ಪತ್ನಿ ‌ಸಾ.ವಿನ ಬಳಿಕ ಸಿನಿಮಾ ಮಂದಿರಕ್ಕೆ ಬಂದು ಒಂಟಿಯಾಗಿ ಕಣ್ಣೀರು ಹಾಕಿದ ರಾಘು

 | 
ರಮ

ಸ್ಯಾಂಡಲ್‌ವುಡ್‌ ನಟ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ ರಾಘವೇಂದ್ರ ನಿಧನರಾಗಿ ಒಂದು ತಿಂಗಳೇ
ಕಳೆಯುತ್ತ ಬಂತು. ಇಂದಿಗೂ ಆ ಎರಡೂ ಕುಟುಂಬಗಳಲ್ಲಿ ಕಣ್ಣೀರು ನಿಂತಿಲ್ಲ. ಅಲ್ಲಿ ಮಡುಗಟ್ಟಿದ ಮೌನ, ಉಮ್ಮಳಿಸಿ ಬರುವ ದುಃಖ ಕಡಿಮೆಯಾಗಿಲ್ಲ. ಎಲ್ಲಿ ನೋಡಿದರೂ ಸ್ಪಂದನಾ ಅವರ ಆ ನಗು ಮೊಗವೇ ಕಾಣುತ್ತಿದೆ. ಆ ಕಣ್ಣೀರಿನಲ್ಲಿಯೇ 11ನೇ ದಿನದ ಕಾರ್ಯವೂ ಮುಗಿದಿದೆ. 

ಇದೀಗ ಪತ್ನಿಯ ನಿಧನದ ಬಳಿಕ ವಿಜಯ್‌ ರಾಘವೇಂದ್ರ ಮೊದಲ ಬಾರಿ ಸೋಷಿಯಲ್‌ ಮೀಡಿಯಾದಲ್ಲಿ ಮಡದಿಯನ್ನು ನೆನಪಿಸಿಕೊಂಡಿದ್ದಾರೆ. ವಿಜಯ್‌ ರಾಘವೇಂದ್ರ ಮತ್ತು ಸ್ಪಂದನಾ ಅವರದ್ದು ಪ್ರೇಮ ವಿವಾಹ. ಇಬ್ಬರದ್ದು ಅತೀ ಆತ್ಮೀಯ ಬಂಧ. ಇನ್ನೇನು ಕೆಲ ದಿನಗಳಲ್ಲಿ 16ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ತರಾತುರಿಯಲ್ಲಿತ್ತು ಈ ಮುದ್ದಾದ ಜೋಡಿ. 

ಆದರೆ ಅದ್ಯಾವ ಮಸಣೆ ಕಣ್ಣು ಬಿತ್ತೋ ಏನೋ, ಸ್ಪಂದನಾ ವಿದೇಶದಲ್ಲಿಯೇ ಹೃದಯಾಘಾತದಿಂದ ನಿಧನರಾದರು. ಅದಾದ ಬಳಿಕ ಕಂಡಿದ್ದು ಬರೀ ಕಣ್ಣೀರು. ಈ ಸಾವಿಗೆ ಯಾರ ಸಾಂತ್ವನವೂ ತಲುಪದು. ಕದ್ದ ಚಿತ್ರ' ಸಿನಿಮಾದಲ್ಲಿ ಕಾದಂಬರಿಗಾರನಾಗಿ ವಿಜಯ ರಾಘವೇಂದ್ರ ಕಾಣಿಸಿಕೊಳ್ಳುತ್ತಾರೆ. ಇಡೀ ಸಿನಿಮಾವನ್ನು ಇವರೇ ಆವರಿಸಿಕೊಂಡಿರುವುದು ಎದ್ದು ಕಾಣುತ್ತೆ. ಇದೇ ಮೊದಲ ಬಾರಿಗೆ ಇಂತಹ ಪಾತ್ರದಲ್ಲಿ ವಿಜಯ ರಾಘವೇಂದ್ರ ಕಾಣಿಸಿಕೊಂಡಿದ್ದು, ಇವರ ಪಾತ್ರ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ. 

ಆದರೆ, ನಾಯಕಿಯಾಗಿ ಕಾಣಿಸಿಕೊಂಡಿರುವ ನಮ್ರತಾ ಸುರೇಂದ್ರನಾಥ್ ಗಮನ ಸೆಳೆಯುತ್ತಾರೆ. ಈ ಸಿನಿಮಾದಲ್ಲಿ ನಾಯಕಿಯ ನಟನೆ ಚೆನ್ನಾಗಿದೆ. ಆದರೆ, ಸಿನಿಮಾದಲ್ಲಿ ಪರ್ಫಾಮ್ ಮಾಡುವುದಕ್ಕೆ ಇನ್ನೊಂದಿಷ್ಟು ಅವಕಾಶ ಕೊಡಬೇಕಿತ್ತು ಅಂತ ಅನಿಸುತ್ತೆ. ವಿಜಯ್ ರಾಘವೇಂದ್ರ ಎಷ್ಟೇ ಕಂಟ್ರೋಲ್ ಮಾಡಿಕೊಂಡರೂ, ಥಿಯೇಟರ್ ಅಲ್ಲಿ ಭಾವುಕರಾದರು. ಪತ್ನಿಯನ್ನು ನೆನೆದು ಅವರ ಕಣ್ಣುಗಳು ಒದ್ದೆಯಾದವು. ಕಣ್ಣೀರು ಹಾಕಬಾರದು ಅಂತ ನಿರ್ಧಾರ ಮಾಡಿಕೊಂಡು ಬಂದಿದ್ದೆ. 

ಯಾಕಂದ್ರೆ, ಅದು ಅವಳಿಗೆ ಇಷ್ಟ ಆಗುತ್ತಿರಲಿಲ್ಲ. ಈ ಚಿತ್ರತಂಡದ ಮೇಲೆ ಅವಳಿಗೆ ಪ್ರೀತಿಯಿತ್ತು. ವಿಶ್ವಾಸವಿತ್ತು. ಧೈರ್ಯ ಇತ್ತು. ನೀವೆಲ್ಲರೂ ಕೈ ಹಿಡಿದು ನಡೆಸಿದ್ದೀರಿ. ಮಾರ್ಗದರ್ಶನ ನೀಡಿದ್ದೀರಿ. ನನ್ನ ಕುಟುಂಬದಲ್ಲಿ ನೀವು ಒಬ್ಬರಿಗಿದ್ದಿರೋ ಇಲ್ಲವೋ ಗೊತ್ತಿಲ್ಲ. ಆದರೆ, ನಿಮ್ಮ ಕುಟುಂಬದಲ್ಲಿ ನನ್ನನ್ನು ಒಬ್ಬನಾಗಿ ಮಾಡಿಕೊಂಡಿದ್ರಿ. ಇದು ನನಗೆ ಬಹಳ ದೊಡ್ಡ ಆಸ್ತಿ.ಎಂದು ವಿಜಯ್ ರಾಘವೇಂದ್ರ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.