಬದಲಾಗಿದೆ. ಈಗ ಯಶ್ ಮನೆಯಲ್ಲಿ ಕೆಲವು ಐಷಾರಾಮಿ ಕಾರುಗಳಿವೆ.
ಅದರಲ್ಲಿ ರೇಂಜ್ ರೋವರ್ ,ಮರ್ಸಿಡಿಸ್ ಬೆಂಝ್ DLS 350D,ಮರ್ಸಿಡಿಸ್ ಜಿಎಲ್‌ಸಿ 250ಡಿ ಕೂಪೆ,ಆಡಿ Q7 ಸಹ ಸೇರಿವೆ. ಇನ್ನು ನಟಿ ರಾಧಿಕಾ ಪಂಡಿತ್ ಸಿನಿಮಾದಿಂದ ದೂರವಿದ್ದರೆ ನಟ ಯಶ್ ಟಾಕ್ಸಿಕ್ ಸಿನಿಮಾ ಶೂಟಿಂಗ್ ಅಲ್ಲಿ ಬ್ಯೂಸಿ ಆಗಿದ್ದಾರೆ.ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ಒಂದು ಟೀಸರ್ ಅಪ್ಲೋಡ್ ಮಾಡಿದ್ದಾರೆ. ಈ ಮೂಲಕ ತಮ್ಮ ಮುಂದಿನ ಸಿನಿಮಾ ಟೈಟಲ್ ಟಾಕ್ಸಿಕ್ ಎಂದು ನಟ ಯಶ್ ರಿವೀಲ್ ಮಾಡಿ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿಸಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.