'ಯುವ ಅಪ್ಪು ಮಗ ಎಂದ ರಾಘವೇಂದ್ರ ರಾಜ್ಕುಮಾರ್; ಓಮ್ಮೆಲೆ ಸಿಡಿದೆದ್ದ ಮೇಡಂ

 | 
Jjj

ರಾಜ್‌ ಕುಟುಂಬಕ್ಕೂ ಹೊಸಪೇಟೆಗೂ ಅವಿನಾಭಾವ ನಂಟು. ಅದರಲ್ಲೂ ಪುನೀತ್‌ ರಾಜ್‌ಕುಮಾರ್‌ ಅವರ ಉಕ್ಕಿನ ಕೋಟೆ ಎಂದೇ ಫೇಮಸ್. ಆ ಮಟ್ಟದ ಅಭಿಮಾನಿ ಬಳಗ ಅಲ್ಲಿದೆ. ಇದೀಗ ಅದೇ ಕೋಟೆಯಲ್ಲಿ ಯುವ ಸ್ತುತಿ ಮೊಳಗಿದೆ. ಅಂದರೆ, ಯುವ ರಾಜ್‌ಕುಮಾರ್‌ ನಾಯಕನಾಗಿ ನಟಿಸಿರುವ ಚೊಚ್ಚಿಲ ‘ಯುವ’ ಚಿತ್ರದ ಬಿಡುಗಡೆ ಪೂರ್ವ ಅದ್ಧೂರಿ ಕಾರ್ಯಕ್ರಮ ಹೊಸಪೇಟೆಯಲ್ಲಿ ನಡೆದಿದೆ.

ಶನಿವಾರ ರಾತ್ರಿ ಬೃಹತ್‌ ವೇದಿಕೆ ಮೇಲೆ, ಕಲರ್‌ಫುಲ್‌ ಇವೆಂಟ್‌ ನಡೆದಿದೆ. ಯುವನ ನೆಪದಲ್ಲಿ ಅಪ್ಪುನ ಸ್ಮರಣೆಯೂ ಆಗಿದೆ. ಸಂತೋಷ್‌ ಆನಂದ್‌ ರಾಮ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಯುವ ಸಿನಿಮಾ ಮಾ. 29ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಹೊಂಬಾಳೆ ಫಿಲಂಸ್‌ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಬಹುತಾರಾಗಣದ ಚಿತ್ರದ ಪ್ರೀ ರಿಲೀಸ್‌ ಇವೆಂಟ್‌ನಲ್ಲಿ ರಾಜ್‌ ಕುಟುಂಬದ ಬಹುತೇಕರು ಭಾಗವಹಿಸಿದ್ದು, ವಿಶೇಷವಾಗಿತ್ತು. 

ಅದರಲ್ಲೂ ರಾಘವೇಂದ್ರ ರಾಜ್‌ಕುಮಾರ್‌, ಪುತ್ರನ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದರು. ಯುವ ನನ್ನ ಮಗನಲ್ಲ, ಅಪ್ಪುನ ಮಗ. ಅಪ್ಪು ಮಗನಾಗಿ ನಿಮ್ಮ ಮಡಿಲಿಗೆ ಅವನನ್ನು ಹಾಕುತ್ತಿದ್ದೇನೆ ಎಂದರು. ಮಗನ ಚೊಚ್ಚಿಲ ಸಿನಿಮಾ ಬಗ್ಗೆ ಮಾತನಾಡಿದ ರಾಘಣ್ಣ, ಇಲ್ಲೆಲ್ಲೋ ಅಪ್ಪು ಕೂತಿದ್ದಾನೆ. ಕೂತು ಈ ಕಾರ್ಯಕ್ರಮ ನೋಡುತ್ತಿದ್ದಾನೆ ಅನ್ಸುತ್ತೆ. ಅವ್ನು ಹುಟ್ಟಿದ್ದು ಹೊಸಪೇಟೆಯಲ್ಲಿ, ಬೆಳೆದಿದ್ದು ಚಿತ್ರರಂಗದಲ್ಲಿ ಅನ್ಸುತ್ತೆ. 

ಹೊಟೇಲ್‌ನಿಂದ ಹೊರಡುವಾಗ ಹೆಂಡ್ತಿ ಹೇಳಿದ್ಲು, ನನಗೆ ಮಗನ ಸಿನಿಮಾ ಫಂಕ್ಷನ್‌ಗೆ ಹೋಗ್ತಿದಿನಿ ಅಂತ ಅನಸ್ತಾನೇ ಇಲ್ಲ ರೀ. ಅಪ್ಪು ಫಕ್ಷನ್‌ಗೆ ಹೋಗ್ತಿದಿನಿ ಅಂತ ಅನಿಸ್ತಿದೆ ಅಂತ ಅಂದ್ಲು. ನನಗೆ ಈಗಲೂ ಹಾಗೇ ಅನಿಸ್ತಿದೆ. ಅವನು  ಏನು ಮಾಡಿಬಿಟ್ಟು ಹೋಗಿದ್ದಾನೆ ನೋಡಿ?ಅವನು ಹೋಗೋಕೂ ಒಂದು ವಾರ ಮುಂಚೆ, ನನ್ನ ಬಳಿ ಬಂದು, ರಾಘಣ್ಣ ನಿಮಗೊಂದು ನೋವಿರುತ್ತೆ. ಶಿವಣ್ಣನನ್ನು ಅಮ್ಮ ವಜ್ರೇಶ್ವರಿ ಕಂಬೈನ್ಸ್‌ನಿಂದ ಪರಿಚಯಿಸಿದ್ರು.

 ನೀವು ಪರಿಚಯಗೊಂಡ್ರಿ. ನಾನೂ ಅದೇ ಬ್ಯಾನರ್‌ನಿಂದ ಬಂದೆ. ವಿನಯ್‌ನೂ ಬಂದ. ಗುರೂಗೆ ನೀವು ಮಾಡಬೇಡಿ ರಾಘಣ್ಣ, ನಿಮ್ಮ ಕೈಲಿ ತಡ್ಕೊಳ್ಳೊಕೆ ಆಗಲ್ಲ. ಒಳ್ಳೆ ಪ್ರೊಡಕ್ಷನ್‌ ಇದ್ರೆ ನಾನೇ ಹೇಳ್ತಿನಿ ಅಂದು, ಹೊಂಬಾಳೆ ಫಿಲಂಸ್‌ ಹತ್ರ ಮಾಡ್ಸಿ. ನೀವು ಹಾಯಾಗಿ ಚೇರ್‌ ಮೇಲೆ ಕೂತ್ಕೊಂಡು ಸಿನಿಮಾನ ಎಂಜಾಯ್‌ ಮಾಡಿ.

ಆಗ ಭಾವುಕರಾದ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು. ಯುವ ಅಪ್ಪುವಿನ ಮಗನಿದ್ದ ಹಾಗೆ. ಪುನಿತ್ ಯುವನ ಜೊತೆ ಬಹಳ ಸಮಯ ಕಳೆದಿದ್ದಾರೆ. ಒಂದಿಷ್ಟು ನಟನೆಯ ಟ್ರಿಕ್ಸ್ ಹೇಳಿ ಕೊಟ್ಟಿದ್ದಾರೆ. ಖಂಡಿತವಾಗಿ ಅಪ್ಪುವಿನ ಹೆಸರನ್ನು ಉಳಿಸುತ್ತಾನೆ ಎಂಬ ನಂಬಿಕೆ ನನಗಿದೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.