ಪತ್ನಿ ಸಾ.ವಿನ ಕೆಲವೇ ತಿಂಗಳುಗಳಲ್ಲಿ ಗುಡ್ ನ್ಯೂಸ್ ಕೊಟ್ಟ ರಾಘು, ಏನದು ಗೊತ್ತಾ
ಹೆಂಡತಿಯನ್ನು ಕಳೆದುಕೊಂಡು ಚಿನ್ನಾರಿ ಮುತ್ತ ಸಾಕಷ್ಟು ನೋವು ಅನುಭವಿಸಿದ್ದರು. ಬದುಕೇ ಬೇಡ ಎಂಬಂತೆ ಕುಳಿತಿದ್ದರು. ಆದರೆ ಇದೀಗ ಎಲ್ಲ ನೋವುಗಳನ್ನು ಮರೆತು ಮೊದಲಿನಂತಾಗಲು ಪ್ರಯತ್ನಿಸುತ್ತಿದ್ದಾರೆ. ಹೌದು ಇದೀಗ ನಟ ವಿಜಯ್ ರಾಘವೇಂದ್ರ ಕಿರುತೆರೆಯ ಜೊತೆ ಹಿರಿತೆರೆಯಲ್ಲೂ ಸಖತ್ ಆಕ್ಟೀವ್ ಆಗಿದ್ದಾರೆ.
ಇತ್ತೀಚೆಗೆ ಒಂದರ ಹಿಂದೊಂದರಂತೆ ಸಿನಿಮಾಗಳಿಗೆ ಸಹಿ ಹಾಕುತ್ತಿರುವ ವಿಜಯ್ ರಾಘವೇಂದ್ರ ಇದೀಗ ಮತ್ತೊಂದು ಸೈಕಲಾಜಿಕಲ್ ಥ್ರಿಲರ್ ಸಿನಿಮಾಗೆ ಸಹಿ ಮಾಡಿದ್ದಾರೆ. ಈಗಾಗ್ಲೆ ವಿಜಯ್ ರಾಘವೇಂದ್ರ ಸೈಕಾಲಜಿಕಲ್ ಕಥಾ ಹಂದರ ಹೊಂದಿರುವ ಸೀತಾರಾಮ್ ಬಿನೋಯ್ ಕೇಸ್ ನಂ 18 ಹಾಗೂ ಕೇಸ್ ಆಫ್ ಕೊಂಡಾಣ ಚಿತ್ರದಲ್ಲಿ ನಟಿಸಿರುವ ವಿಜಯ್ ರಾಘವೇಂದ್ರ ಇದೀಗ ಸಿದ್ಧ್ ರುವ್ ನಿರ್ದೇಶನದ ಸೈಕಲಾಜಿಕಲ್ ಸಿನಿಮಾ ಮರೀಚಿಯಲ್ಲಿ ಕಾಣಿಸಿಕೊಳ್ತಿದ್ದಾರೆ.
ಈ ಹಿಂದೆ ಬಾಲು ನಾಗೇಂದ್ರ ಹಾಗೂ ಸಂಗೀತಾ ಭಟ್ ನಟನೆಯ ಕಪಟ ನಾಟಕ ಪಾತ್ರಧಾರಿ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಸಿದ್ಧ್ ರುವ್ ಇದೇ ಮೊದಲ ಭಾರಿಗೆ ನಿರ್ದೇಶಕ್ಕೆ ಎಂಟ್ರಿಕೊಡ್ತಿದ್ದಾರೆ. ಮೊದಲ ಸಿನಿಮಾದಲ್ಲೇ ಸೈಕಲಾಜಿಕಲ್ ಕಥೆಯ ಹೊಂದಿರುವ ವಿಭಿನ್ನ ಕಾನ್ಸಪ್ಟ್ ನೊಂದಿಗೆ ಗಾಂಧಿನಗರಕ್ಕೆ ಎಂಟ್ರಿಕೊಡ್ತಿದ್ದಾರೆ.
ಚಿತ್ರದಲ್ಲಿ ವಿಜಯ್ ರಾಘವೇಂದ್ರಗೆ ಜೋಡಿಯಾಗಿ ನಟಿ ಸೋನು ಗೌಡ ಬಣ್ಣ ಹಚ್ಚುತ್ತಿದ್ದಾರೆ. ಬ್ರಹ್ಮ ದೇವರ ಮಗ ಮರೀಚಿ. ಒಳ್ಳೆಯದು ಹಾಗೂ ಕೆಟ್ಟದ್ದು ಎರಡಕ್ಕೂ ಮರೀಚಿ ಗಾಡ್ ಫಾದರ್ ಎಂದು ಪರಿಗಣಿಸಲಾಗಿದೆ. ಆ ಪರಿಕಲ್ಪನೆ ಸುತ್ತ ಕಥೆ ಹೆಣೆಯಲಾಗಿದೆ ಮರೀಚಿ ಕಥೆ ಹೆಣೆಯಲಾಗಿದ್ದು, ಎಸ್ ಎಸ್ ರೆಕ್ ಪ್ರೊಡಕ್ಷನ್ ಬ್ಯಾನಕ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.
ಒಟ್ಟಿನಲ್ಲಿ ಎಲ್ಲ ಮರೆತು ಮೊದಲಿನಂತಾಗಲು ವಿಜಯ್ ರಾಘವೇಂದ್ರ ಬಯಸಿದರೆ ಮಗ ಶೌರ್ಯ ಅಪ್ಪನ ಧೈರ್ಯ ಹಾಗೂ ವೃತ್ತಿಪರತೆಗೆ ಸಂತೋಷ ಪಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.