ಮುದ್ದಾದ ಪತ್ನಿಯ ಮುಖ ನೋಡಿ ಕಂಗಾಲಾದ ರಾಘು, ಹೆಂಡತಿ ಇನ್ನೂ ಜೀವಂತವಾಗಿದ್ದಾರೆ ಅಂತ ಅಂದುಕೊಂಡಿದ್ದಾರೆ ರಾಘು

 | 
Nd

ವಿಜಯ್ ರಾಘವೇಂದ್ರ ಅವರು ಪತ್ನಿ ಅಗಲಿದ ನಂತರ ಮೊದಲ ಪೋಸ್ಟ್ ಶೇರ್ ಮಾಡಿದ್ದಾರೆ. ನಟ ಸ್ಪಂದನಾ ಫೋಟೋ ನೋಡಿ ಪತ್ನಿಯನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ. ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಮೃತಪಟ್ಟು ಆಗಸ್ಟ್ 18ಕ್ಕೆ 13 ದಿನಗಳಾಗಿವೆ. 11ನೇ ದಿನದ ಉತ್ತರ ಕ್ರಿಯೆಯನ್ನೂ ಮುಗಿಸಿ ಅನ್ನದಾನವನ್ನೂ ಮಾಡಲಾಗಿತ್ತು. ಇದೀಗ ಪತ್ನಿ ಅಗಲಿದ ನಂತರ ವಿಜಯ್ ರಾಘವೇಂದ್ರ ಮೊದಲ ಪೋಸ್ಟ್ ಶೇರ್ ಮಾಡಿದ್ದಾರೆ.

ಪತ್ನಿಯ ಅಂತ್ಯಸಂಸ್ಕಾರ ದಿನ ಸಂಪೂರ್ಣವಾಗಿ ಸೋತುಹೋಗಿದ್ದ ವಿಜಯ್ ರಾಘವೇಂದ್ರ ಅವರು ಮಗನಿಗೂ ಸಾಂತ್ವನ ಹೇಳುತ್ತಾ ತಮ್ನನ್ನು ತಾವು ಕಷ್ಟಪಟ್ಟು ಸುಧಾರಿಸಿಕೊಂಡಿದ್ದರು. ಇದೀಗ 13ನೇ ದಿನ ಪತ್ನಿ ಬಗ್ಗೆ ಇನ್​ಸ್ಟಾಗ್ರಾಮ್ ಪೋಸ್ಟ್ ಹಾಕಿದ್ದಾರೆ.
ನಿನ್ನನ್ನೇ ಉಸಿರಾಡುತ್ತಿರುವ ಚಿನ್ನ ಎಂದು ವಿಜಯ್ ರಾಘವೇಂದ್ರ ಪೋಸ್ಟ್​ಗೆ ಕ್ಯಾಪ್ಶನ್ ಬರೆದು ಪತ್ನಿ ಸ್ಪಂದನಾ ಬಗ್ಗೆ ಕೆಲವೊಂದು ಸಾಲುಗಳನ್ನು ಬರೆದು ಅವುಗಳಿಗೆ ಧ್ವನಿ ಕೊಟ್ಟಿದ್ದಾರೆ.

ಸ್ಪಂದನ, ಹೆಸರಿಗೆ ತಕ್ಕ ಜೀವ, ಉಸಿರಿಗೆ ತಕ್ಕ ಭಾವ, ಅಳತೆಗೆ ತಕ್ಕ ನುಡಿ, ಬದುಕಿಗೆ ತಕ್ಕ ನಡೆ ನಮಗೆಂದೇ ಮಿಡಿದೆ ನಿನ್ನ ಹೃದಯವ, ನಿಲ್ಲದು ನಿನ್ನೊಂದಿಗಿನ ಕಲರವ, ನಾನೆಂದೂ ನಿನ್ನವನು ಕೇವಲ ನಿನ್ನವನು, ಚಿನ್ನ ಎಂದು ಬರೆದಿದ್ದಾರೆ ವಿಜಯ್ ರಾಘವೇಂದ್ರ.
ನಟ ವಿಜಯ್​ ರಾಘವೇಂದ್ರ ಅನೇಕ ಕಾರ್ಯಕ್ರಮಗಳಲ್ಲಿ ಪತ್ನಿ ಬಗ್ಗೆ ಮಾತಾಡಿದ್ದಾರೆ. 

ಬಿಗ್ ಬಾಸ್​ ಮೊದಲ ಸೀಸನ್​ನಲ್ಲಿ ಪತ್ನಿಯ ಬಗ್ಗೆ ಕೊಂಡಾಡಿದ್ದರು. ನನ್ನ ಜೀವ ಎಂದಿದ್ದರು ಇದೀಗ ಅವರೇ ಇಲ್ಲವಾಗಿ ವಿಜಯ್ ರಾಘವೇಂದ್ರ ಬದುಕು ಬೇಸರ ಮೂಡುವಂತೆ ಮಾಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.