ಪತ್ನಿಯ ಮುಂದೆ ಒಂಟಿಯಾಗಿ ಕೂತ ರಾಘು, ಮಡದಿ ಇಲ್ಲ ಎಂಬ ನೋವು ಎದ್ದು ಕಾಣುತ್ತಿದೆ

 | 
Bd

ನಟ ವಿಜಯ್ ರಾಘವೇಂದ್ರ ಅವರು ತಮ್ಮ ಪತ್ನಿಯ ಅಗಲಿಕೆಯ ನೋವಿನಲ್ಲಿದ್ದಾರೆ. ಸ್ಪಂದನ ಅಕಾಲಿಕ ಮರಣಕ್ಕೆ ಚಿತ್ರರಂಗದವರು ಸೇರಿದಂತೆ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಪ್ರೆಂಡ್ಸ್‌ ಜೊತೆ ಬ್ಯಾಂಕಾಕ್‌ ಗೆ ತೆರಳಿದ್ದ ಸ್ಪಂದನಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮೊನ್ನೆ ಸಂಜೆ ವಿಜಯ್‌ ಪತ್ನಿ ಸ್ಪಂದನಾ ಅವರಿಗೆ ಲೋ BP ಆಗಿದ್ದು, ಅವರು ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ. 

ಚಿಕಿತ್ಸೆ ಪಡೆದು ರಾತ್ರಿ ಊಟ ಮಾಡಿ ಮಲಗಿದ್ದಾಗ ಹೃದಯಾಘಾತವಾಗಿ ಇಹಲೋಕ ತ್ಯಜಿಸಿದ್ದಾರೆ ಎಂದು ಕೆಲವು ಮೂಲಗಳಿಂದ ತಿಳಿದುಬಂದಿದೆ. ವಿಜಯ್‌ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರ ಸಾವಿನ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಅಷ್ಟಕ್ಕೂ ಸ್ಪಂದನ ಅವರಿಗೆ ಹೃದಯಾಘಾತ ಯಾವ ಕಾರಣಕ್ಕೆ ಸಂಭವಿಸಿರಬಹುದು..? ಆರೋಗ್ಯವಾಗಿ ಇದ್ದ ಸ್ಪಂದನ ಅವರ ಅಕಾಲಿಕ ಮರಣ ಎಲ್ಲರಿಗೂ ಘಾಸಿಯನ್ನುಂಟು ಮಾಡಿದೆ. ಸದ್ಯ ಸ್ಪಂದನ ಸಾವಿನ ಹಿಂದಿನ ಘಟನೆಯ ಬಗ್ಗೆ ಮಾಹಿತಿ ತಿಳಿಯಲು ಎಲ್ಲರೂ ಕಾಯುತ್ತಿದ್ದಾರೆ. 

ವಿಜಯ್‌ ಅವರ ಪತ್ನಿ ಸ್ಪಂದನಾ ಅವರಿಗೆ ಹೃದಯಾಘಾತ ಹೇಗೆ ಸಂಭವಿಸಿರಬಹುದು ಎಂಬುದರ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ವಿಜಯ್‌ ಪತ್ನಿ ತೂಕ ಇಳಿಸಿಕೊಳ್ಳಲು ಜಿಮ್‌ ಮಾಡುತ್ತಿದ್ದರು ಎನ್ನುವುದು ಕೆಲವು ವರದಿಗಳಿಂದ ತಿಳಿದು ಬಂದಿದೆ. ಹೌದು ಲಾಕ್‌ಡೌನ್‌ ಸಮಯದಲ್ಲಿ ದಪ್ಪಗಾಗಿದ್ದ ಸ್ಪಂದನಾ ಅವರು ತೂಕ ಇಳಿಸಿಕೊಳ್ಳಲು ಜಿಮ್‌, ಡಯೆಟ್‌ ಮಾಡುತ್ತಿದ್ದರು. 

ಈ ಮೂಲಕವೇ 16 ಕೆಜಿ ತೂಕ ಕಡಿಮೆಮಾಡಿಕೊಂಡಿದ್ದರು. ಇದೇ ಅವರ ಹೃದಯಾಘತಕ್ಕೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ. ಅವರ ಆಹಾರಪದ್ಧತಿ ಹೀಗಾಗಲು ಕಾರಣ ಎಂಬ ಮಾತು ಕೇಳಿ ಬರುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.